ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಎಂದು ರಂಗಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ 10,000₹ ಗಳ ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿದ್ದು, ಜುಲೈ18 ರಂದು ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
2014 ರಿಂದ ಆರಂಭವಾದ ರಂಗ ಪ್ರಶಸ್ತಿಯನ್ನು ಈ ವರೆಗೆ ರಂಗಸಾಧಕರಾದ ಬಸವರಾಜಯ್ಯ ಭೀಮನಳ್ಳಿ, ಈಶ್ವರಪ್ಪ ಫರತಾಬಾದ ಕಲಬುರಗಿ, ಮನೂಬಾಯಿ ನಾಕೋಡ ದಾವಣಗೆರೆ, ಮಂಡ್ಯ ರಮೇಶ ಮೈಸೂರ, ಜುಲೇಖಾಬೇಗಂ ಶಹಾಪುರ, ಶ್ರೀಪಾದ ಭಟ್ ಧಾರೇಶ್ವರ ಉತ್ತರ ಕನ್ನಡ, ದೀಪಕ್ ಮೈಸೂರು, ಶಿವಯ್ಯಸ್ವಾಮಿ ಬಿಬ್ಬಳ್ಳಿ ಸೇಡಂ, ಡಾ.ಜೀವನರಾಂ ಸುಳ್ಯ, ಶೈಲಜಾ ದುಧನಿಕರ್ ಮೈಂದರ್ಗಿ ಪ್ರಶಾಂತ ಹಿರೇಮಠ.ಹುಬ್ಬಳ್ಳಿ ಪ್ರೇಮಾ ಹೊಸಮನಿ ತುಮಕೂರ ಅವರು ಪಡೆದಿದ್ದಾರೆ.
ಪ್ರಶಸ್ತಿಗಾಗಿ ಅರ್ಜಿಗಳನ್ನಾಗಲಿ ಅಥವಾ ನಾಮನಿರ್ದೇಶನಗಳನ್ನಾಗಲಿ ಕಳಿಸುವ ಕೊನೆಯ ದಿನಾಂಕ.ಜೂನ್ .10.6.2024 ಕಳಿಸಬೇಕಾದ ವಿಳಾಸ :
ಡಾ.ಸುಜಾತಾ ಜಂಗಮಶೆಟ್ಟಿ “ಓಂ” ರೆಸಿಡೆನ್ಸಿ, ಎರಡನೆ ಮಹಡಿ ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ, ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ. ಕಲಬುರಗಿ 585102 ಮೊಬೈಲ್ +91 94804 09732
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…