ರೈತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ: ಬಿ. ವೈ ವಿಜಯೇಂದ್ರ

ಕಲಬುರಗಿ: ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ರೈತರಿಗೆ ಪರಿಹಾರ ನೀಡಲು ವಿಫಲವಾದ ಕರ್ನಾಟಕ ಸರಕಾರವು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ರೈತರಿಗೆ ನಾಲ್ಕೈದು ಸಾವಿರ ಕೋಟಿ ಕೊಡಲು ಸಿದ್ದರಾಮಯ್ಯ ಸರಕಾರಕ್ಕೆ ನೆನಪಾಗಲಿಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಕಮಲಾಪುರದಲ್ಲಿ ಮಂಗಳವಾರ ರಾಂಪುರೆ ಮೈದಾನದಲ್ಲಿ ಏರ್ಪಡಿಸಿದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಬರಗಾಲದಿಂದ ತತ್ತರಿಸುತ್ತಿದ್ದು ಒಟ್ಟು 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೈದರೂ ಪರಿಹಾರ ನೀಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಆರೋಪ
ಹೊರಿಸುತ್ತಿದ್ದಾರೆ.

ದುಷ್ಟ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಕೂಡ ಬೆನ್ನು ಹಿಡಿದು ಬರುತ್ತದೆ. ದೇವರು ಮೆಚ್ಚುವ ಹಾಗೆ ಕೆಲಸ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಾಗ ಪ್ರವಾಹ ಬಂದರೂ ಸಮರ್ಥವಾಗಿ ನಿರ್ವಹಣೆ ಮಾಡಿದರು. ಪ್ರಕೃತಿ ವಿಕೋಪ ಪರಿಹಾರ ನಿಯಮದಂತೆ ಒಂದು ಮನೆಗೆ ಒಂದು ಲಕ್ಷ ನಿಗದಿಯಾಗಿದ್ದರು 5 ಲಕ್ಷ ವಿತರಿಸಿದರು. ಬೆಳೆ ಹಾನಿಯಾದರೆ ಹಿಟ್ಟರಿಗೆ 14,000 ತೋಟಗಾರಿಕಾ ಬೆಳೆಗೆ 24,000 ಪರಿಹಾರ ನೀಡಿದರು. ಕೇಂದ್ರ ಸರಕಾರದ ಅನುದಾನಕ್ಕೆ ಅವರು ಕಾಯಲಿಲ್ಲ.ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ 10ಸಾವಿರ ಕೋಟಿ ಕೊಡಲು ತಯಾರಿದ್ದರೂ ಬಡ ರೈತರ ಸಂಕಷ್ಟಕ್ಕೆ ಸ್ಪಂದಿಸಿ ನಾಲ್ಕೈದು ಸಾವಿರ ಕೋಟಿ ರೂಪಾಯಿಯಾದರೂ ಕೊಡಲು ಹಿಂದೇಟು ಹಾಕುತ್ತಿದ್ದಾರೆ.

ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿಲ್ಲ ಆದರೆ ಪುಕ್ಸಟ್ಟೆ ಭಾಷಣವನ್ನು ಮಾಡಿ ಜನರ ಜೇಬಿಗೆ ಕತ್ತರಿ ಹಾಕಿ ನಾಲ್ಕು ಸಾವಿರದಿಂದ ಎಂಟು ಸಾವಿರದವರೆಗೆ ಪ್ರತಿ ತಿಂಗಳು ವಸೂಲಿ ಮಾಡಿದ ಹಣವನ್ನು ಹಂಚುತ್ತಿದ್ದಾರೆ. ಉಚಿತ ಬಸ್ ಭಾಗ್ಯ ಎಂದು ಹೇಳಿ ಪುರುಷರ ಟಿಕೆಟ್ ದರವನ್ನು ಹೆಚ್ಚಳ ಮಾಡಿ ವಸೂಲಿ ಮಾಡುತ್ತಿದ್ದಾರೆ.

ಹತ್ತು ಕಿಲೋ ಅಕ್ಕಿ ಕೊಡುವುದಾಗಿ ಹೇಳಿ ಈಗ ಕೇಂದ್ರ ಸರಕಾರದ ಮೋದಿ ನೀಡಿದ ಐದು ಕಿಲೋ ಅಕ್ಕಿ ಮಾತ್ರ ವಿತರಣೆ ಯಾಗುತ್ತಿದೆ. ರೈತರ ಪಂಪ್ ಸೆಟ್ ವಿದ್ಯುತ್ ಸಂಪರ್ಕಕ್ಕೆ ಯಡಿಯೂರಪ್ಪ ಸರಕಾರ ಇದ್ದಾಗ ಕೇವಲ 25 ಸಾವಿರವಿದ್ದರೆ ಈಗ 2 ಲಕ್ಷ ರೂಪಾಯಿ ವರೆಗೆ ಖರ್ಚಾಗುತ್ತದೆ.ಕಾಂಗ್ರೆಸ್ ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುವ ಸರಕಾರವಾಗಿದೆ. ಆದರೆ ಕೇಂದ್ರ ಸರಕಾರದಲ್ಲಿ ಮೋದಿಯವರು 45 ಕಿಲೋ ತೂಕದ ಯೂರಿಯಕ್ಕೆ 2800 ರೂಪಾಯಿ ಖರ್ಚಾಗುತ್ತಿದ್ದರೂ ಕೇವಲ 260 ರಿಂದ 280 ರೂಪಾಯಿಗೆ ನೀಡುತ್ತಿದ್ದಾರೆ. ಡಿಎಪಿಗೆ 2780 ಪ್ರತಿ ಚೀಲಕ್ಕೆ ಖರ್ಚಾಗುತ್ತಿದ್ದರೂ ಕೇವಲ 1900 ರೂಪಾಯಿಗೆ ವಿತರಿಸಲಾಗುತ್ತಿದೆ. ರೈತರ ರಸಗೊಬ್ಬರಕ್ಕಾಗಿ ಕೇಂದ್ರ ಸರಕಾರವು ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ಸಬ್ಸಿಡಿ ನೀಡುತ್ತಿದೆ ಎಂದು ವಿಜಯೇಂದ್ರ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ಅಭಿವೃದ್ಧಿ ಕುಂಠಿತವಾಗಿದ್ದು ತುಷ್ಟಿಕರಣ ರಾಜಕಾರಣದಿಂದ ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಹುಬ್ಬಳ್ಳಿಯ ನೇಹಾ ಳನ್ನು ಫಯಾಜ್ ಎಂಬ ಪಾತಕಿ ಬರ್ಬರ ಹತ್ಯೆ ಮಾಡಿದ ಘಟನೆಯನ್ನು ವೈಯಕ್ತಿಕ ಘಟನೆ ಎಂದು ಸರಕಾರ ಹೇಳಿಕೆ ನೀಡಿತು.

ಯಾದಗಿರಿಯಲ್ಲಿ ದಲಿತ ಯುವಕನನ್ನು ಕೊಲೆ ಮಾಡಿದ ಘಟನೆ ಇವೆಲ್ಲ ತುಷ್ಟಿ ಕರಣ ನೀತಿಗೆ ಸಾಕ್ಷಿಗಳಾಗಿವೆ. ಬೆಳಗಾವಿ ವಿಧಾನಸೌಧ ಅಧಿವೇಶನ ಸಂದರ್ಭದಲ್ಲಿ ಪಕ್ಕದಲ್ಲೇ ಮಹಿಳೆಯೊಬ್ಬಳ ವಿವಸ್ತ್ರ ಘಟನೆ ನಡೆದರರೂ ಮುಖ್ಯಮಂತ್ರಿಗಳು ಅಲ್ಲಿಗೆ ತೆರಳಿ ಆ ತಾಯಿಗೆ ಧೈರ್ಯ ಹೇಳಲಿಲ್ಲ. ಪರಿಹಾರವನ್ನು ಕೊಡಲಿಲ್ಲ . ನಾನು ಹೋಗಿ ಭೇಟಿ ಮಾಡಿ ಸಾಂತ್ವನ ಹೇಳಿದೆ ಎಂದು ದೂರಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 10 ವರ್ಷಗಳ ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಆಡಳಿತ ನೀಡಿ ದ್ದಾರೆ. ನಾನು ದೇಶದ ಪ್ರಧಾನಿ ಅಲ್ಲ, ದೇಶದ ಪ್ರಧಾನ ಸೇವಕ ಎಂದು ವಿಶ್ರಾಂತಿ ಇಲ್ಲದೆ ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಏಕೈಕ ಪ್ರಧಾನಿ ನರೇಂದ್ರ ಮೋದಿಯವರು.ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ 12 ಲಕ್ಷ ಕೋಟಿ ರೂಪಾಯಿಯ ಹಗರಣ ನಡೆದಿತ್ತು ಎಂದು ಆರೋಪಿಸಿದರು.

ಅಂಬೇಡ್ಕರ್ ರವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಗೆ ಅಂಬೇಡ್ಕರ್ ಅವರ ಹೆಸರು ಹೇಳಲು ಅರ್ಹತೆ ಇಲ್ಲ ಮತ್ತು ಡೋಂಗಿ ರಾಜಕಾರಣ ಮಾಡುತ್ತಿದೆ. ಅವರ ಹೆಸರನ್ನು ಉಚ್ಚರಿಸಲು ಕಾಂಗ್ರೆಸಿಗರಿಗೆ ನೈತಿಕ ಹಕ್ಕಿಲ್ಲ. ಅಂಬೇಡ್ಕರ್ ಅವರನ್ನು ಎರಡು ಸಲ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದ್ದಲ್ಲದೆ ಅವರು ನಿಧನರಾದಾಗ ಅಂತ್ಯ ಸಂಸ್ಕಾರಕ್ಕೂ ಸ್ಥಳ ನೀಡದೆ ದ್ರೋಹ ಮಾಡಿತು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಂಚ ತೀರ್ಥ ಗಳೆಂದು ಪ್ರಸಿದ್ಧಿ ಪಡೆದ ಹುಟ್ಟಿದ ಮನೆ, ಲಂಡನ್ ನಲ್ಲಿ ಶಿಕ್ಷಣ ಪಡೆದ ಮನೆ ದೆಹಲಿಯಲ್ಲಿ ಸಂವಿಧಾನ ಬರೆದ ಮನೆ, ಬೌದ್ಧ ಸ್ವೀಕಾರ ಮಾಡಿದ ಪುಣ್ಯಭೂಮಿ ಹಾಗೂ ಅಂತ್ಯ ವಿಧಿ ನೆರವೇರಿಸಿದ ಮುಂಬೈಯ ಪವಿತ್ರ ಸ್ಥಳವನ್ನು ಅಭಿವೃದ್ಧಿಪಡಿಸಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಅಂಬೇಡ್ಕರ್ ಅವರಿಗೆ ವಿ.ಪಿ ಸಿಂಗ್ ಸರಕಾರವಿ ದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರ ಶಿಫಾರಸಿನ ಮೇರೆಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸ್ಸಿಗೆ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಉಳಿದಿಲ್ಲ ಎಂದು ಟೀಕಿಸಿದರು.

ದೇಶದ ಸುರಕ್ಷತೆ, ಉತ್ತಮ ಭವಿಷ್ಯ, ಅಭಿವೃದ್ಧಿಯ ದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಈ ದೇಶದ ಜನತೆ ಈಗಾಗಲೇ ತೀರ್ಮಾನ ಮಾಡಿದ್ದು ಕೇಂದ್ರದಲ್ಲಿ ಮೋದಿ ಸರಕಾರ ರಚನೆಯಾಗುವುದು ಖಚಿತವಾಗಿದೆ. 40 ಕ್ಷೇತ್ರ ಗೆಲ್ಲಲಾಗದ ಕಾಂಗ್ರೆಸ್ ಗೆ ಮತ ನೀಡಬೇಕಾ? ಅಥವಾ 400 ಸ್ಥಾನಗಳನ್ನು ಗೆದ್ದು ಮೋದಿ ಅವರ ಜೊತೆ ಕುಳಿತು ಕೊಳ್ಳುವ ಅಭ್ಯರ್ಥಿಗೆ ಮತ ನೀಡಬೇಕಾ? ಎಂಬುದನ್ನು ಮತದಾರರು ತೀರ್ಮಾನಿಸಬೇಕಾಗಿದೆ. ಕಲ್ಬುರ್ಗಿ ಲೋಕಸಭಾ ಕ್ಷೇತ್ರದಿಂದ ಡಾ. ಉಮೇಶ್ ಜಾಧವ್ ಅವರನ್ನು ಈ ಬಾರಿ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಲಂಬಾಣಿ ಭಾಷೆಯಲ್ಲಿ ಮಾತನಾಡುತ್ತಾ ಬಂಜಾರ ಸಮುದಾಯದ ಪವಿತ್ರ ಕ್ಷೇತ್ರ ಸೂರಗೊಂಡನ ಕೊಪ್ಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿದ್ದಾಗ ಹತ್ತಾರು ಕೋಟಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯ ಕೈಗೊಂಡರು ಎಂದಾಗ ಸಭೆಯಲ್ಲಿ ಜನರು ಕರತಾಡನದೊಂದಿಗೆ ಸಂತಸ ವ್ಯಕ್ತಪಡಿಸಿದರು. ಸೇರಿದ್ದ ಲಂಬಾಣಿ ಸಮುದಾಯದ ಜನರಲ್ಲಿ ಉತ್ಸಾಹ ಮಾಡಿತು.

ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್, ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಶಾಸಕರಾದ ಬಸವರಾಜ ಮತ್ತಿ ಮೂಡು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಚಂದು ಪಾಟೀಲ್, ಬಾಬುರಾವ್ ಚೌಹಾಣ್, ನಾಮದೇವ ಕರಹರೆ ಶರಣಬಸಪ್ಪ ಪಾಟೀಲ್ ಹರ್ಷವರ್ಧನ ಗುಗಳೆ ಸಿದ್ದರಾಮಯ್ಯ ಪಾಟಿಲ್ ಗೌತಮ್ ಪಾಟೀಲ್ ಶಶಿಕಲಾ ತೆಂಗಳಿ ಸಂಗಮೇಶ್ ವಾಲಿ ರಾಜಶೇಖರ್ ದೋಶೆಟ್ಟಿ ಜಗನ್ನಾಥ್ ಮಾಲಿಪಾಟೀಲ್ ಶಿವಕುಮಾರ್ ರಾಜಕುಮಾರ್ ಕೋಟಿ, ತಮ್ಮೇಗೌಡ ಗಂಗಪ್ಪ ಗೌಡ, ಸುರೇಶ್ ಬಾಬು ಹನುಮಂತ್ ರಾವ್ ಮಾಲಾಜಿ, ಶರಣು ತಳ್ಳಿಕೆರೆ ಜಯಶ್ರೀ ಮತ್ತಿಮುಡು ಮತ್ತಿತರರು ಉಪಸ್ಥಿತರಿದ್ದರ

ಅಳಿಮಯ್ಯನಿಗೆ ನೋಡಿ ಮತ ಹಾಕಿ:  ಬಿ.ಎಸ್ ಯಡಿಯೂರಪ್ಪನವರು ಕಲ್ಯಾಣ ಕರ್ನಾಟಕದ ಮೇಲೆ ವಿಶೇಷ ಪ್ರೀತಿಯಿಂದ ಮುಖ್ಯಮಂತ್ರಿಗಳಿದ್ದಾಗ ಅನೇಕ ಯೋಜನೆ ಮತ್ತು ಅನುದಾನ ಕೊಟ್ಟು ಸಂಬಂಧ ಹಟ್ಟಿಗೊಳಿಸುವು ದರ ಜೊತೆಗೆ ನನಗೆ ಕಲಬುರ್ಗಿಯಿಂದಲೇ ಹೆಣ್ಣನ್ನು ನೋಡಿ ಮದುವೆ ಮಾಡಿ ಸಂಬಂಧವನ್ನು ಇನ್ನು ಗಟ್ಟಿಗೊಳಿಸಬೇಕು. ಕೇವಲ ಅಳಿಯನನ್ನು ನೋಡಿ ಮತ ಹಾಕಬೇಡಿ.ಯಾವ ಅಳಿಯ ಈ ಭಾಗಕ್ಕಾಗಿ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಎಂದು ನೋಡಿ ನಿಮ್ಮ ಓಟು ನೀಡಬೇಕು.

ಕಲಬುರಗಿ ಗ್ರಾಮೀಣ ಮತಕ್ಷೇತ್ರವು ಬಿಜೆಪಿಯ ಅತ್ಯಂತ ಬಲಿಷ್ಠ ಕ್ಷೇತ್ರವಾಗಿದ್ದು 2019ರಲ್ಲಿ ಬಿಜೆಪಿಗೆ 20,000 ಮತಗಳ ಮುನ್ನಡೆ ನೀಡಿದ್ದು 2023ರಲ್ಲಿ ಶಾಸಕನಾಗಿ ನನಗೆ 13000 ಮತಗಳ ಮುನ್ನಡೆ ನೀಡಿ ಗೆಲ್ಲಿಸಿದ್ದಾರೆ 2024ರಲ್ಲಿ 25 ಸಾವಿರ ಮತಗಳ ಮುನ್ನಡೆಯನ್ನು ಕಮಲದ ಗುರುತು ಪಡೆಯಲಿದೆ ಎಂದು ಶಾಸಕ ಬಸವರಾಜ್ ಮತ್ತಿಮುಡು ಭರವಸೆ ನೀಡಿದರು.

ಕ್ಷೇತ್ರದ ಜನತೆ ಸದಾ ಬಿಜೆಪಿಯನ್ನು ಬೆಂಬಲಿಸುತ್ತಿದ್ದು ಜನರ ಪೂರ್ಣ ಸಹಕಾರದಿಂದ ನಮ್ಮ ಅಳಿಯ ಹಾಗೂ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಗೆ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಒಂದುವರೆ ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ಸನ್ನು ಸೋಲಿಸುವುದು ಖಚಿತ ಎಂದು ಜನಸ್ತೋಮದ ಕರತಾಂಡದೊಂದಿಗೆ ಹೇಳಿದರು.

ಬಿಎಸ್ ಯಡಿಯೂರಪ್ಪ ಅವರ ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮೀಣ ಕ್ಷೇತ್ರದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಬಿವೈ ವಿಜಯೇಂದ್ರ ಅವರ ಮೂಲಕ ಅನುದಾನ ಮಾಡಿಸಿ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಅದಕ್ಕಾಗಿ ಕ್ಷೇತ್ರದ ಜನತೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

16 mins ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

23 mins ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

26 mins ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

1 hour ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

4 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

7 hours ago