ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾದ್ಯ ಎಂದ ಡಾ.ಅಂಬೇಡ್ಕರ್

0
13

ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾಪಂಚಾಯತ,. ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ೧೩೩ನೇ ಜಯಂತಿ ಅಂಗವಾಗಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಪ್ರತಿಮೆಗೆ ಭಾನುವಾರದಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಮತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೇರಿದಂತೆ ಹಿರಿಯ ಅಧಿಕಾರಿಗಳು ಪುಷ್ಫಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾತನಾಡಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳು ಕೊಡುಗೆಗಳು ಅವರ ವಿಚಾರಗಳು ನಮಗೆ ದಾರಿ ದೀಪವಾಗಿದ್ದು ಅವರ ತತ್ವಗಳು,ಸಿದ್ದಾಂತಗಳನ್ನು ನಾವು ಯಾವಾಗಲು ಮೈಗೊಡಿಸಕೊಳ್ಳಬೇಕು ಎಂದರು.

Contact Your\'s Advertisement; 9902492681

ಬಾಬಾ ಸಾಹೇಬರು ಶೋಷಿತ ಸಮುದಾಯಕ್ಕೆ ಮಹಿಳೆಯರಿಗೆ ವಿಶೇಷ ಸಮಾನತೆ ನೀಡಿದ ಅವರು ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು. ಸಾದ್ಯವೆಂದು ಹೇಳಿದರು. ಅವರ ಆದರ್ಶ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಲ್ಲರಿಗೂ ಶುಭಾಶಯಗಳು ಹೇಳಿದರು.

ನಗರ ಪೋಲಿಸ್ ಆಯುಕ್ತರಾದ ಚೇತನ ಅವರು ಮಾತನಾಡಿ, ಶಿಕ್ಷಣ ಸಮಾನತೆ ಅಳವಡಿಸಿಕೊಂಡು ನಾವೆಲ್ಲರೂ ನಡೆಯಬೇಕೆಂದರು. ಡಾ. ಬಾಬ ಸಾಹೇಬರು ಸಮಾನತೆ ಹೋರಾಡಿದರು ಅನೇಕ ಸಿದ್ದಾಂತಗಳನ್ನು ಮತ್ತು ಕೂಡುಗೆಗಳನ್ನು ದೇಶಕ್ಕಾಗಿ ನೀಡಿದ್ದಾರೆ ಎಂದರು.
ಇದಕ್ಕೂ ಮುನ್ನ ಬುದ್ಧ ವಿಹಾರದ ಪೂಜ್ಯ ಸಂಗಾನAದ ಭಂತೇಜಿ ಅವರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಬುದ್ಧವಂದನೆ ಸಲ್ಲಿಸಲಾಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರಸಿAಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ, ಉಪ ಆಯುಕ್ತರಾದ ಮಾಧವ ಗಿತ್ತೆ, ಪ್ರೋಬೇಷನರಿ ಐ.ಎ.ಎಸ್. ಗಜಾನನ ಬಾಳೆ, ಅಪರ ಜಿಲ್ಲಾದಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಸಹಾಯಕ ಆಯುಕ್ತೆ ರೂಪಿಂದ್ರ ಸಿಂಗ್ ಕೌರ್, ಸಮಾಜ ಕಲ್ಯಾಣ ಇಲಾಖೆ (ಪ್ರಭಾರಿ) ಅಧಿಕಾರಿ ಜಾವಿದ್ ಕರಂಗಿ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ರಾಜು ಸಂಕಾ ಎಸ್ಸಿ/ಎಸ್ಟಿ ಸರಕಾರಿ ಅರೆ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಸೋಮಶೇಖರ ಎಸ್ ಮದನಕರ್, ವಿಠ್ಠಲ ಗೋಳಾ, ಸಮಾಜದ ಮುಖಂಡರಾದ ಡಿ.ಜಿ. ಸಾಗರ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಪಂಚಶೀಲ ಧ್ವಜಾರೋಹಣ ನೇರವೇರಿಸಿದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ನೀಲ ಧ್ವಜಾರೋಹಣ ನೇರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here