ಕಲಬುರಗಿ: ಸಾಮಾನ್ಯ ಹಾಗೂ ಬಡ ಜನರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮೇ 1 2024 ರಿಂದ ಕೆಬಿಎನ್ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಆರಂಭಿಸಲಾಗಿದೆ.
ಗರ್ಭೀಣಿಯರಿಗೆ ಉಚಿತ ಅವಶ್ಯವಿರುವ ಪ್ರತಿಯೊಂದು ರಕ್ತ ತಪಾಸಣೆ ಮತ್ತು ಸ್ಕ್ಯಾನಿಂಗಗಳನ್ನು ಉಚಿತವಾಗಿ ಮಾಡಲಾಗುವುದು ಅಲ್ಲದೇ ಸಾಮಾನ್ಯ ಹೆರಿಗೆ ಮತ್ತು ಸಿಜೇರಿಯನ್ ಹೆರಿಗೆ ಒಂದನ್ನು ಉಚಿತವಾಗಿ ಮಾಡಲಾಗುವುದು. ಅವಶ್ಯಕತೆ ಇದ್ದಲ್ಲಿ ICU CARE ಕೂಡಾ ಉಚಿತವಾಗಿ ನೀಡಲಾಗುವುದು ಎಂದು ಕೆಬಿಎನ ಮೆಡಿಕಲ್ ಡೀನ್ ಡಾ ಸಿದ್ದೇಶ್ ಸಿರ್ವಾರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಗರ್ಭಿಣಿಯರಿಗೆ ಪ್ರತಿ ದಿನ ನುರಿತ ಹೆರಿಗೆ ಶಸ್ತ್ರ ಚಿಕಿತ್ಸಕರಿಂದ ಉಚಿತ ತಪಾಸಣೆ ಸಮಾಲೋಚನೆ ಮತ್ತು ಅಗತ್ಯ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತ. ಕೆಬಿಎನ ಆಸ್ಪತ್ರೆಯಲ್ಲಿ ನೊಂದಣಿಯಾಗಿನಿಂದ ಹೆರಿಗೆ ಆಗಿ ತಾಯಿ ಮತ್ತು ಮಗು ಸಂಪೂರ್ಣವಾಗಿ ಚೇತರಿಸಿಕೊಳ್ಳುವತನಕ ಅವರಿಗೆ ಎಲ್ಲ ಸೌಲಭ್ಯಗಳನ್ನು ಮತ್ತು ಆಹಾರರವನ್ನು ಉಚಿತವಾಗಿ ಪೂರೈಸಲಾಗುವುದು ಎಂದು ಮೆಡಿಕಲ್ ಸುಪೀಯಿಟೆನಡೆಂಟ್ ಡಾ. ಸಿದ್ದಲಿಂಗ್ ಚೆಂಗ್ಟಿ ಮಾಹಿತಿ ನೀಡಿದರು.
ಆರಂಭದಲ್ಲಿ 60 ಹಾಸಿಗೆಗಳ ಖಾಜಾ ಬಂದನವಾಜ್ ಜನರಲ್ ಆಸ್ಪತ್ರೆಯನ್ನು ಖಾಜಾ ಬಂದನವಾಜ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬೋಧನಾ ಆಸ್ಪತ್ರೆಯಾಗಿ ಸೇವೆ ಸಲ್ಲಿಸುವ ನಿರ್ದಿಷ್ಟ ಉದ್ದೇಶದಿಂದ ಮತ್ತು ಗುಲ್ಬರ್ಗದ ಸೌಲಭ್ಯವಿಲ್ಲದ ವರ್ಗಗಳಿಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದಾತ್ತ ಉದ್ದೇಶಕ್ಕಾಗಿ 1988 ರಲ್ಲಿ ಸ್ಥಾಪಿಸಲಾಗಿತ್ತು.
ಪ್ರಸ್ತುತ ಸಮಯದಲ್ಲಿ ಕೆಬಿಎನ್ ಆಸ್ಪತ್ರೆಯಲ್ಲಿ 13 ವಿಭಾಗಗಳಿದ್ದು 250 ವೈದ್ಯರು ಕಾರ್ಯನಿರತರಾಗಿದ್ದಾರೆ. ಅಲ್ಲದೇ 6 ಸೂಪರ್ ಸ್ಪೆಷಲ್ ವಿಭಾಗಗಳಿವೆ. 700 ಹಾಸಿಗೆಗಳು, 100 ಎಮರ್ಜೆನ್ಸಿ ಬೇಡ್ಸ್ ಇವೆ. ಉತ್ತರ ಕರ್ನಾಟಕದ ಮೊದಲ ನೋನ ಇನ್ವೆಸೀವ ಕಾರೋನರಿ C T ಹೊಂದಿದ ಹಿರಿಮೆ ಕೆಬಿಎನಗೆ ಇದೆ. ಕಡಿಮೆ ಫೀಸ್ ನೊಂದಿಗೆ ಹೈಟೆಕ ಐ ಸಿ ಸಿ ಯು ಸೌಲಭ್ಯಇದೆ.
ಮುಂಬರುವ ದಿನಗಳಲ್ಲಿ ಹೊಸ ಕಟ್ಟಡ, 11 ಮೋಡ್ಯೂಲರ ಆಪರೇಷನ್ ಥೀಯೇಟರ, ಹೊಸ ಓ ಪಿಡಿ, ಹೊಸ ವರ್ಡ್ಸ್, ಸೂಪರ್ ಸ್ಪೆಷಲಿಟಿ ವಿಂಗ್ಸ್, ಕಾರ್ಯಜಾರಿಗೆಯಲ್ಲಿದ್ದು ಅತಿ ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ ಎಂದು ಆಸ್ಪತ್ರೆಯ ಆಡಳಿತಧಿಕಾರಿ ಮತ್ತು ಸಹಾಯಕ ರಿಜಿಸ್ಟ್ರಾರ್ ಡಾ. ರಾಧಿಕಾ ನುಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಈ ಪತ್ರಿಕಾ ಗೋಷ್ಠಿಯಲ್ಲಿ ಕೆಬಿಎನ್ ಆಸ್ಪತ್ರೆಯ ಒಬಿಜಿ ಮುಖ್ಯಸ್ಥೆ ಡಾ. ಸುಜಾತಾ ಧಾಡೆಡ ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…