ಕಲಬುರಗಿ: ಕೆಬಿಎನ ಆಸ್ಪತ್ರೆಯ ಜನರಲ ಮೆಡಿಸಿನ ವಿಭಾಗದ ವತಿಯಿಂದ ಶುಕ್ರವಾರ ಅಧಿಕ ರಕ್ತದೊತ್ತಡದ ದಿನವನ್ನು ಆಚರಿಸಲಾಯಿತು. ರಕ್ತದೊತ್ತಡದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ನಾಡೋಜ ಡಾ.ಪಿ.ಎಸ ಶಂಕರ ಮಾತನಾಡಿ, ಜೀವನ ಶೈಲಿಯ ಮಹತ್ವ, ತೂಕ ನಿಯಂತ್ರಣ, ರಕ್ತದೊತ್ತಡವನ್ನು ಕಂಟ್ರೋಲನಲ್ಲಿ ಇಡುವುದರ ಬಗ್ಗೆ ಮಾಹಿತಿ ನೀಡಿದರು. ಇತ್ತೀಚಿಗೆ ಯಾವ ವಯಸ್ಸಿನಲ್ಲಾದ್ರೂ ರಕ್ತದ ಕಾಯಿಲೆ ಬರಬಹುದು ಆದ್ದರಿಂದ ಮುಂಜಾಗ್ರತೆ ಹಾಗೂ ಸರಿಯಾದ ಆಹಾರ ಕ್ರಮ ಅವಶ್ಯ ಎಂದರು.
ಮೆಡಿಸಿನ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ. ಶ್ರೀಗೌರಿ ರೆಡ್ಡಿ, ಬಿಪಿ ಚಿಕೆತ್ಸೆ, ಔಷಧಿಗಳ ಮಹತ್ವ, ನಿಯಮಿತ ಪರೀಕ್ಷೆಗಳು ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ ಎಂಬುದನ್ನು ತಿಳಿ ಹೇಳಿದರು. ಅಲ್ಲದೇ ಆರಂಭಿಕ ಪತ್ತೆ ಮಾಡುವುದು ಉತ್ತಮ ಎಂದರು. ಲಘು ವ್ಯಾಯಾಮ, ನಡಿಗೆ, ಶಿಸ್ತು ಬದ್ಧ ಜೀವನ ಮುಂದಿನ ಅನಾಹುತವನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಪಿಜಿ ವಿದ್ಯಾರ್ಥಿ ಡಾ. ಅಕ್ಷಯ ಕಾರ್ಯಕ್ರಮ ನಿರೂಪಿಸಿದರು. ಕೆಬಿಎನ ಆಸ್ಪತ್ರೆಯ ಸೆಮಿನಾರ ಹಾಲನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಹಾಗೂ ಸಂಘಟನಾ ಕಾರ್ಯದರ್ಶಿ ಡಾ.ಚಂದ್ರಕಲಾ, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ ಗುರುಪ್ರಸಾದ, ಡಾ ಹಿಮಾಯತುಲ್ಲಾ, ಡಾ. ಗಿರೀಶ್ ರೋನಾಡ್, ಡಾ ಸಂಜಯ್ ಚೌಹಾಣ, ಡಾ ಸುಮಂಗಲಾ, ಡಾ ರೂಪ ಹಾಗೂ ಪಿಜಿ ವಿದ್ಯಾರ್ಥಿಗಳು ಸೇರಿದಂತೆ 100 ಕ್ಕೂ ಅಧಿಕ ಜನರು ಹಾಜರಿದ್ದರು.