ಕಲಬುರಗಿ: ಲೇಖಕ, ಹಿರಿಯ ಜೀವಿ ಬಸವರಾಜ ಕಾಮರೆಡ್ಡಿ ಅವರು ರಚಿಸಿದ ನನ್ನ ನಿಲುವು (ಆಧುನಿಕ ವಚನಗಳು) ಭಾಗ-1 ಹಾಗೂ ಭಾಗ-2 ಪುಸ್ತಕಗಳ ಬಿಡುಗಡೆ ಹಾಗೂ ವಚನಗಳ ಧ್ವನಿ ಮುದ್ರಿಕೆ ಬಿಡುಗಡೆ ಸಮಾರಂಭ ಸೆ.22ರಂದು ಬೆಳಗ್ಗೆ 10-45ಕ್ಕೆ ನಗರದ ಡಾ. ಎಸ್. ಎಂ. ಪಂಡಿತ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರ ಡಾ. ಎಸ್.ಬಿ. ಕಾಮರೆಡ್ಡಿ, ಡಾ. ಪ್ರತಿಮಾ ಎಸ್. ಕಾಮರೆಡ್ಡಿ, ಸಮೀಕ್ಷಾ-ಪ್ರತೀಕ್ಷಾ ತಿಳಿಸಿದ್ದಾರೆ.
ಮುಗಳನಾಗಾಂವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ರು ಸಾನ್ನಿಧ್ಯ ವಹಿಸಲಿದ್ದು, ಸಂಸದ ಡಾ. ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವಿ.ಜಿ. ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಈಶ್ವರಯ್ಯ ಮಠ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ಇದೇವೇಳೆ ನಮ್ಮ ತಂದೆ-ತಾಯಂದಿರಾದ ಬಸವರಾಜಪ್ಪ ಕಾಮರೆಡ್ಡಿ ಅವರ 92ನೇ ಜನ್ಮ ದಿನ ಹಾಗೂ ಗೌರಮ್ಮ ಬಸವರಾಜಪ್ಪ ಅವರ 78ನೇ ಜನುಮ ದಿನಾಚರಣೆ ಆಚರಿಸಲಾಗುವುದು. -ಡಾ. ಎಸ್.ಬಿ. ಕಾಮರೆಡ್ಡಿ
ಶಾಸಕರಾದ ಡಾ. ಪ್ರಿಯಾಂಕ್ ಖರ್ಗೆ, ದತ್ತಾತ್ರೇಯ ಪಾಟೀಲ, ಕನೀಜಾ ಫಾತಿಮಾ, ಎಂ.ವೈ. ಪಾಟೀಲ, ವೆಂಕಟರೆಡ್ಡಿ ಮುದ್ನಾಳ, ಶರಣಬಸಪ್ಪ ದರ್ಶನಾಪುರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೆಲ್ಕೂರ, ಡಾ.ಅಜಯಸಿಂಗ್, ಸುಭಾಷ ಆರ್. ಗುತ್ತೇದಾರ, ಡಾ. ಅವಿನಾಶ ಜಾಧವ, ನರಸಿಂಹ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ,ಶರಣಪ್ಪ ಮಟ್ಟೂರ, ಡಾ. ಚಂದ್ರಶೇಖರ ಪಾಟೀಲ, ತಿಪ್ಪಣಪ್ಪ ಕಮಕನೂರ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಡಾ. ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷರಾದ ಡಾ.ಬಿ.ಜಿ. ಜವಳಿ, ಬಸವರಾಜ ಭೀಮಳ್ಳಿ, ಶಶೀಲ್ ನಮೋಶಿ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ನನ್ನ ನಿಲುವು- ವಚನ ಸಂಗೀತವನ್ನು ಬೀದರ್ ನ ಪಂ. ಶಿವಕುಮಾರ ಪಾಂಚಾಳ, ನನ್ನ ನಿಲುವು-ವಚನ ನೃತ್ಯ ರೂಪಕವನ್ನು ಗಿರಿಜಾದೇವಿ ಸಂಗೀತ ಮತ್ತು ನೃತ್ಯ ಕಲಾ ಮಂದಿರದ ವಿದ್ಯಾರ್ಥಿನೀಯರು ಮಾಡಲಿದ್ದು, ನಿರ್ದೇಶನವನ್ನು ವಿನ್ಯಾಸ ಧರ್ಮಗಿರಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.