ಕಲಬುರಗಿ: ಯಾವ ರೀತಿಯಾಗಿ ಮಾತನಾಡುವ ಹಕ್ಕು, ಜೀವಿಸುವ ಹಕ್ಕು ಇತರೆ ಮೂಲಭೂತ ಹಕ್ಕುಗಳಿವೆಯೋ ಅವುಗಳಷ್ಟೇ ಶ್ರೇಷ್ಠವಾದ ಹಕ್ಕು ಮತದಾನ ಹಕ್ಕು ಎಂದು ಅಂಡಗಿ ಪ್ರತಿಷ್ಠಾನ ಟೇಂಗಳಿ ಅಧ್ಯಕ್ಷರಾದ ಶಿವರಾಜ ಅಂಡಗಿ ನೂತನ ದಂಪತಿಗಳಿಗೆ ಮತದಾನ ಜಾಗೃತಿ ಮೂಡಿಸಿದರು.
ಮತದಾನದ ಹಕ್ಕು ಸದುಪಯೋಗ ಪಡೆದುಕೊಳ್ಳಬೇಕಾದರೆ ನಾವು ನೀವೆಲ್ಲರು ಕಡ್ಡಾಯವಾಗಿ ಮೇ 07ರಮದು ನಡೆಯಲಿರುವ ಲೊಕಸಭಾ ಚುನವಾಣೆಯಲ್ಲಿ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕಾಗಿರುವುದು ಆಧ್ಯ ಕರ್ತವ್ಯ ಎನ್ನುತ ನೂರಕ್ಕೆ ನೂರಷ್ಟು ಪ್ರತಿಶತ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಇನ್ನೂ ಗಟ್ಟಿಗೊಳಿಸಬೇಕಾಗಿದೆ ಎಂದು ಮದುವೆಯಾದ ದಂಪತಿಗಳಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಮತದಾನ ಜಾಗ್ರತಿ ಅಭಿಯಾನದ ಕರಪತ್ರ ಹಂಚುವ ಮೂಲಕ ವಿನಂತಿಸಿಕೊಂಡರು.
ಜಾಗ್ರತಿ ಅಭಿಯಾನದಲ್ಲಿ ಮದುಮಗ ಶ್ರೀನಿಶ ಮದುಮಗಳು ರೂಪಾ ಹಿರಿಯರಾದ ಡಿ.ಶಿವಲಿಂಗಪ್ಪಾ, ಶ್ರೀಮತಿ ಸರೋಜಿನಿ ದೊಡಮನಿ, ಮಲ್ಲಿನಾಥ ದೇಶಮುಖ, ದೇವಿಂದ್ರಪ್ಪ ಸಲಗರ, ಗೋಳಾ(ಬಿ), ವಿಜಯಕುಮಾರ ರಾವೂರ, ಮಲ್ಲಿಕಾರ್ಜುನ ಸನ್ನತಿ, ಮಂಗಲಾ ರಾವೂರ, ನೀಲಕಂಠ ದೊಡಮನಿ, ಬಕ್ಕಣ್ಣ ಗುರು, ಪರಶುರಾಮ ರಾವೂರ ಹಾಗೂ ಇತರರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…