ಬಿಸಿ ಬಿಸಿ ಸುದ್ದಿ

ವಾಡಿ ಈದ್ಗಾದಲ್ಲಿ ರಂಜಾನ್ ಈದ್ ನಮಾಜ್

ವಾಡಿ: ಪಟ್ಟಣದ ಈದ್ಗಾ ಮೈದಾನದಲ್ಲಿ ಗುರುವಾರ ಸಾವಿರಾರು ಜನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ನಮಾಜ್ ಕೈಗೊಂಡರು. ಈದ್ ನಿಮಿತ್ತ ಕೈಗೊಂಡಿದ್ದ ಮೂವತ್ತು ದಿನಗಳ ಕಠಿಣ ರೋಜಾ ಉಪವಾಸ ವೃತವನ್ನು ಅಂತ್ಯಗೊಳಿಸುವ ಮೂಲಕ ಹಬ್ಬದೂಟ ಸವಿದರು. ನಮಾಜ್ ನಂತರ ಪರಸ್ಪರ ಹಸ್ತಲಾಘವ ನೀಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್ಗಾ ಮೈದಾನದಲ್ಲಿ ನಮಾಜ್‍ಗಾಗಿ ಸೇರಿದ್ದವನ್ನು ಉದ್ದೇಶಿಸಿ ಮಾತನಾಡಿದ ಜಾಮಿಯಾ ಮಸೀದಿಯ ಸದರ್ ಸೈಯದ್ ಅಬ್ದುಲ್ ಬಾರಿ ಕ್ವಾಲೀದ್, ಲೋಕದ ಸೃಷ್ಠಿಕರ್ತ ಅಲ್ಲಾಹನು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ಹಸಿವಿನಿಂದ ಕಾಪಾಡುವವನಾಗಿದ್ದಾನೆ. ದೇವರು ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಕರುಣಾಮಯಿಯಾಗಿದ್ದಾನೆ. ನಮ್ಮ ದೇಶದ ಜನರ ಸುರಕ್ಷತೆಯನ್ನು ಕಾಪಾಡುವಂತಾಗಲಿ. ಇಸ್ಲಾಂ ಮತ್ತು ಮುಸ್ಲಿಂ ಬಂಧುಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಪಾರು ಮಾಡುವಂತಾಗಲಿ. ನಿನ್ನ ಮೇಲಿನ ಕೃಪೆಗಾಗಿ ತಿಂಗಳ ಪರ್ಯಂತ ಕೈಗೊಂಡ ಕಠಿಣ ಉಪಾಸಗಳನ್ನು ಸ್ವೀಕರಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ಈದ್ಗಾ ಆವರಣದಲ್ಲಿ ಬಂದೋಬಸ್ತ್ ಕೈಗೊಂಡು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ನಮಾಜ್‍ನಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡರು ಹಬ್ಬದ ಶುಭಾಶಯಗಳನ್ನು ಹೇಳಿ ಹಸ್ತಲಾಘವ ನೀಡಿದರು.

ಹಬ್ಬದ ಪ್ರಮುಖ ಖಾದ್ಯವಾದ ಸುರ್ಕುಂಬಾ ಪಾನಕವನ್ನು ಅನ್ಯ ಧರ್ಮಿಯ ಸ್ನೇಹಿತರಿಗೆ ವಿತರಿಸಿ ಕೋಮು ಸೌಹಾರ್ಧತೆ ಮೆರೆದರು. ಬಡಾವಣೆಯ ನಿವಾಸಿಗಳನ್ನು ಓತಣಕೂಟಕ್ಕೆಂದು ಮನೆಗಳಿಗೆ ಕರೆದು ಬಿರಿಯಾನಿ ಊಟ ಬಡಿಸಿ ಕೃತಜ್ಞರಾದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

14 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

44 mins ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

51 mins ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

56 mins ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

2 hours ago