ಬಿಸಿ ಬಿಸಿ ಸುದ್ದಿ

ಜಿದ್ದಾ ಜಿದ್ದಿನ ಕಣ ಕಲಬುರಗಿ: ಘರ್ ವಾಪಸ್ಸಿಗಳು ಕಾಂಗ್ರೆಸ್ ಗೆಲ್ಲಿಸುವರೆ?

ಕಲಬುರಗಿ:  ಖರ್ಗೆ ಕುಟುಂಬದ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರಿದ್ದ ಜಿಲ್ಲೆಯ ಮೂವರು ಪ್ರಮುಖ ನಾಯಕರು ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯದಲ್ಲಿ ಯಾರು ಮಿತ್ರರೂ ಇಲ್ಲ, ಶತ್ರುಗಳು ಇಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್ ಅವರು ಯುವ ನಾಯಕ ಅರವಿಂದ ಚವ್ಹಾಣ ಇತರರನ್ನು ಕರೆದುಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.

ಅದೆ ಹೊತ್ತಿನಲ್ಲಿಯೆ ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿ ಗುರುಮಠಕಲ್ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡರು. ಅದರಂತೆ ಮಾಜಿ ಸಚಿವರಾದ ರೇವೂನಾಯಕ ಬೆಳಮಗಿ ಕೂಡ ಕಾಂಗ್ರೆಸ್ ಪಕ್ಷ ಸೇರಿದ್ದರು.

ಅದರಂತೆ ಈಗ ಇನ್ಮೊಬ್ಬ ಹಿರಿಯ ನಾಯಕ ಮಾಲಿಕಯ್ಯ ಗುತ್ತೇದಾರ ಸಹ ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಕಟ್ಟಿ ಕಲ್ಲು ಕಟ್ಟಿಗಿ ಕುಂತಂಗಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

 

ಅವರವರ ರಾಜಕೀಯ ಒಳಿತು, ಕೆಡಕು ಏರುಪೇರಾದಾಗ ಇಂತಹ ನಿರ್ಧಾರಗಳು ರಾಜಕೀಯ ಕ್ಷೇತ್ರದಲ್ಲಿ  ಈಗ ಸರ್ವೆಸಾಮಾನ್ಯ.

ಕಳೆದ ಲೋಕಸಭಾ ಚುನಾವಣೆ ವೇಳೆ ಈ ಮೂವರು ನಾಯಕರು ಖರ್ಗೆ ಕುಟುಂಬ ರಾಜಕಾರಣದ ವಿರುದ್ದ  ಇನ್ನಿಲ್ಲದ ಆರೋಪಗಳ ಸುರಿಮಳೆಗೈದು ಜಿದ್ದಿನಿಂದ ಬಿಜೆಪಿ ಸೇರಿ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿನ ರುಚಿ ಸರಿಯಾಗಿಯೆ ಉಣಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು.

ಆದಾದ ಐದೇ ವರ್ಷಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಾರ ವಿರುದ್ದ ರಾಜಕೀಯವಾಗಿ ಹಲ್ಲು ಮಸಿದಿದ್ದರೋ ಅವರ ನೇತೃತ್ವದಲ್ಲಿಯೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದು ಕಾಕತಾಳಿಯೆ ಸರಿ.
ಈ ಮೂವರು ಬಿಜೆಪಿ ತೊರೆದರೆ, ಯುವ ನಾಯಕ ನಿತೀನ್ ಗುತ್ತೇದಾರ ಬಿಜೆಪಿ ಸೇರಿದ್ದಾರೆ.

೨೦೧೯ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗಾಳಿ ಸುಂಟರಗಾಳಿ ಬಿಸುವುದಕ್ಕೂ, ಈ ಎಲ್ಲ ನಾಯಕರು ಕಾಂಗ್ರೆಸ್ ತೊರೆಯುವದಕ್ಕೂ ಸಮವಾಯಿತು.

ಇವರು ಅಂದುಕೊಂಡಂತೆ ಭಾರಿ ಬಹುಮತಗಳಿಂದ ಹಿರಿಯ ಮುತ್ಸದಿ  ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು. ಆದರೆ ರಾಜಕೀಯ ಗಾಳಿ ಈಗ ಉಲ್ಟಾ  ಬೀಸುತ್ತಿದ್ದು, ಇದರ ಪರಿಣಾಮ ಚುನಾವಣೆ ಮೇಲಾಗಲಿದೆ.

ಈ ಮೂರ್ನಾಲ್ಕು ಜನ ಪ್ರಮುಖರು ಕಾಂಗ್ರೆಸ್‌ಗೆ ಘರ್ ವಾಪಸಿ ಆಗಿರುವುದರಿಂದ ಈ ಬಾರಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಕಂಡು ಬರುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಅವರು ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷವನ್ನು ವಾಚಾಮಗೋಚರವಾಗಿ ಬೈಯುವ ಮೂಲಕ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದರು. ಅದರಂತೆ ಈ ಬಾರಿ ಇವರೆಲ್ಲ ಸೇರಿ ಕಾಂಗ್ರೆಸ್ ಗೆ ಗೆಲುವು ತಂದು ಕೊಡಲಿದ್ದಾರೆ ಎಂದು ವಿಶ್ಲೇಸಿಸಲಾಗುತ್ತದ.

ಪ್ರಮುಖರು v/s ಮತದಾರರು: ಕಲಬುರಗಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.‌ಶರಣಪ್ರಕಾಶ ಪಾಟೀಲರು ಈ ಚುನಾವಣೆಯನ್ನು ತೀರಾ ಮೈ ಮೇಲೆ ತೆಗೆದುಕೊಂಡು ಎಲ್ಲ ಸಮುದಾಯದ ಮುಖಂಡರನ್ನು ತಮ್ಮೆಡೆಗೆ ಸೆಳೆಯುತ್ತಿದ್ದಾರೆ. ಆದರಂತೆ ಬಿಜೆಪಿಯವರು ಕೂಡ ಡಾ. ಉಮೇಶ ಜಾಧವ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮುಖಂಡರ ಮತ್ತು ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ. 

ಮತದಾರರ ಮನದಲ್ಲಿ ಅಚ್ಚೊತ್ತಿರುವ ಮೋದಿ ಹವಾ ಇವರನ್ನು ಕೈ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಬಳಿ ಮುಖಂಡರಿರಬಹುದು. ಆದರೆ ಬಿಜೆಪಿ ಬಳಿ ಮತದಾರರಿದ್ದಾರೆ ಎಂದು ಜನ ಅಂದಾಡಿಕೊಳ್ಳುತ್ತಿದ್ದಾರೆ.

emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

1 hour ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

1 hour ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

1 hour ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

2 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

5 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

8 hours ago