ಹಟ್ಟಿ: ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತಳಮಟ್ಟದಲ್ಲಿ ಗಟ್ಟಿಯಾಗಿ ಮುನ್ನಡೆಸುವುದು , ಯುವಕರಲ್ಲಿ ಜಾಗೃತ ತರುವುದರಲ್ಲಿ , ಮನೆ ಮನೆಗಳಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ಅವರು ಹೇಳಿದರು.
ಹಟ್ಟಿ ಪಟ್ಟಣದ ಸಿಐಟಿಯು ಕಚೇರಿಯಲ್ಲಿ ಡಾ . ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಭಾಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬುಡದಿಂದ ಕಿತ್ತು ಎಸೆಯಬೇಕು. ಅಂದಾಗ ಮಾತ್ರ ಸಂವಿಧಾನವನ್ನು ಉಳಿಸುವುದಕ್ಕೆ ಸಾಧ್ಯ. ಬಿಜೆಪಿ ಸೋಲಿಸಿ ಸಂವಿಧಾನ ಮತ್ತು ಅಂಬೇಡ್ಕರರ ತತ್ವಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಪಕ್ಷದ ವಿರುದ್ಧವಾಗಿ ನಾವು ಬಹಿರಂಗ ಸಭೆಯನ್ನು , ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರನ್ನು ಬಿಜೆಪಿ ಮಾಡಿದ ದೇಶದ್ರೋಹಿ ಮತ್ತು ಜಂದ್ರೋಹಿ ಕೆಲಸಗಳ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಚುನಾವಣಾ ಬಾಂಡ್ ಹಗರಣ ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಗರಣವಾಗಿದ್ದು, ಇದರ ಸಂಪೂರ್ಣ ತನಿಖೆಯಾಗಿ ಸಂಪೂರ್ಣ ಬಿಜೆಪಿ ನಾಯಕರು ಜೈಲು ಸೇರುವಂತಾಗಬೇಕು. ಇದಕ್ಕಾಗಿ ನಾವು ಲೋಕಸಭೆ ಚುನಾವಣೆಯಲ್ಲಿ ಮೈ ಮರೆತು ಕೂಡದೆ ಅವಿರತವಾಗಿ ಶ್ರಮಿಸಬೇಕು. ಈ ಮೂಲಕ ಇಂಡಿಯಾ ಕೂಟ ಗೆಲ್ಲಿಸಬೇಕು ಎಂದರು.
ಈ ವೇಳೆ ಸಿಐಟಿಯು ಮುಖಂಡರಾದ ಲಿಂಗಪ್ಪ ಎಂ., ಅಲ್ಲಾಭಕ್ಷ ದೇವಪೂರು, ವೆಂಕಟೇಶ್ ಗೋರಕಲ್, ರಿಯಾಜ್, ದಾವೂದ್, ಖಾಜಾಸಾಬ್, ಸಮೀರ್ , ಮೈಬುಬ್ ಲಾಲ್ಗಡಿ , ಇಸ್ಮಾಯಿಲ್ , ರಮೇಶ ಹಟ್ಟಿ ಅನೇಕರು ಮುಖಂಡರು ಉಪಸ್ಥಿತರಿದ್ದರು .