ಬಿಸಿ ಬಿಸಿ ಸುದ್ದಿ

ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ಅನುಕೂಲವಾಗಿವೆ

ಶಹಾಬಾದ: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ.ಆದ್ದರಿಂದ ಕಾಂಗ್ರೆಸ್ ಮತ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಪೂಜಪ್ಪ ಮೇತ್ರೆ ಹೇಳಿದರು.

ಅವರು ತಾಲೂಕಿನ ವಡ್ಡರವಾಡಿಯಲ್ಲಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಮತಯಾಚಿಸಿ ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಬದುಕು ಕಟ್ಟುವ ವಿಚಾರಗಳಿಗೆ ಒತ್ತು ಕೊಡುತ್ತಿದೆ ಹೊರತು ಧರ್ಮದ ಆಧಾರದ ವಿಚಾರಗಳಿಗೆ ಅಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲ ಧರ್ಮದ ಜನರಿಗೆ ಅನುಕೂಲವಾಗಿದೆ.

ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ದೇವಾಲಯಗಳಿಗೆ ಹೋಗಿ ದರ್ಶನ ತೆಗೆದುಕೊಳ್ಳುತ್ತಿದ್ದಾರೆ. ಧರ್ಮಸ್ಥಳಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದರಿಂದ ಆದಾಯ ಹೆಚ್ಚಿಗೆ ಬರುತ್ತಿದೆ ಎಂದು ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿ ಮೋದಿ ತಮ್ಮ ಗ್ಯಾರಂಟಿ ಎಂದು ಬರೆಯುತ್ತಿದ್ದಾರೆ ಎಚ್ಚರವಿರಲಿ. ಅವರ ಗ್ಯಾರಂಟಿ ಸುಳ್ಳಿನಲ್ಲಿ, ನಮ್ಮ ಗ್ಯಾರಂಟಿಗಳು ಜನರಿಗೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಿದ ಅವರು ಕೇಂದ್ರದಲ್ಲಿ ಬಡವರ ಪರ ಸರ್ಕಾರ ಬರಲು ಆಶೀರ್ವಾದ ಮಾಡಿ ಎಂದರು.

ಹಿರಿಯ ಮುಖಂಡ ಭೀಮುಗೌಡ ಖೇಣಿ ಮಾತನಾಡಿ, ಕಳೆದ ಹತ್ತು ವರ್ಷದ ಅವಧಿಯಲ್ಲಿ ಜನರ ಮುಂದೇ ಮಾಡಿದ ಭಾಷಣದ ವಿಡಿಯೋಗಳನ್ನು ಮತ್ತೊಮ್ಮೆ ಮೆಲುಕು ಹಾಕಿ ನೋಡಿಕೊಳ್ಳಲಿ.ಅಂದು ನೀಡಿದ ಭರವಸೆಗಳು ಈಡೇರಿವೆ ಎಂದು ಆತ್ಮಾವಲೋಕನ ಮಾಡಿಕೊಂಡರೇ ಸಾಕು.ಅವರು ನೀಡಿದ ಭರವಸೆಗಳು ಶೂನ್ಯ ಎಂದು ಗೊತ್ತಾಗುತ್ತದೆ.ಕೇವಲ ಹತ್ತು ವರ್ಷಗಳಲ್ಲಿ ಧರ್ಮದ ನಡುವೆ ದ್ವೇಷ ಬಿತ್ತುವ ಹಾಗೂ ಸುಳ್ಳು ಹೇಳುವ ರಿಕಾರ್ಡ ಮಾಡಿದ್ದಾರೆ.ಆದರೆ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ.

ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್,ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ನೀಡಿದ್ದೆವೆ ಅಥವಾ ಇಲ್ಲ ಎಂಬುದನ್ನು ಜನರಿಗೆ ಹೋಗಿ ಕೇಳಿ? ಅವರೇ ಉತ್ತರಿಸುತ್ತಾರೆ.ಆದ್ದರಿಂದ ನುಡಿದಂತ ನಡೆದ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಕಪ್ಪ ಮುದ್ದಾ, ಅಂಬ್ರೇಶ ಮಾವನೂರ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಾತ್ಮರ ಬದುಕು, ಬರಹ ನಮ್ಮದಾಗಬೇಕು: ಸುರೇಶ ಬಡಿಗೇರ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ…

12 hours ago

ಸಿದ್ದಪ್ಪ ಹೊಸಮನಿಗೆ ಪಿಎಚ್.ಡಿ

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಸಿದ್ದಪ್ಪ ಹೊಸಮನಿ ಅವರು " ಡಾ. ಕೆ. ಆರ್.…

12 hours ago

ಕಲಬುರಗಿ; ಜಿಲ್ಲಾ ಮಾಸ್ಟರ್ ಟ್ರೇನರ್ಸ್ ಗಳಿಗೆ ತರಬೇತಿ

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಗೆ…

14 hours ago

ಸುರಪುರ:ವಾಸವಿ ಜಯಂತಿ ಆಚರಣೆ ಅದ್ಧೂರಿ ಮೆರವಣಿಗೆ

ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ…

14 hours ago

ಕೃಷಿ ಅಧಿಕಾರಿ ಬೀಜ ಗೊಬ್ಬರ ಮಾರಾಟ ಅಂಗಡಿಗೆ ಭೇಡಿ;ಬಿತ್ತನೆ ಬೀಜ ಪರಿಶೀಲನೆ

ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ…

14 hours ago

ಶ್ರೀ ವಾಸವಿ ಜಯಂತಿ ನಿಮಿತ್ತ ವಾಸವಿ ಮಾತೆಗೆ ತೊಟ್ಟಿಲ ಸೇವೆ

ಕಲಬುರಗಿ: ನಗರದ ಪುಟಾಣಿ ಗಲ್ಲಿಯಲ್ಲಿ ಶ್ರೀ ನಗರೇಶ್ವರ ದೇವ ಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜ ವತಿಯಿಂದ ಶ್ರೀ ವಾಸವಿ ಜಯಂತಿ…

14 hours ago