ಶಹಾಬಾದ: ತಾಲೂಕಿನ ರೈತ ಬಾಂಧವರು ಸರರದ ನಿರ್ದೇಶನದಂತೆ ತಮ್ಮ ಜಮೀನಿನ ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೋಡಣೆ ಮಾಡುವದು ಕಡ್ಡಾಯವಾಗಿದೆ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಹಾಗೂ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ತಿಳಿಸಿದ್ದಾರೆ.
ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಾದರೆ ರೈತರು ಆರ್.ಟಿ.ಸಿ ಗೆ ತಮ್ಮ ಆಧಾರ್ ಕಾರ್ಡ ಸಂಖ್ಯೆ ಜೋಡಿಸಬೇಕು ಇದಕ್ಕಾಗಿ ಸರ್ಕಾರದ ಹೊಸ ತಂತ್ರಾಂಶವನ್ನು ಸಿದ್ಧಪಡಿಸಿದೆ. ಇದನ್ನು ತಮ್ಮ ಮೊಬೈಲ್ ನಿಂದಲೇ ಮನೆಯಲ್ಲೇ ಕುಳಿತು ಮಾಡಬಹುದು ಅಥವಾ ತಮ್ಮ ಗ್ರಾಮದ ಗ್ರಾಮಸಹಾಯಕ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಮತ್ತು ರೈತಸಂಪರ್ಕಕೇಂದ್ರಗಳಿಗೆ ಭೇಟಿನೀಡಿ ಪ್ರಕ್ರಿಯೆಪೂರ್ಣಗೊಳಿಸಬಹುದು.
ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೋಡಣೆ ಮಾಡಲು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ತೊಂದರೆ ಉಂಟಾಗಲಿದೆ. ಸರ್ಕಾರವು ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿಯನ್ನು ಬಳಸಿ ಮುಂದಿನ ಪ್ರಕ್ರಿಯೆ ಆಧಾರ ಕಾರ್ಡ ಸಂಖ್ಯೆ ನಮೂದಿಸಿ ಆಧಾರಗೆ ಜೊಡಣೆಯಾಗಿರುವ ಮೊಬೈಲ್ ನಂಬರ್‍ಗೆ ಒಟಿಪಿ ಬಂದಿರುದನ್ನು ನಮೂದಿಸಿ ನಂತರ ಫೆÇೀಟೊ ಕ್ಲಿಕ್ಕಿಸಿದ ನಂತರ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್‍ಗೆ ಸಂದೇಶ ಬರುತ್ತದೆ.
ಆರ್‍ಟಿಸಿ ಆಧಾರ ಲಿಂಕ್ ಮಾಡಿಕೊಂಡಿದ್ದಲ್ಲಿ ಪ್ರಯೋಜನಗಳಾದ ಆರ್.ಟಿ.ಸಿ ಗೆ ಆಧಾರ ಲಿಂಕ್ ಮಾಡುವದರಿಂದ ಜಮೀನಿನ ದಾಖಲೆಗಳನ್ನು ಇನಷ್ಟು ಸುರಕ್ಷಿತ ಹಾಗೂ ಭೂ ದಾಖಲೆಗಳನ್ನು ಪಡೆಯುವದು ಸುಲಭವಾಗುತ್ತದೆ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸರಳವಾಗುವದು. ಖಾತೆ ವಿವಾದಗಳನ್ನು ತಪ್ಪಿಸಲು ಅನುಕೂಲ. ಸಾಲ ಪ್ರಕ್ರಿಯೆ ಸುಲಭವಾಗಿ ರೈತರು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ತಾಲೂಕಿನ ಎಲ್ಲಾ ರೈತ ಬಾಂಧವರು ಸರ್ಕಾರದ ನಿರ್ದೇಶನದಂತೆ ಆಧಾರ ಸಂಖ್ಯೆಯನ್ನು ಪಹಣಿ ಪತ್ರಿಕೆಯಲ್ಲಿ ಜೋಡಣೆ ಮಾಡುವ ಕಾರ್ಯವನ್ನು ಸ್ವಯಂ ಪ್ರೇರಿತವಾಗಿ ಒಂದು ಆಧಾರ ಸಂಖ್ಯೆ ಜೋಡಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…