ಸುರಪುರ: ಹುಬ್ಬಳ್ಳಿಯಲ್ಲಿ ನಡೆದಿರುವ ಅಂಜಲಿ ಅಂಬಿಗೇರ ಹತ್ಯೆ ಮಾಡಿರುವ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅಖಿಲ ಕರ್ನಾಟಕ ಕೋಲಿ ಕಬ್ಬಲಿಗ ಅಂಬಿಗ ಭೋಯಿ ಬೆಸ್ತ ಬುಡಕಟ್ಟು ಹೋರಾಟ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ನೇಹಾ ಹಿರೇಮಠ ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಈಗ ಅಂಜಲಿ ಅಂಬಿಗೇರ ಹತ್ಯೆ ನಡೆದಿದ್ದು,ಇದರಿಂದ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ.ಅಂಜಲಿ ಅಂಬಿಗೇರ ಅವರಿಗೆ ಹತ್ಯೆ ಮಾಡಿದವನು ತೊಂದರೆ ಕೊಡುತ್ತಿರುವ ಕುರಿತು ಪೊಲೀಸರ ಗಮನಕ್ಕೆ ತಂದಲು ಪೊಲೀಸರು ನಿರ್ಲಕ್ಷ್ಯ ತೋರಿದ್ದರಿಂದ ಅಂಜಲಿ ಹತ್ಯೆ ನಡೆದಿದೆ,ಕೂಡಲೇ ನಿರ್ಲಕ್ಷ್ಯ ತೋರಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹತ್ಯೆ ಮಾಡಿದವನನ್ನು ಬಂಧಿಸಿ ಗಲ್ಲಿಗೇರಿಸಬೇಕು,ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ರಾಜ್ಯಾದ್ಯಂತ ನಮ್ಮ ಸಂಘಟನೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ತಾ.ಗೌರವಾಧ್ಯಕ್ಷ ಪಾರಪ್ಪ ಗುತ್ತೇದಾರ,ಅಧ್ಯಕ್ಷ ದೇವಿಂದ್ರಪ್ಪ ಮಾಲಿ ಪಾಟೀಲ್,ಯುವ ಘಟಕದ ಅಧ್ಯಕ್ಷ ಮಲ್ಲು ವಿಷ್ಣು ಸೇನಾ,ಸಂತೋಷ ಬಾಗಲಿ,ಹಣಮಂತ ಯಕ್ತಾಪುರ,ನಂದಪ್ಪ ಬಾಕ್ಲಿ ವಕೀಲ,ಮಾನಪ್ಪ ಸೂಗೂರ,ವೆಂಕಣ್ಣ ಕಟ್ಟಿಮನಿ,ಮರೆಪ್ಪ ದಾಯಿ,ಮಾನಪ್ಪ ಚಳ್ಳಿಗಿಡ,ದೊಡ್ಡಪ್ಪ ಮುದನೂರ,ವಿಶ್ವಮಿತ್ರ ಕಟ್ಟಿಮನಿ,ಶಿವಪ್ಪ ಕಟ್ಟಿಮನಿ,ಮರೆಪ್ಪ ವೆಂಕಟಾಪುರ,ಹಣಮಂತ ದೇವಿಕೇರ,ವೆಂಕಟೇಶ ಪೋತಲಕರ್,ದತ್ತು ಮುದನೂರ,ದರ್ಶನ ಸುರಪುರ,ರವಿ ತಿಂಥಣಿ,ವೆಂಕಟೇಶ ಕವಡಿಮಟ್ಟಿ,ಬಾಗೇಶ ಏವೂರ,ಪ್ರಶಾಂತ ಜೈನಾಪುರ,ಶರಣು ಮಲ್ಲಾ,ಆನಂದ ಮಾಚಗುಂಡಾಳ,ತಿಮ್ಮಯ್ಯ ತಳವಾರ,ಯಲ್ಲಪ್ಪ ರತ್ತಾಳ,ವೆಂಕೋಬ ರತ್ತಾಳ ಸೇರಿದಂತೆ ಅನೇಕರಿದ್ದರು.