ಕಲಬುರಗಿ: ದಲಿತ ಕೂಲಿ ಕಾರ್ಮಿಕ ಮಹಿಳೆಯರಿಬ್ಬರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕೊಲೆಯಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಜಸುಲ್ತಾನಪೂರ ಗ್ರಾಮದ ಚೆಂದಮ್ಮ ಬಾಬುರಾವ್, ಕೆರೆ ಅಂಬಲಗಾ ಗ್ರಾಮದ ಶರಣಮ್ಮ ಅಣ್ಣಪ್ಪ ಗಡದನ ಎಂಬ ಮಿಚ್ಗೊರಿ ಕ್ರಾಸ್ ಬಳಿ ಗೌಂಡಿ ಕೆಲಸಕೆಂದು ಹೋಗಿರುವ ಮಹಿಳೆಯರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಘಟನೆ ನಡೆದು 24 ಗಂಟೆ ಕಳೆದರೂ ಇನ್ನೂ ಕೂಡ ಅಪರಾಧಿಗಳು ಯಾರೆಂದು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲವಾಗಿರುವುದು ದಲಿತರ ಮೇಲಿನ ಹಲ್ಲೆಯನ್ನು ಹಗುರವಾಗಿ ಪರಿಗಣಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತವಪಡಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ ನ್ಯಾಯವಾದಿ ಅಶ್ವಿನಿ ಮದನಕರ ಮಾತನಾಡಿ, ಇಬ್ಬರು ದಲಿತ ಮಹಿಳೆಯರ ಮೇಲೆ ಕೊಲೆಯಾಗಿ 24 ಗಂಟೆ ಕಳೆದರೂ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತವಾಗಲಿ ಬಂದು ಸಾಂತ್ವನ ಹೇಳದೆ ದಲಿತರ ಕೊಲೆಯನ್ನು ಹಗುರವಾಗಿ ಪರಿಗಣಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇಬ್ಬರು ದಲಿತ ಮಹಿಳೆಯರ ಜೊಡಿ ಪ್ರಕರಣವನ್ನು ಸರಿಯಾದ ತನಿಖೆಯಾಗಬೇಕು, ನೊಂದ ಕುಟುಂಬಕ್ಕೆ ಜೀವನೋಪಾಯಕ್ಕೆ ಒಂದು ಉದ್ಯೋಗ ನೀಡಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.