ಮುಂಬೈ; ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕ್ಕಮ್ ಪರ ಡಾ. ಉಮೇಶ್ ಜಾಧವ್ ಅಬ್ಬರದ ಪ್ರಚಾರ

0
235

ಮುಂಬೈ: ಬಿಜೆಪಿಯ ಮುಂಬೈ ಉತ್ತರ ಮಧ್ಯ (ನಾರ್ಥ್ ಸೆಂಟ್ರಲ್) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಖ್ಯಾತ ನ್ಯಾಯವಾದಿ ಉಜ್ವಲ್ ನಿಕ್ಕಮ್ ಪರವಾಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿ ಮತಯಾಚಿಸಿದರು.

ಮುಂಬೈಯ ಬಿಜೆಪಿ ಕರ್ನಾಟಕ ಕೋಶದ ವತಿಯಿಂದ ಮೇ 17 ರಂದು ಪೂರ್ವ ಸಾಂತ ಕ್ರೂಜ್ ನ ವಾಕೋಲಾ ಪೊಲೀಸ್ ಸ್ಟೇಷನ್ ಸಮೀಪ ದ ಓಲಾ ವಕೋಲಾ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ ಸಭೆಯಲ್ಲಿ ಡಾ. ಉಮೇಶ್ ಜಾಧವ್ ಬಂಜಾರ ಸಮುದಾಯದವರನ್ನು ಹಾಗೂ ಸ್ಥಳೀಯ ಕನ್ನಡಿಗರನ್ನು ಉದ್ದೇಶಿಸಿ ಭಾಷಣ ಮಾಡಿದರು.

Contact Your\'s Advertisement; 9902492681

ಸ್ವಾತಂತ್ರ್ಯ ಲಭಿಸಿದ ನಂತರ ಇದೇ ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟ್ರ ಸರಕಾರವು ಬಂಜಾರ ಜನಾಂಗದವರ ಕಾಶಿ ಎಂದು ಪರಿಗಣಿತವಾದ ಪವಿತ್ರ ಸ್ಥಳ ಪೌರಾದೇವಿ ಕ್ಷೇತ್ರಭಿವೃದ್ಧಿಗಾಗಿ 543 ಕೋಟಿ ರೂಪಾಯಿ ಮಂಜೂರು ಮಾಡಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಸೇವಾಲಾಲ್ ಮಹಾರಾಜರ ಸಮಾಧಿ ಸೇರಿದಂತೆ ಅಲ್ಲಿನ ಎಲ್ಲ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅನುದಾನ ನೀಡಿರುವುದಕ್ಕೆ ರಾಷ್ಟ್ರದ ಬಂಜಾರ ಸಮುದಾಯ ಸದಾ ಕೃತಜ್ಞವಾಗಿರುತ್ತದೆ ಅದೇ ರೀತಿ ಸಮಾಜದ ಗುರುಗಳಾದ ಬಾಪು ರಾಮ್ ರಾವ್ ಅವರು ಸದ್ಯ ವಾಸಿಸುವ ಬಾಂಧ್ರಾದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಜಮೀನು ಹಾಗೂ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ಚಾತ ನ್ಯಾಯವಾದಿಗಳಾದ ಉಜ್ವಲ್ ನಿಕ್ಕಮ್ ಮುಂಬೈಯಲ್ಲಿ ಸಂಭವಿಸಿದ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಆತಂಕವಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕಾನೂನು ಹೋರಾಟ ಮಾಡಿ ಜಗತ್ತಿನ ಗಮನ ಸೆಳೆದ ಮಹಾನ್ ವ್ಯಕ್ತಿ ಅವರನ್ನು ಈ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸುವುದರೊಂದಿಗೆ ನಾವೆಲ್ಲ ಕೃತಜ್ಞತೆ ಸಲ್ಲಿಸುವ ಹಾಗೂ ರಾಷ್ಟ್ರ ಪ್ರೇಮ ವ್ಯಕ್ತಪಡಿಸುವ ಅಪೂರ್ವ ಅವಕಾಶ ಈ ಚುನಾವಣೆಯ ಮೂಲಕ ಸಿಕ್ಕಿದೆ. ಈ ಚುನಾವಣೆಯು ಸ್ವಾತಂತ್ರ್ಯ ನಂತರ ನಡೆಯುವ ಅತಿ ಮಹತ್ವದ ಚುನಾವಣೆಯಾಗಿದ್ದು ದೇಶದ ರಕ್ಷಣೆ ಮುಂದಿನ ಭವಿಷ್ಯವನ್ನು ಕಾಪಾಡಲು ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಬಿಜೆಪಿಯನ್ನು ಕನ್ನಡಿಗರು ಮತ್ತು ಬಂಜಾರಾ ಸಮುದಾಯದವರು ಬೆಂಬಲಿಸಬೇಕಾಗಿದೆ ಎಂದರು.

ಮುಂಬೈಯಲ್ಲಿ ನೆಲೆಸಿರುವ ಬಂಜಾರಾ ಸಮುದಾಯ ಮತ್ತು ಸ್ಥಳೀಯ ಕನ್ನಡಿಗರು ರಾಷ್ಟ್ರೀಯ ಮನೋಭಾವ ಹೊಂದಿದವರಾಗಿದ್ದು ಮೋದಿ ಅವರ ವಿಕಸಿತ ಭಾರತದ ಸಂಕಲ್ಪವನ್ನು ಈಡೇರಿಸಲು ಬೆಂಬಲಿಸುತ್ತಾರೆ ಎಂದು ಅಭ್ಯರ್ಥಿ ನ್ಯಾಯವಾದಿ ಉಜ್ವಲ್ ನಿಕ್ಕಮ್ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ದೂರದ ಕಲಬುರ್ಗಿಯಿಂದ ಮುಂಬೈಗೆ ತಮ್ಮ ತಂಡದೊಂದಿಗೆ ಆಗಮಿಸಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿರುವ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈಶಾಲಿ ಜ ಜಾಧವ್, ಸುರೇಶ್ ಸಜ್ಜನ್, ರಾಮ ರಾಠೋಡ್, ಅಜಯ್ ಸಿಂಗ್, ಸಮೀರ್ ರಾಜುರ್ಕರ್, ಅಮರ್ಜಿತ್ ಸಿಂಗ್, ಮನೋಹರ್ ಪವಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here