ದೇಶವ್ಯಾಪಿ 36 ರೈಲು ಬಿಟ್ಟರೂ ಕಲಬುರಗಿಯಲ್ಲಿ ಬಿಡಲಿಲ್ಲವಲ್ಲ: ಡಾ. ಉಮೇಶ್ ಜಾಧವ್

0
22

ಕಲಬುರಗಿ: ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮವಾಗಿದ್ದು ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆಯ ಸಚಿವರಾಗಿದ್ದಾಗ ದೇಶಾದ್ಯಂತದ 36 ರೈಲು ಬಿಟ್ಟರೂ ಕಲಬುರ್ಗಿಯಿಂದ ಒಂದೇ ಒಂದು ರೈಲು ನಿಮಗೆ ಬಿಡಲಾಗಲಿಲ್ಲವಲ್ಲ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿರುಗೇಟು ನೀಡಿದರು.

ಕಮಲಾಪುರದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಡಾ. ಉಮೇಶ್ ಜಾಧವ್ ಎರಡು ರೈಲು ಬಿಟ್ಟಿದ್ದನ್ನು ಸಾಧನೆ ನ್ನು ಎನ್ನುತಿದ್ದಾರೆ, ನಾನು 36 ರೈಲುಗಳನ್ನು ಬಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿ ದೇಶ ವ್ಯಾಪಿ 36 ರೈಲು ಬಿಟ್ಟರೂ ಕಲ್ಬುರ್ಗಿಯ ಜನತೆಗಾಗಿ ಒಂದೇ ಒಂದು ರೈಲು ಬಿಡಲು ನಿಮ್ಮಿಂದ ಯಾಕೆ ಸಾಧ್ಯವಾಗಲಿಲ್ಲವಲ್ಲ. ಸ್ವಾತಂತ್ರ್ಯ ನಂತರ ವಂದೇ ಭಾರತ್ ಸೇರಿದಂತೆ ಎರಡು ರೈಲುಗಳನ್ನು ಕಲ್ಬುರ್ಗಿಯಿಂದ ಆರಂಭಿಸಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ. ವಂದೇ ಭಾರತ್ ರೈಲು ಟಿಕೆಟ್ ದರವು ಎಂಟು ಸಾವಿರ ರೂಪಾಯಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿ ಟೀಕೇಟಿನ ದರ 1500 ಆಗಿದೆ. ಇದು ಕೇವಲ ಆರು ಗಂಟೆಗಳಲ್ಲಿ ಬೆಂಗಳೂರು ತಲುಪುವ ವಿಶೇಷ ಸೌಲಭ್ಯದ ರೈಲು ಎಂದು ಖರ್ಗೆಯವರ ಸುಳ್ಳನ್ನು ಬಹಿರಂಗಗೊಳಿಸಿದರು.

Contact Your\'s Advertisement; 9902492681

ಪ್ರಿಯಾಂಕ ಖರ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿ ಡಿಎನ್ಎ ಕಿಟ್ ಕೊಡುವುದಾಗಿ ಹೇಳಿದ್ದಾರೆ. ನಿಮ್ಮದು ಕುಟುಂಬ ರಾಜಕಾರಣವಲ್ಲದೆ ಮತ್ತೇನು? ಕಲ್ಬುರ್ಗಿ ಮತಕ್ಷೇತ್ರದಿಂದ ತಮ್ಮ ಅಳಿಯನನ್ನು ಬಿಟ್ಟರೆ ಮತ್ತೊಬ್ಬ ದಲಿತ ವ್ಯಕ್ತಿಗೆ ಟಿಕೆಟ್ ಕೊಡಲು ಯಾಕೆ ಮನಸ್ಸು ಮಾಡಲಿಲ್ಲ?. ನನ್ನ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ಪ್ರಿಯಾಂಕ ಖರ್ಗೆ ಕೊಲೆ ಬೆದರಿಕೆ ಬಂದಿರುವುದಾಗಿ ಆರೋಪಿಸಿದ್ದರು.

24 ಗಂಟೆಗಳಲ್ಲಿ ಬೆದರಿಕೆ ಹಾಕಿದವರನ್ನು ಬಂಧಿಸಿ ಎಂದು ಸವಾಲೆಸೆದರೂ ಆ ಕೆಲಸ ಮಾಡದೆ ಮೌನವಾಗಿದ್ದಾರೆ.ಶ್ಯಾಡೊ ಸಿಎಂ, ಸುಪರ್ ಸಿಎಂ ಆದ ಪ್ರಿಯಾಂಕ ಖರ್ಗೆಯವರು ಯಾಕೆ ಉತ್ತರಿಸುತ್ತಿಲ್ಲ? . ಇಬ್ಬರು ಉಸ್ತುವಾರಿ ಸಚಿವರುಗಳು ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಉಸಿರುಗಟ್ಟಿ ಕೆಲಸ ಮಾಡುತ್ತಿದ್ದಾರೆ.ಕಾಂಗ್ರೆಸ್ ಹಿಂದುಳಿದವರ ಮೀಸಲಾತಿಯನ್ನು ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ನೀಡಲು ಹುನ್ನಾರ ನಡೆಸಿದೆ.

ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದರು. ಕಾಂಗ್ರೆಸ್ ನವರು ಒಂದು ಸುಳ್ಳನ್ನು 10 ಬಾರಿ ಹೇಳಿದರೆ ನಿಜವಾಗುತ್ತದೆ ಎಂಬ ಒಣ ಭ್ರಮೆಯಲ್ಲಿದ್ದಾರೆ. ಮೋದಿ ಕೊಡುಗೆ ಏನು? ಜಾಧವ್ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ಎತ್ತುವ ಕಾಂಗ್ರೆಸಿಗರಿಗೆ ಎಸಿಸಿ ಶಹಾಬಾದ್, ಕುರುಕುಂಟಾದ ಸಿಸಿಐ ಕಾರ್ಖಾನೆ, ಎಂ ಎಸ್ ಕೆ ಮಿಲ್ ಮುಚ್ಚಿದ್ದು ನೆನಪಾಗುವುದಿ ಲ್ಲವೇ? ಬೆಣ್ಣೆ ತೋರಾ, ಎಡದಂಡೆ ಮತ್ತು ಬಲದಂಡೆ ಯೋಜನೆಯಲ್ಲಿ 200 ರಿಂದ 300 ಕೋಟಿ ರೂಪಾಯಿಯ ಕಳಪೆ ಕೆಲಸ ಮಾಡಿದರೂ ರೈತರ ಹೊಲಗಳಿಗೆ ನೀರು ಹರಿಸಲಾಗದ ಭ್ರಷ್ಟ ಕಾಂಗ್ರೆಸ್ ಆಡಳಿತದ ಬಗ್ಗೆ ಮಾತನಾಡುತ್ತಿಲ್ಲ. ಐದು ವರ್ಷಗಳ ನನ್ನ ಅವಧಿಯಲ್ಲಿ ಎರಡು ವರ್ಷ ಕರೋನದಿಂದ ಕಳೆದು ಹೋದರೂ ಕೇವಲ ಮೂರು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ಕಾಂಗ್ರೆಸ್ 65 ವರ್ಷಗಳ ಆಳ್ವಿಕೆಯಲ್ಲಿ ನಮ್ಮ ಭಾಗಕ್ಕೆ ಕೊಟ್ಟದ್ದು ಬಡತನವಾಗಿದೆ. ಇಡೀ ದೇಶದಲ್ಲಿ ವಾರ್ಷಿಕ ತಲಾ ಆದಾಯ ಅತ್ಯಂತ ಕಡಿಮೆ ಮತ್ತು ಆರೋಗ್ಯ ಸೂಚ್ಯಂಕದಲ್ಲಿ ಅತಿ ಕೆಳಗಿನ ಸ್ಥಾನವು ಕಲ್ಬುರ್ಗಿ ಜಿಲ್ಲೆಯದು.ಇದು ಕಾಂಗ್ರೆಸ್ ಆಡಳಿತ ನೀಡಿದ ಕೊಡುಗೆಯಾಗಿದೆ. ಕಲ್ಬುರ್ಗಿ ಗ್ರಾಮೀಣ, ಸೇಡಂ, ಚಿಂಚೋಳಿ, ಗುರುಮಠಕಲ್ ಮುಂತಾದಡೆಗಳಿಂದ ಅತ್ಯಧಿಕ ಸಂಖ್ಯೆಯ ಜನರು ಉದ್ಯೋಗಕ್ಕಾಗಿವಲಸೆ ಹೋಗುತ್ತಿದ್ದು ಈ ಸಮಸ್ಯೆ ನಿವಾರಣೆಗೆ ಉದ್ಯೋಗ ಸೃಷ್ಟಿಗಾಗಿ ಪ್ರಧಾನ ಮಂತ್ರಿ ಮೋದಿಯವರು ಕಲ್ಬುರ್ಗಿಯಲ್ಲಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಮೆಗಾ ಜವಳಿ ಪಾರ್ಕ್ ಯೋಜನೆ ನೀಡಿದ್ದಾರೆ.

ಇದರಲ್ಲಿ ನಾಲ್ಕನೇ ತರಗತಿ ಫೇಲ್ ಆದವರಿಗೂ 20 ರಿಂದ 50ಸಾವಿರದ ವರೆಗೆ ಗಳಿಕೆಯ ಉದ್ಯೋಗ ಸಿಗಲಿದೆ. ಚೆನ್ನೈ – ಸೂರತ್ ನಡುವಣ ಭಾರತ್ ಮಾಲಾ ರಸ್ತೆಯು 1475 ಕೋಟಿ ರೂಪಾಯಿ ವೆಚ್ಚದಲ್ಲಿ ಅಫ್ಜಲ್ಪುರ ಹಾಗೂ ಜೇವರ್ಗಿ ಮತಕ್ಷೇತ್ರಗಳಲ್ಲಿ 71 ಕಿಲೋಮೀಟರ್ ನಿರ್ಮಾಣಗೊಳ್ಳುತ್ತಿದೆ.

ಅಮೃತ್ ಭಾರತ ರೈಲು ನಿಲ್ದಾಣ ಯೋಜನೆಯಡಿ ಕಲ್ಬುರ್ಗಿ ಶಹಾಬಾದ್, ವಾಡಿ, ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ ಸಿಕ್ಕಿದೆ. ಸೋಲಾಪುರದಲ್ಲಿದ್ದ ವಿಶೇಷ ಚೇತನರಿಗಾಗಿ ಇರುವ ಪಾಸ್ ವಿತರಣಾ ಕೇಂದ್ರವನ್ನು ಹಿಂದಿನ ರೈಲ್ವೆ ಸಚಿವರಾದ ಸುರೇಶ ಅಂಗಡಿಯವರು ಕಲಬುರ್ಗಿಗೆ ನೀಡಿ ಮಹದುಪಕಾರ ಮಾಡಿದ್ದಾರೆ. ಹೀಗೆ ನೂರಾರು ಕೆಲಸಗಳನ್ನು ಮಾಡಿದರು.

ಕಾಂಗ್ರೆಸ್ಸಿನ ಕಣ್ಣೀರಿಗೆ ಯಾವುದೂ ಕಾಣುತ್ತಿಲ್ಲ. ಪ್ರಜ್ಞಾವಂತ ಮತದಾರರು ಮೇ 7ನೇ ತಾರೀಕಿಗೆ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನ ಮಾಡಲು ಹಾಗೂ ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಲು ಕಮಲದ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here