ಮನೆ‌-ಮನೆಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ

0
66

ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನ‌ ದಿನ, ಸಮಯ,‌ ಮತಗಟ್ಟೆ ವಿಳಾಸ‌ ವಿವರ ಇರುವ ವೋಟರ್ ಸ್ಲಿಪ್ ಮತ್ತು ವೋಟರ್ ಗೈಡ್ ಗಳನ್ನು ವಿತರಣೆ ಮಾಡುವ ಕಾರ್ಯ ನಿರಂತರವಾಗಿ ಸಾಗಿದ್ದು, ಬುಧವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಅವರು ಜೇವರ್ಗಿ ತಾಲೂಕಿನಲ್ಲಿ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಿದರು.

ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಸಂಖ್ಯೆ 52ರ ವ್ಯಾಪ್ತಿಯ ವಿವಿಧ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು ಮತದಾರರಿಗೆ ಮಾಹಿತಿ ಪತ್ರ ಹಾಗೂ ವೋಟರ್ ಸ್ಲಿಪ್ ವಿತರಿಸಿ ಬರುವ ಮೇ 7 ರಂದು ತಪ್ಪದೆ‌ ಮತದಾನ ಮಾಡುವಂತೆ ಕೇಳಿಕೊಂಡರು.

Contact Your\'s Advertisement; 9902492681

ಪ್ರತಿಯೊಬ್ಬರಿಗೆ ಸಂವಿಧಾನ‌ಬದ್ಧವಾಗಿ ಮತದ ಹಕ್ಕು ನೀಡಲಾಗಿದೆ. ಉತ್ತಮ‌ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಲ್ಲಿದ್ದು, ಈ ಅಧಿಕಾರದಿಂದ ವಿಮುಖರಾಗಬಾರದು ಎಂದು ಅವರು ಕರೆ ನೀಡಿದರು.

ಜಿಲ್ಲೆಯ ಜನ ಉದ್ಯೋಗ ಅರಸಿ ದೂರದ ಬೆಂಗಳೂರು, ಮುಂಬೈ, ಪುಣೆ ಕಡೆ ಹ ಹೋಗಿದ್ದು, ಮನೆ-ಮನೆ ಭೇಟಿ ಸಂದರ್ಭದಲ್ಲಿ ವಲಸೆ ಹೋದವರು ಮತದಾನ ದಿನದಂದು ಬಂದು ಮತ‌ ಚಲಾಯಿಸುವಂತೆ ತಿಳಿಸಲು ಕುಟುಂಬ ವರ್ಗದವರಿಗೆ ಇದೇ‌ ಸಂದರ್ಭದಲ್ಲಿ ತಿಳಿಸಲಾಯಿತು.

ಜಿಲ್ಲೆಯ 2,378 ಮತಗಟ್ಟೆ ಪೈಕಿ 182 ಮತಗಟ್ಟೆಗಳಲ್ಲಿ ಹಿಂದಿನ‌ ಚುನಾವಣೆಯಲ್ಲಿ ಕಡಿಮೆ‌ ಮಾತದಾನ ಆಗಿದ್ದರಿಂದ ಇಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಕಾರ್ಯೋನ್ಮುಖವಾಗಿದೆ. ಮತದಾರರೊಂದಿಗೆ ಸಮಾಲೋಚಿಸಿ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಲಾಗುತ್ತಿದೆ ಎಂದರು. ತಾಲೂಕ ಪಂಚಾಯತ್ ಇ.ಓ. ರೇವಣಸಿದ್ದಪ್ಪ ಇದ್ದರು.

ಇದೇ‌ ರೀತಿ ಜಿಲ್ಲೆಯ ಎಲ್ಲಾ 9 ಕ್ಷೇತ್ರದಲ್ಲಿ ಮತದಾರರಿಗೆ ವೋಟರ್ ಸ್ಲಿಪ್ ಮತ್ತು ವೋಟರ್ ಗೈಡ್ ಗಳನ್ನು ಬಿ.ಎಲ್.ಓ ಗಳು ವಿತರಿಸುತ್ತಿದ್ದಾರೆ.

ತರಬೇತಿ ಕೇಂದ್ರಕ್ಕೂ ಭೇಟಿ: ಇದೇ‌ ಸಂದರ್ಭದಲ್ಲಿ ಜೇವರ್ಗಿ ಪಟ್ಟಣದಲ್ಲಿ ನಡೆಯುತ್ತಿದ್ದ ಪೋಲಿಂಗ್ ಸಿಬ್ಬಂದಿಗಳಿಗೆ ಎರಡನೇ ಹಂತದ ತರಬೇತಿ ಸ್ಥಳಕ್ಕೆ ಭೇಟಿ ನೀಡಿದ ಸಿ.ಇ.ಓ ಅವರು ತರಬೇತಿ ಕಾರ್ಯ ವೀಕ್ಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here