ಸುರಪುರ: ಕುಂಬಾರ ಸಮಾಜದ ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದ ಸಮುದಾಯ ಭವನ ಕಾಮಗಾರಿ ಸಂಪೂರ್ಣವಾಗಿದ್ದರು ಇದುವರೆಗೆ ಸಮಾಜದ ಕಾಂiiಕ್ರಮಕ್ಕೆ ಒದಗಿಸಿಲ್ಲ,ಆದ್ದರಿಂದ ಕೂಡಲೆ ಸಮುದಾಯ ಭವನವನ್ನು ಸಮಾಜಕ್ಕೆ ನೀಡುವಂತೆ ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜಶೇಖರ ಕುಂಬಾರ ಜಿಲ್ಲಾಧಿಕಾರಿಗಳಿ ಒತ್ತಾಯಿಸಿದರು.
ನಗರದ ರಂಗಂಪೇಟೆಯ ಕುಂಬಾರ ಓಣಿಯ ಬಳಿ ನಿರ್ಮಿಸಲಾದ ಸಮುದಾಯ ಭವನದ ಕಾಮಗಾರಿ ಸಂಪೂರ್ಣ ಮುಗಿದಿದ್ದರಿಂದ ಸಮುದಾಯ ಭವನ ಕುಂಬಾರ ಸಮಾಜಕ್ಕೆ ಒದಗಿಸುವಂತೆ ಒತ್ತಾಯಿಸಿ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೆ ಅಂದಿನ ಸ್ಥಳಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ತಮ್ಮ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.ಈಗ ಸಮುದಾಯ ಭವನದ ಕಾಮಗಾರಿ ಸಂಪೂರ್ಣಗೊಂಡು ಒಂದು ವರ್ಷಕ್ಕಿಂತ ಹೆಚ್ಚು ಕಾಲವಾದರೂ ಲೊಕೋಪಯೋಗಿ ಇಲಾಖೆ ಇದುವರೆಗು ಭವನವನ್ನು ಸಮುದಾಯಕ್ಕೆ ವಹಿಸಿಕೊಟ್ಟಿಲ್ಲ.ಅತೀ ಹಿಂದುಳಿದಿರುವ ಕುಂಬಾರ ಸಮಾಜವು ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿದ್ದು,ಬಡ ಜನರು ಯಾವುದೆ ಸಭೆ,ಸಮಾರಂಭ ಮಾಡಲು ಖಾಸಗಿ ಕಟ್ಟಡಗಳಿಗೆ ದುಬಾರಿ ಬಾಡಿಗೆ ನೀಡಬೇಕಾದ ಪರಸ್ಥಿತಿ ಆದ್ದರಿಂದ ನಮ್ಮ ಕುಂಬಾರ ಸಮಾಜದ ಅನುಕೂಲಕ್ಕಾಗಿ ಶೀಘ್ರವೆ ಸಮುದಾಯ ಭವನವನ್ನು ಒದಗಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ,ನಂತರ ಮನವಿಯನ್ನು ತಹಸೀಲ್ದಾರ ಸುರೇಶ ಅಂಕಲಗಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ,ಕಾರ್ಯದರ್ಶಿ ಭೀಮರಾಯ ಕುಂಬಾರ,ವಕ್ತಾರ ನಿಂಗಣ್ಣ ಕುಂಬಾರ,ಅಂಬ್ರ್ರೇಶ ಕುಂಬಾರ,ಮಡಿವಾಳಪ್ಪ ಕುಂಬಾರ,ಮಲ್ಲಿಕಾರ್ಜುನ ಕುಂಬಾರ,ಬಸವರಾಜ ಕುಂಬಾರ,ಮಲ್ಲು ಮುಜಷ್ಠಳ್ಳಿ,ಆದಪ್ಪ ಕುಂಬಾರ,ಈರಪ್ಪ ಕುಂಬಾರ ಸೇರಿದಂತೆ ಅನೇಕರಿದ್ದರು.