ಬಿಸಿ ಬಿಸಿ ಸುದ್ದಿ

ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಕಟ್ಟಾ ಅನುಯಾಯಿಯಾಗಿದ್ದ ಮಹಾತ್ಮ ಶರಣಬಸವೇಶ್ವರರು

ಕಲಬುರಗಿ: 12ನೇ ಶತಮಾನದ ಸಮಾನತೆ ಹರಿಕಾರ ಜಗತ್ತು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವೇಶ್ವರರ ತತ್ವ, ಆದರ್ಶ ಹಾಗೂ ಅವರ ಸಂದೇಶಗಳನ್ನು ಶರಣಬಸವೇಶ್ವರರು ತಮ್ಮ ಜೀವನದುದ್ದಕ್ಕೂ ಅಕ್ಷರ ಸಹ ಪಾಲಿಸಿಕೊಂಡು ಬಂದು ಕಾಯಕವೇ ಕೈಲಾಸವೆಂದು ಮನಗೊಂಡು ಜನಸೇವೆ ಮಾಡಿ ಜನಮನದಲ್ಲಿ ನೆಲೆಸಿದರು ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯದ ಕಾನ್ಫ್‍ರೆನ್ಸ್ ಹಾಲ್‍ನಲ್ಲಿ ಶುಕ್ರವಾರದಂದು ಜಗಜ್ಯೋತಿ ಬಸವೇಶ್ವರರ 891ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣ ಸಂಸ್ಥಾನದ ಎಲ್ಲಾ ಪೂರ್ವ ಪೀಠಾಧಿಪತಿಗಳು, ಬಸವೇಶ್ವರರು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಕಾಯಕ ಮತ್ತು ದಾಸೋಹಕ್ಕೆ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ಕ್ರಾಂತಿಯ ಹರಿಕಾರ 12ನೇ ಶತಮಾನದಲ್ಲಿ ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರು, 2003ನೇ ಇಸವಿಯಲ್ಲಿ ಸಂಸತ್ತಿನ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೆಗ್ಗಳಿಕೆಗೆ ಪಾತ್ರರಾದ ದಿನವನ್ನು ಇದೇ ಸಂಧರ್ಭದಲ್ಲಿ ನೆನೆಸಿಕೊಂಡರು.

ಶರಣಬಸವ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಭಂದಿಗಳು ಬಸವೇಶ್ವರರು ಕಾಯಕವೇ ಕೈಲಾಸವೆಂದು ಹೇಳಿದ ಹಾಗೆ ಶ್ರಮ ಪಟ್ಟು ವಿಶ್ವವಿದ್ಯಾಲಯವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ನಾವೆಲ್ಲರೂ ಸೇರಿ ಇದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಪರಿಶ್ರಮ ಪಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕಲ್ಯಾಣರಾವ್ ಪಾಟೀಲ, ಇಂದು ನಮ್ಮ ವಿವಿಯಲ್ಲಿ ಉದ್ಯಮಿ ಡಾ. ಎಸ್. ಎಸ್. ಪಾಟೀಲ ಅವರ ದೇಣಿಗೆಯಿಂದ ಬಸವೇಶ್ವರರ ಅಧ್ಯಯನ ಪೀಠ ಪ್ರಾರಂಭವಾಗಿದೆ. ಕಳೆದ ವರ್ಷ ಬಸವಕಲ್ಯಾಣದಲ್ಲಿ ಜರುಗಿದ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಬಸವೇಶ್ವರರ ಸಂಶೋಧನಾ ಪುಸ್ತಕ ಹೊರತಂದಿದ್ದು ವಿಶೇಷ ಎಂದರು.

ಇದುವರೆಗೆ ಇಂಗ್ಲೀಷನ ಖ್ಯಾತ ನಾಟಕಕಾರ ಮತ್ತು ಕವಿ ವಿಲಿಯಂ ಶೇಕ್ಸಪಿಯರ್ ಹೆಸರಲ್ಲಿ ಅತಿಹೆಚ್ಚು ಸಂಶೋಧನೆಗಳಾಗಿದ್ದು, ಭಾರತೀಯ ಭಾಷೆಯಾದ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಸುಮಾರು 29 ಸಂಶೋಧನೆಗಳು ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಾಗಿವೆ ಬಿಟ್ಟರೆ 10 ಸಂಶೋಧನೆಗಳು ಅಕ್ಕಮಾಹಾದೇವಿಯವರ ಕುರಿತಾಗಿವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ. ವಿ. ಶಿವಾನಂದನ್ ಸೇರಿದಂತೆ ಕನ್ನಡ, ಇಂಗ್ಲೀಷ ಹಾಗೂ ಪತ್ರಿಕೋದ್ಯಮ ವಿಭಾಗದ ಸಿಬ್ಬಂದಿಯವರು ಉಪಸ್ಥಿತರಿದ್ದರು. ಡಾ. ನಾನಾಸಾಹೇಬ್ ಹಚ್ಚಡದ ಕಾರ್ಯಕ್ರಮನ್ನು ನಿರೂಪಿಸಿ ವಂದಿಸಿದರು.

emedialine

Recent Posts

ಕಲಬುರಗಿ: ನೂತನ ಗ್ರಂಥಾಲಯ ಉದ್ಘಾಟನೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…

2 hours ago

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

4 hours ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

4 hours ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

4 hours ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

5 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

8 hours ago