ಕಲಬುರಗಿ: ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾಪಂಚಾಯತ್ ವತಿಯಿಂದ ಜಗತ್ ಸರ್ಕಲ್ ನಲ್ಲಿ ಮಂಗಳವಾರದಂದು ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಹಾನಗರ ಪಾಲಿಕೆಯ ವಾಹನಗಳ ರ‍್ಯಾಲಿಗೆ ಚಾಲನೆ ನೀಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೇ. ೭ ರಂದು ನಡೆಯಲಿದ್ದು, ತಾವುಗಳು ಕಡ್ಡಾಯವಾಗಿ ಮತ ಚಲಾಯಿಸಬೇಕು. ಈಗಾಗಲೇ ಮತದಾನ ಜಾಗೃತಿಗೆ ಸ್ವೀಪ ವತಿಯಿಂದ ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಜನರಿಗೆ ನ್ಯೂಸ್ ಪೇಪರ್ ಆರ್ಟ್ಕಲ್ಸ್ ವ್ಯಾಟ್ಸಪ್ ಸ್ಟೇಟ್ಸ್ ಮುಖಾಂತರ ನೀವು ಇಂತಹ ಕಾರ್ಯಕ್ರಮವನ್ನು ಶೇರ ಮಾಡಿದರೆ ಮೇ. ೭ ರಂದು ಮತದಾನ ಮಾಡುವುದು ಯಾರಿಗೆ ಗೊತ್ತಿಲ್ಲ ಅವರಿಗೆ ಗೊತ್ತಾಗುತ್ತದೆ ಅಂದು ತಮ್ಮ ಕೆಲಸವನ್ನು ಬಿಟ್ಟು ಮತದಾನ ಮಾಡಬೇಕೆಂದು ಅವರು ತಿಳಿಸಿದರು.
ಮತಗಟ್ಟೆಗಳಿಗೆ ಪ್ರತಿಯೊಬ್ಬರು ಹೋಗಿ ತಪ್ಪದೇ ಮತದಾನ ಮಾಡಬೇಕು. ಈಗಾಗಲೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಮತದಾನ ಪ್ರಜಾಪ್ರಭುತ್ವದ ಹಕ್ಕು ಇದೆ ಯಾವುದೇ ಮತದಾನ ಮಾಡುವಾಗ ನಿರ್ಭಯವಾಗಿ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಹಸ್ತಾಕ್ಷರ ಅಭಿಯಾನ, ಸೆಲ್ಫಿ ಸ್ಟಾö್ಯಂಡ್ ಉದ್ಫಾಟನೆ, ಲ್ಯಾಂಟೀನ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಭಂವರ್ ಸಿಂಗ್ ಮಾತನಾಡಿ, ಮೇ.೭ ರಂದು ತಪ್ಪದೇ ಮತದಾನ ಮಾಡಬೇಕು ಯಾವುದೇ ವ್ಯಕ್ತಿಯು ಮತದಾನದಿಂದ ವಂಚಿತರಾಗ ಕೂಡದು ಎಂದು ಹೇಳಿದರು.
ಕೆಲವೊಂದು ಕಡೆ ಮತದಾನ ಜಾಗೃತಿ ಮೂಡಿಸುವಾಗ ಕೆಲವೊಂದು ವ್ಯಕ್ತಿಗಳು ಮತದಾನ ದಿನಾಂಕ ಗೊತ್ತಿರುವುದಿಲ್ಲ ಎಂದರು. ಈಗಾಗಲೇ ಸ್ವೀಪ್ ಸಮಿತಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಯಾವುದೇ ಭಯಪಡದೇ ಮತದಾನ ಮಾಡಬೇಕು ಹೆಚ್ಚಿನ ಮತದಾನ ಮಾಡಿ ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ ಅವರು ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ಉತ್ತರ ಮತ್ತು ದಕ್ಷಿಣ ವಲಯಗಳಲ್ಲಿ ಮತದಾನದ ಜಾಗೃತಿ ಮೂಡಿಸಿದ್ದೇವೆ ಕೆಲವೊಂದು ವಾರ್ಡಗಳಲ್ಲಿ ಮತದಾನ ಅರಿವು ಮೂಡಿಸಲಾಗಿದೆ ಎಂದರು.
ಈಗಾಗಲೇ ಮತದಾನ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ವತಿಯಿಂದ ವಾಹನಗಳು ಜಗತ್ ಸರ್ಕಲ್ ದಿಂದ ಕಣ್ಣಿ ಮಾರ್ಕೇಟ್, ಹಾಗೂ ಜಗತ್ ಸರ್ಕಲ್‌ದಿಂದ ಕಪನೂರದವರೆಗೆ ರ‍್ಯಾಲಿ ಹಮ್ಮಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಾಧವ ಗಿತ್ತೆ, ಎ.ಇ.ಇ. ಶಿವನಗೌಡ ಪಾಟೀಲ, ಪರಿಸರ ಅಭಿಯಂತರಾದ ಸುಶಮ್ಮ ಸಾಗರ ಸಮುದಾಯದ ವ್ಯವಹಾರ ಅಧಿಕಾರಿ ವಿಜಯ ಲಕ್ಷ್ಮಿ ಪಟ್ಟೇದರ, ಸೇರಿದಂತೆ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಪೌರಕಾರ್ಮಿಕರು ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…