ಬಿಸಿ ಬಿಸಿ ಸುದ್ದಿ

ಭಾರತವು ವಿಶ್ವದಲ್ಲಿ ನಂಬರ್ ವನ್ ಆಗಲು ಮೋದಿ ಅವಶ್ಯ: ಡಾ. ಉಮೇಶ್ ಜಾಧವ್

ಅಫಜಜಲ್ಪುರ : ಭಾರತವು ಜಗತ್ತಿನಲ್ಲಿ ನಂಬರ್ ಒನ್ ರಾಷ್ಟೀಯವಾಗಲು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಅವಶ್ಯಕ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.

ಅಫ್ಜಲ್ಪುರ ತಾಲೂಕಿನ ಬಡದಾಳ ಮಹಾ ಶಕ್ತಿ ಕೇಂದ್ರದಲ್ಲಿ ಭಾನುವಾರ ಏಪ್ರಿಲ್ ಏಳರಂದು ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯ ಕ್ಕಾಗಿ ಮೂರನೇ ಬಾರಿಗೆ ಮೋದಿಯವರುಪ್ರಧಾನ ಮಂತ್ರಿಯಾಗಿ ಅಧಿಕಾರ ಪಡೆದು ಉಜ್ವಲ ಭಾರತದ ನಿರ್ಮಾಣಕ್ಕೆ ಮತದಾರರು ಈ ಬಾರಿ ಕಮಲದ ಗುರುತಿಗೆ ಮತ ಚಲಾಯಿಸಿ ಪ್ರಚಂಡ ಜಯಭೇರಿ ಬಾರಿಸಬೇಕು ಎಂದು ಹೇಳಿದರು.

ಈ ದೇಶದ ರಕ್ಷಣೆ ಮತ್ತು ಭವಿಷ್ಯ ನಿರ್ಮಾಣ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ಮಾಜಿ ಪ್ರಧಾನ ಮಂತ್ರಿ ಹಿರಿಯ ನಾಯಕರಾದ ದೇವೇಗೌಡರು ಕೂಡ ಬಿಜೆಪಿಯ ಜೊತೆ ಮೈತ್ರಿ ಮಾಡಿ ರಾಷ್ಟ್ರಕ್ಕೆ ದೊಡ್ಡ ಸಂದೇಶವನ್ನು ನೀಡಿದ್ದಾರೆ. ಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ ಆರ್ಥಿಕ ಮುಗ್ಗಟ್ಟಿನಿಂದ ಅನ್ನಕ್ಕೂ ಸಹ ತಾತ್ವಾರವಾಗಿರುವ ಸಂದರ್ಭದಲ್ಲಿ ಭಾರತವು ಜಗತ್ತಿನಲ್ಲಿ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ ಕರೋನಾ ಸಂದರ್ಭದಲ್ಲಿ ಮೋದಿ ಅಂತಹ ನಾಯಕನಲ್ಲದಿರುತ್ತಿದ್ದರೆ ಕನಿಷ್ಠ ಶೇಕಡ 60ರಿಂದ 75 ರಷ್ಟು ಜನರ ಜೀವ ಹಾನಿಯಾಗುತ್ತಿತ್ತು. ಆದರೆ ಸ್ವದೇಶಿಯಾಗಿ ಲಸಿಕೆ ತಯಾರು ಮಾಡಿ ಉಚಿತವಾಗಿ ಭಾರತಕ್ಕೆ ಮಾತ್ರ ಅಲ್ಲ ಪ್ರಪಂಚಕ್ಕೆ ನೀಡುವುದರ ಮೂಲಕ ಮಹಾನ್ ಸಾಧನೆ ಮಾಡಿದರು.

ಮೊದಲ ಕರೋನ ಸಂದರ್ಭದಲ್ಲಿ ಕಾಂಗ್ರೆಸಿನವರು ಮೋದಿ ವ್ಯಾಕ್ಸಿನ್ ಎಂದು ಟೀಕೆ ಮಾಡಿ ಜನಸಾಮಾನ್ಯರನ್ನು ತಪ್ಪು ಹಾದಿಗೆಳೆದರು. ಕರೋನಾದ ಎರಡನೇ ಅಲೆಯಲ್ಲಿ ಸಾಲಾಗಿ ನಿಂತು ಕಾಂಗ್ರೆಸಿಗರು ಲಸಿಕೆಗಳನ್ನು ಹಾಕಿಸಿಕೊಂಡರು.ಮೋದಿಯವರು ಜಗತ್ತಿಗೆ ಲಸಿಕೆ ನೀಡಿ ಮಾನವೀಯತೆ ಮೆರೆದರು. ಕಾಂಗ್ರೆಸ್ಸಿನ ನಾಯಕರು ಪ್ರಧಾನಿಯವರನ್ನು ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ.ನಿರುದ್ಯೋಗ ನಿವಾರಣೆ ಗಾಗಿ ಜವಳಿ ಪಾರ್ಕ್, ನೀಲೂರು ಕೆಳೆ ಸೇತುವೆ ನಿರ್ಮಾಣ ಮಾಡಿದರು ಅಭಿವೃದ್ಧಿ ಅವರ ಕಣ್ಣಿಗೆ ಕಾಣುತ್ತಿಲ್ಲ. ಸ್ವತಹ ಮಲ್ಲಿಕಾರ್ಜುನ ಖರ್ಗೆ ಅವರೇ ರೈಲ್ವೆ ಖಾತೆಯ ಸಚಿವರಾಗಿದ್ದರು ಒಂದು ರೈಲು ಕೊಡಲಾಗದ ದುಸ್ಥಿತಿ ಕಾಂಗ್ರೆಸ್ಸಿನದು. ಅದಕ್ಕಾಗಿ ಅನಾಥನ ಹಿಂದೂ ಸಂಸ್ಕೃತಿ ಉಳಿಯಲು ಮತ್ತು ದೇಶದ ಭವಿಷ್ಯಕ್ಕಾಗಿ ಮೋದಿಯವರು ಅನಿವಾರ್ಯ ಎಂದು ರಾಜ್ಯದ ಜನತೆ ಮನಗಂಡು ಅದ್ಬುತ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು ಜಿಲ್ಲೆಯ ಜೆಡಿಎಸ್ ನ 2 ಲಕ್ಷ 50 ಸಾವಿರ ಮತಗಳು ನೇರವಾಗಿ ಪಡೆಯಲಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿಒಂದು ಲಕ್ಷದ 83 ಸಾವಿರ ಮತಗಳನ್ನು ಜಿಲ್ಲೆಯಲ್ಲಿ ಜೆಡಿಎಸ್ ಪಡೆದಿತ್ತು. ಎಂದು ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಬಾಲರಾಜ ಗುತ್ತೇದಾರ ಹೇಳಿದರು.

ಕಾಂಗ್ರೆಸಿನ ಯಾವುದೇ ಸುಳ್ಳು ಭರವಸೆಗಳಿಗೆ ಬಲಿಯಾಗದೆ ವಿಶ್ವದಲ್ಲಿ ಅಗ್ರಗಣ್ಯ ನಾಯಕ ಮತ್ತು ರಾಷ್ಟ್ರವನ್ನು ಬಲಿಷ್ಠವಾಗಿ ನಿರ್ಮಾಣ ಮಾಡಲು ಹೊರಟ ನರೇಂದ್ರ ಮೋದಿಯವರನ್ನು ನೋಡಿ ಮತ ಚಲಾಯಿಸಬೇಕಾಗಿದೆ. ಈ ಬಾರಿಯ ಚುನಾವಣೆ ಇದು ಕೇವಲ ಮಾಲಿಕಯ್ಯ ಗುತ್ತೇದಾರ್ ಮತ್ತು ಉಮೇಶ್ ಜಾಧವ್ ಅವರ ಚುನಾವಣೆಯಲ್ಲ, ಇದು ರಾಷ್ಟ್ರದ ಚುನಾವಣೆ ಯಾಗಿದೆ.ಮೋದಿ ಮತ್ತು ಭೂಮಿ ತಾಯಿಗಾಗಿ ಈ ಚುನಾವಣೆ ಎಂದು ಹೇಳಿದರು.

ಭೀಮಾ ತೀರದಲ್ಲಿ ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಾಗಿ 13 ದಿನಗಳ ಕಾಲ ಶಿವಕುಮಾರ್ ನಾಟಿಕಾರ್ ಉಪವಾಸ ನಿರಶನ ಹೂಡಿದರರೂ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರು ತಲೆಯೆತ್ತಿಯು ನೋಡಲಿಲ್ಲ. ಇವರಿಂದ ಯಾವ ಅಭಿವೃದ್ಧಿಯನ್ನು ಜನತೆ ನಿರೀಕ್ಷಿಸಬಹುದು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕೈ ತೋರಿಸಿ ಕೈ ಕೊಡುವ ಸಂಸ್ಕೃತಿಯ ಪಕ್ಷವಾಗಿದ್ದು ಅಭಿವೃದ್ಧಿ ಮತ್ತು ಅಖಂಡತೆಗಾಗಿ ಮೋದಿಯವರಿಗಾಗಿ ನಮ್ಮೆಲ್ಲ ಪ್ರಜ್ಞಾವಂತ ಮತದಾರರು ಮತನೀಡಿ ಗೆಲ್ಲಿಸಿ ಕೊಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಅವ್ವಣ್ಣ ಮ್ಯಾಕೇರಿ, ಯುವ ಮುಖಂಡರಾದ ರಿತೇಶ್ ಗುತ್ತೇದಾರ್ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ ಮತ್ತಿತರ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಧರ ಮಂಗಳೂರೆ ಪ್ರಾಸ್ತವಿಕ ಭಾಷಣ ಮಾಡಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬೀರಣ್ಣ ಪೂಜಾರಿ ತಲ್ಲೂರು ಪಕ್ಷದ ಮುಖಂಡರಾದ ಅಶೋಕ್ ಬಗಲಿ ಶಂಕರಪ್ಪ ಗುಡಿ ಮಾಂತೇಶ ಹುಡಗಿ ಡಾ. ಇಂದಿರಾ ಶಕ್ತಿ, ತಾಲೂಕ ಸಂಚಾಲಕರಾದ ಸಿದ್ಧಾಜಿ ಪಾಟೀಲ್ ಶಾಂತಪ್ಪ ಕೋಡ್ಲಿ ಮತ್ತಿತರ ಗಣ್ಯರ ಹಾಜರಿದ್ದರು ಪ್ರಕಾಶ್ ಕೈ ನಿರೂಪಿಸಿದರು.

ಕಾರ್ಯಕ್ರಮದ ಮುನ್ನ ಲೋಕಸಭಾ ಸದಸ್ಯರಾದ ಡಾ. ಅವರು ಬಡದಾಳ ತೇರಿನ ಮಠದ ಶ್ರೀ ಚನ್ನ ಮಲ್ಲ ಶಿವಾಚಾರ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago