ಕಲಬುರಗಿ: ಭಾರತದ ಇತಿಹಾಸದಲ್ಲಿ ಲಂಬಾಣಿ ಸಮುದಾಯದ ಮಗನೊಬ್ಬನನ್ನು ದೆಹಲಿಗೆ ಕಳುಹಿಸಿಕೊಡುವ ಮೂಲಕ ಸಂಸತ್ತಿನಲ್ಲಿದ್ದುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆ ದೇಶ ಸೇವೆ ಮಾಡುವ ಸುವರ್ಣ ಅವಕಾಶ ಈ ಚುನಾವಣೆಯಲ್ಲಿ ಮತ್ತೊಮ್ಮೆ ಲಭಿಸಿರುವುದು ಬಂಜಾರಾ ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಇದಕ್ಕೆ ಬಂಜಾರ ಸಮುದಾಯವು ಈ ಬಾರಿ ಬಿಜೆಪಿಗೆ ಮತ ಹಾಕಲು ನಿರ್ಣಯ ಕೈಗೊಳ್ಳಲಾಯಿತು.
ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರ ನಿವಾಸದಲ್ಲಿ ಮಾರ್ಚ್ ನಾಲ್ಕರಂದು ನಡೆದ ಕಲ್ಬುರ್ಗಿ ಜಿಲ್ಲೆಯ ಬಂಜಾರ ಸಮುದಾಯದ ಪ್ರಮುಖರ ಸಭೆಯಲ್ಲಿ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಈ ನಿರ್ಣಯ ಕೈಗೊಂಡರು. ಡಾ. ಉಮೇಶ್ ಜಾಧವ್ ತಮ್ಮ ಐದು ವರ್ಷಗಳ ಅವಧಿಯಲ್ಲಿ ಜನ ಮೆಚ್ಚುವ ಕೆಲಸ ಮಾಡಿ ಬಂಜಾರಾ ಸಮುದಾಯದ ಗೌರವಕ್ಕೆ ಪಾತ್ರರಾಗಿದ್ದಾರೆ. ನೂರಾರು ಕೆಲಸಗಳನ್ನು ಮಾಡಿ ಜನ ಪ್ರೀತಿಗೆ ಪಾತ್ರರಾಗಿದ್ದಾರೆ.
ಸರ್ವ ಜಾತಿಯವರ ಸಹಕಾರದಿಂದ ಲಂಬಾಣಿ ಸಮುದಾಯದ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಿ ಕಳುಹಿಸಿ ರಾಷ್ಟ್ರಕ್ಕೆ ಹೆಮ್ಮೆ ಬರುವ ಹಾಗೆ ಕೆಲಸವನ್ನು ಮಾಡುವ ಅವಕಾಶ ನೀಡಿದ್ದು ಇದೀಗ ಮತ್ತೆ ಎರಡನೇ ಬಾರಿಗೆ ಆಯ್ಕೆ ಮಾಡಿ ಕಳುಹಿಸಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಯಾಗುವುದಲ್ಲದೆ ಎರಡನೇ ಬಾರಿಗೆ ಡಾ. ಉಮೇಶ್ ಜಾಧವ್ ಲೋಕಸಭಾ ಸದಸ್ಯರಾಗಿ ಆಯ್ಕೆ ಹೊಂದುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಲಂಬಾಣಿ ಸಮುದಾಯದವರು ಯಾವುದೇ ಆಮಿಷಗಳಿಗೆ ಮತ್ತು ನಕಲಿ ನಾಯಕರ ಮಾತುಗಳಿಗೆ ಮರುಳಾಗಬಾರದು. ರಾಷ್ಟ್ರದ ಮತ್ತು ಕಲ್ಬುರ್ಗಿಯ ಹಿತ ದೃಷ್ಟಿಯಿಂದ ಲಂಬಾಣಿಗರು ಒಟ್ಟಾಗಿ ಕಮಲದ ಗುರುತಿಗೆ ಮತ ನೀಡಿ ಗೆಲ್ಲಿಸುವುದರ ಮೂಲಕ ಮನೆಯ ಮಗನೊಬ್ಬನನ್ನು ಲೋಕಸಭೆಗೆ ಕಳುಹಿಸಿಕೊಡುವ ಈ ಮಹತ್ವದ ಚುನಾವಣೆಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಪ್ರಮುಖರು ಕರೆ ನೀಡಿದರು.
ತಾಂಡಾಗಳ ಅಭಿವೃದ್ಧಿ ಮಾಡಿರುವುದಾಗಿ ಸುಳ್ಳು ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸಿ ಜಾಧವ್ ಕೆಲಸ ಕಾರ್ಯಗಳಿಗೆ ಮುದ್ರೆಯೊತ್ತಬೇಕು ಎಂದು ಹೇಳಿದರು. ಕಲ್ಬುರ್ಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಲಂಬಾಣಿಗರು ಒಗ್ಗಟ್ಟಿನಿಂದ ಈ ಬಾರಿ ಬಿಜೆಪಿಗೆ ಮತ ನೀಡಿ ಆಯ್ಕೆ ಮಾಡುವುದರ ಮೂಲಕ ಜನಾಂಗದ ಭವಿಷ್ಯವನ್ನು ಉಜ್ವಲವಾಗಿಸಲು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಮುಖರು ಹೇಳಿದರು.
ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಮಳಖೇಡ ಸ್ವತಹ ಪ್ರಧಾನಿ ಮೋದಿಯವರು ಆಗಮಿಸಿ ಅದನ್ನು ಉದ್ಘಾಟಿಸಿ ಸಮುದಾಯಕ್ಕೆ ಶಕ್ತಿಯನ್ನು ತುಂಬಿದ ಕಾರ್ಯದಲ್ಲಿ ಡಾ. ಉಮೇಶ್ ಜಾಧವ್ ಅವರ ಕೊಡುಗೆ ಅವಿಸ್ಮರಣೀಯ. ಬಂಜಾರಾ ಸಮುದಾಯ ಭವನಗಳು,ನಿವೇಶನಗಳು, ದೆಹಲಿಯಲ್ಲಿ ಬಂಜಾರಾ ಸಮಾವೇಶಗಳನ್ನು ಮಾಡಿ ರಾಷ್ಟ್ರಕ್ಕೆ ಬಂಜಾರ ಸಂಸ್ಕೃತಿ ಪರಿಚಯಿಸಿದ ಜಾಧವ್ ಕೆಲಸ ಕಾರ್ಯಗಳು ಲಂಬಾಣಿಗರಿಗೆ ಚಿರಪರಿಚಿತ. ಅದಕ್ಕಾಗಿ ಮತ್ತೊಮ್ಮೆ ಲೋಕಸಭೆಗೆ ಕಳಿಸುವ ಜವಾಬ್ದಾರಿ ಬಂಜಾರ ಸಮುದಾಯದ ಮೇಲಿದೆ ಎಂದು ನಾಯಕರು ಆಹ್ವಾನ ನೀಡಿದರು.
ಬಂಜಾರ ಸಮುದಾಯಕ್ಕೆ ಲೋಕಸಭಾ ಸ್ಥಾನ ನೀಡಿದ್ದು ಬಿಜೆಪಿ: ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಬಿಜೆಪಿ ಮಾತ್ರ ಉತ್ತಮ ಅವಕಾಶಗಳನ್ನು ನೀಡಿದೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷ ಬಿಜೆಪಿಯಾಗಿದ್ದು ಕಾಂಗ್ರೆಸ್ಸಿಗರು ಒಂದೇ ಒಂದು ಲೋಕಸಭಾ ಸ್ಥಾನವನ್ನು ನೀಡದೆ ಕೇವಲ ಓಟಿಗಾಗಿ ಮಾತ್ರ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿಯು ಕಲಬುರ್ಗಿ ಕ್ಷೇತ್ರವನ್ನು ಲಂಬಾಣಿ ಸಮುದಾಯಕ್ಕೆ ನೀಡಿದ್ದು ಈ ಹಿಂದೆ ಎರಡು ಬಾರಿ ರೇವು ನಾಯಕ್ ಬೆಳಮಗಿಯವರಿಗೆ ಬಿಜೆಪಿ ಅವಕಾಶ ನೀಡಿದರರೂ ಸ್ವಯಂಕೃತ ಅಪರಾಧದಿಂದ ಅವರು ಪಕ್ಷ ಬಿಟ್ಟು ದುಸ್ಥಿತಿಗೆ ಮರಳಿದ್ದಾರೆ. ಲಂಬಾಣಿ ಸಮುದಾಯದವರು ಜಾಗೃತರಾಗಿ ಜಾಧವ್ ಅವರಿಗೆ ಅತ್ಯಧಿಕ ಮತಗಳನ್ನು ನೀಡಿ ಸಂಸತ್ತಿಗೆ ಕಳುಹಿಸುವ ಗುರುತರ ಹೊಣೆಯನ್ನು ಹೊರಬೇಕಾಗಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಲ್ಬುರ್ಗಿಯನ್ನು ಅಭಿವೃದ್ಧಿಯ ಪಥದತ್ತ ಸಾಗುವಂತೆ ಮಾಡಿದ ಜಾಧವ್ ಅವರ ಸೇವೆಗೆ ಬಂಜಾರ ಸಮುದಾಯದ ಜನರು ಮತಗಳ ಮೂಲಕ ಮನ್ನಣೆ ನೀಡಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಲೋಕಸಭಾ ಸದಸ್ಯರಾದ ಉಮೇಶ್ ಜಾಧವ್ ಅವರ ಮಗ ಬಂಜಾರ ಸಮುದಾಯದ ಸರ್ವಾಂಗಣ ಪ್ರಗತಿಗಾಗಿ ಕಳೆದ ಐದು ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದು ಇಂದು ರಾಷ್ಟ್ರಮಟ್ಟದಲ್ಲಿ ಬಂಜಾರ ಸಮುದಾಯದ ಗೌರವವನ್ನು ಕಾಪಾಡಲಾಗಿದೆ ಸಮುದಾಯಕ್ಕೆ ಮಾಡಿದ ಸತ್ಯ ರಹ ಸೇವೆಗಳನ್ನು ತಾಂಡಾಗಳ ಮನೆ ಮನೆಗಳಿಗೆ ಮುಟ್ಟಿಸಿ ಮತ್ತೊಮ್ಮೆ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಲಂಬಾಣಿಗರು ಕೈಜೋಡಿಸಿ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಜೊತೆಯಾಗಬೇಕು ಎಂದು ಹೇಳಿದರು.
ಜಿಲ್ಲೆಯ ಹಲವು ತಾಲೂಕುಗಳಿಂದ ಆಗಮಿಸಿದ ಪ್ರಮುಖ ಬಂಜಾರಾ ನಾಯಕರಾದ ಪೋಮು ರಾಥೋಡ್, ಶ್ರೀಧರ ಚೌಹಾಣ್, ಚಂದ್ರಶೇಖರ ರಾಥೋಡ್ ಬಿ. ಬಿ ನಾಯಕ್, ಕಮಲಾಕರ ರಾಥೋಡ್ ಸುಶೀಲಾಬಾಯಿ ರಾಥೋಡ್, ಶಾರದಾ ಬಾಯಿ ಯಾಕಾಪೂರ, ಸುರೇಶ್ ರಾಥೋಡ್ ಶಿವು ಸೈನಿಕ್ ರಾಥೋಡ್, ಕೃಷ್ಣ ನಾಯಕ್, ಕಿಶನ್ ನಾಯಕ್ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…