ಮಾಲಿಕಯ್ಯ ಗುತ್ತೇದಾರ್ ಪಕ್ಷಾಂತರಕ್ಕೆ ವ್ಯಂಗ್ಯ
ಅಫಜಲ್ಪುಪುರ: ತಾಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳು ಹೊಂದಾಣಿಕೆಯ (ಅಡ್ಜಸ್ಟ್ಮೆಂಟ್) ರಾಜಕಾರಣ ಮಾಡುತ್ತಿದ್ದು ಈಗ ಡಿಸಿಎಂ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡರಾದ ನಿತಿನ್ ಗುತ್ತೇದಾರ್ ಅವರು ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆಯಾದದ್ದಕ್ಕೆ ವ್ಯಂಗ್ಯವಾಡಿದರು.
ಅಫಜಲ್ಪುರ ಮಹಾಂತೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಬಿಜೆಪಿಯ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಹಾಲಿ ಮತ್ತು ಮಾಜಿಗಳು ಸೇರಿಕೊಂಡು ಹೊಂದಾಣಿಕೆ ರಾಜಕೀಯವನ್ನು ಮುಂದುವರಿಸುತ್ತಾ ಕದ್ದು ಮುಚ್ಚಿ ಲವ್ ಮಾಡುತ್ತಿದ್ದರು. ಆಗಾಗ ಹನಿಮೂನ್ ಕೂಡ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ರಾಜ್ಯದ ಡಿಸಿಎಂ ರಿಜಿಸ್ಟರ್ ಮದುವೆ ಮಾಡಿಸಿದ್ದಾರೆ ಎಂದು ವ್ಯಂಗ್ಯವಾಡುತ್ತ ಇಂತಹ ನಾಯಕರಿಂದ ತಾಲೂಕಿನ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.
ನನ್ನನ್ನು ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವಾಗ ಸಹೋದರರಾದ ಮಾಲೀಕಯ್ಯ ಅವರಲ್ಲಿ ಒಂದು ಮಾತನ್ನು ಕೇಳಿಲ್ಲ ಎಂಬುದು ಶುದ್ಧ ಸುಳ್ಳು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ ರಾಜೀವ್ ಅವರು ಅನೇಕ ಸಾರಿ ಕರೆ ಮಾಡಿ ಮಾತನಾಡಿದ್ದಾರೆ ಹಾಗೂ ನನ್ನ ಸಮ್ಮುಖದಲ್ಲಿಯೇ ದೂರವಾಣಿ ಕರೆ ಮಾಡಿದ್ದನ್ನು ನೋಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅಫ್ಜಲ್ಪುರದ ಅಳಿಯನಾದ ಬಿ. ವೈ ವಿಜಯೇಂದ್ರ ಅವರಿಗೆ ಮದುವೆಯಲ್ಲಿ ಉಡುಗೊರೆ ನೀಡಲಿಲ್ಲ.ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಆಪ್ಪಜಲ್ಪುರ ಮತಕ್ಷೇತ್ರದಿಂದ ಬಿಜೆಪಿಗೆ 40 ಸಾವಿರ ಮತಗಳ ಮುನ್ನಡೆಯನ್ನು ನೀಡುವುದರ ಮೂಲಕ ದೊಡ್ಡ ಕೊಡುಗೆಯನ್ನುಕೊಡಲಾಗುವುದು ಎಂದು ನಿತಿನ್ ಭರವಸೆ ನೀಡಿದರು.
ಈ ಕಾರಣಕ್ಕಾಗಿ ಇವತ್ತು ನನ್ನ ಮೇಲೆ ಪ್ರೀತಿ ಇಟ್ಟು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಾಯಂದಿರು, ಹಿರಿಯರು, ಯುವಕರು ಆಗಮಿಸಿ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಉತ್ತಮ ನಾಯಕತ್ವದಲ್ಲಿ ಚುನಾವಣೆ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲಿ 12 ಗೆಲುವು ಖಚಿತವಾಗಿದ್ದು ಉಳಿದ 14 ಕ್ಷೇತ್ರಗಳಲ್ಲೂ ಬಿಜೆಪಿಯ ಪಾಲಿಗೆ ಆಗಲಿದೆ. ಕಲ್ಬುರ್ಗಿ ಮತಕ್ಷೇತ್ರದಲ್ಲಿ ಡಾ. ಉಮೇಶ್ ಜಾಧವ್ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಲು ತಾಲೂಕಿನ ಜನತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.