ಕಲಬುರಗಿ ಮೂಲದ ಯುವಕ ಮುಂಬೈ ಅಪಘಾತದಲ್ಲಿ ಸಾವು: ನೆರವಿಗೆ ಧಾವಿಸಿದ ಡಾ. ಉಮೇಶ್ ಜಾಧವ್

0
151

ಕಲಬುರಗಿ: ಮುಂಬೈಯಲ್ಲಿ ರೈಲು ನಿಲ್ದಾಣದಲ್ಲಿ ಕೂಲಿ ಕಾರ್ಮಿಕ ಕಮಲಾಪುರ ತಾಲೂಕು ಬಸವನಗರ ತಾಂಡಾದ ಸುನಿಲ್ ಸೀತಾರಾಮ್ ಚೌಹಾಣ್ (24 ವಯಸ್ಸು) ರೈಲು ಅಪಘಾತಕ್ಕೆ ಸಿಲುಕಿ ಮೃತಪಟ್ಟಿದ್ದು ತಕ್ಷಣದ ಧಾವಿಸಿದ ಕಲಬುರ್ಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲು ಸಂಪೂರ್ಣ ನೆರವು ನೀಡಿದರು.

ಕಳೆದ 25 ವರ್ಷಗಳಿಂದ ಕೂಲಿ ಕೆಲಸಕ್ಕಾಗಿ ತೆರಳಿದ್ದ ತಾಯಿ ಜೊತೆಯಿದ್ದ ಸುನಿಲ್ ಚೌಹಾನ್ ರೈಲ್ವೆ ಕೂಲಿ ಕೆಲಸ ನಿರ್ವಹಿಸುತ್ತಿದ್ದನು. ಡೊಂಬಿವಿಲಿ ರೈಲು ನಿಲ್ದಾಣದಲ್ಲಿ ಕಂಬಕ್ಕೆ ಬಡಿದು ತೀವ್ರ ಗಾಯಗೊಂಡು ಕಳೆದ ಏಳು ದಿನ ಗಳಿಂದ ಜೀವನ್ಮರಣದ ಮಧ್ಯೆ ಮುಂಬೈಯ ಸಯಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶುಕ್ರವಾರ(ಮೇ 17ರಂದು) ಬೆಳಗ್ಗೆ ಮೃತಪಟ್ಟನು.

Contact Your\'s Advertisement; 9902492681

ಮುಂಬೈ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಡಾ. ಉಮೇಶ್ ಜಾಧವ್ ಸುದ್ದಿ ತಿಳಿದ ತಕ್ಷಣ ಸಯಾನ್ ಆಸ್ಪತ್ರೆಗೆ ಧಾವಿಸಿ ಆಸ್ಪತ್ರೆ ಡೀನ್ ಡಾ. ಮೋಹನ್ ಜೋಶಿಯವರ ಜೊತೆ ಮಾತುಕತೆ ನಡೆಸಿ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸಿ ಸ್ವಗ್ರಾಮಕ್ಕೆ ಶವ ಕಳುಹಿಸಿಕೊಡಲು ಕ್ರಮ ಕೈಗೊಂಡರು.

ಅಖಿಲ ಭಾರತ ಬಂಜಾರಾ ಸಮಾಜದ ಅಧ್ಯಕ್ಷರಾದ ಶಂಕರ್ ಪವಾರ್ ನೇತೃತ್ವದ ಸಂಘಟನೆಯು ಉಚಿತ ಆಂಬುಲೆನ್ಸ್ ವ್ಯವಸ್ಥೆಯನ್ನು ಒದಗಿಸಿ ಪಾರ್ಥಿವ ಶರೀರವನ್ನು ಸ್ವಗ್ರಾಮ ಕಮಲಾಪುರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದರು.

ಮೃತ ಸುನಿಲ್ ಚೌಹಾನ್ ರೈಲಿನ ಕಂಬಕ್ಕೆ ತಲೆ ಬಡಿದು ಮೃತಪಟ್ಟಿರುವುದರಿಂದ ರೈಲ್ವೆ ಇಲಾಖೆಯು ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಡಾ. ಉಮೇಶ್ ಜಾಧವ್ ಅವರು ರೈಲ್ವೆ ರಕ್ಷಣಾಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಯಶಸ್ವಿ ಮಾತುಕತೆ ನಡೆಸಿದರು.

ಲೋಕಸಭಾ ಸದಸ್ಯರಾದ ಡಾಕ್ಟರ್ ಅವರ ಈ ಮಾನವೀಯ ಸ್ಪಂದನೆಗೆ ಮೃತರ ಕುಟುಂಬ ವರ್ಗವು ಕೃತಜ್ಞತೆ ಸಲ್ಲಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here