ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ ರಾಷ್ಟ್ರೀಯ ಸಂಸ್ಕಾರ ಶಿಬಿರದ ಸಮರೂಪ ಸಮಾರಂಭದ ನಿಮಿತ್ಯ ಮಂಗಳವಾರ ಶಿಬಿರಾರ್ಥಿಗಳ ಅಜ್ಜ ಅಜ್ಜಿಯರ ಪಾದಪೂಜೆ ಹಮ್ಮಿಕೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಕಲ್ಪಭಸ್ಮ ತಯಾರಿಕೆಯಲ್ಲಿ ವಿಭೂತಿ ಮಠ ಎಂದೇ ಪ್ರಖ್ಯಾತ ಪಡೆದ ಶ್ರೀ ಮಠವು ಜಂಗಮರಿಗೆ ಬದುಕು ಕಟ್ಟಿಕೊಟ್ಟ ಶ್ರೇಯಸ್ಸು ಶ್ರೀ ಮಠಕ್ಕೆ ಸಲ್ಲುತ್ತದೆ ಶ್ರೀ ಮಠದಲ್ಲಿ ಧಾರ್ಮಿಕ ಸಂಸ್ಕಾರ ಶಿಬಿರವು ಹಮ್ಮಿಕೊಂಡಿದ್ದು ಸುಮಾರು 200 ಜಂಗಮಟುಗಳು ಈ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡು ವೇದ ಸಂಸ್ಕೃತ ಸಂಗೀತ ಜ್ಯೋತಿಷ್ಯ ಮತ್ತು ಪಂಚಾಂಗದ ಅಧ್ಯಯನ ಅಧ್ಯಯನ ಮಾಡುತ್ತಿದ್ದಾರೆ ಈ ಶಿಬಿರದ ಅಂಗವಾಗಿ ಗೋಪೂಜೆ ಮತ್ತು ಕಲ್ಪಭಸ್ಮ ತಯಾರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇ 21 ಇಂದು ಮಂಗಳವಾರ ಅಜ್ಜ ಅಜ್ಜಿಯರ ಪಾದಪೂಜೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ಹೊನ್ನಕಿರಣ ಪ್ರಶಸ್ತಿ” ನೀಡಲಾಗುವುದು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಷ .ಬ್ರ. ಗುರುಲಿಂಗ ಶಿವಾಚಾರ್ಯರು ಚಿಟುಗುಪ್ಪ. ಅವರು ವಹಿಸುವರು ನೇತೃತ್ವವನ್ನು ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಷ.ಬ್ರ.ಚಂದ್ರಗುಂಡ ಶಿವಾಚಾರ್ಯರ ನೇತೃತ್ವದಲ್ಲಿ ಜರುಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶ್ರೀ ಷ.ಬ್ರ. ಶಿವಾಚಾರ್ಯರು ಚಿಟುಗುಪ್ಪ. ವೇ.ಡಾ.ಕೆ.ಎನ್. ರಾಜಕುಮಾರ ಶಾಸ್ತ್ರಿ ಅಧ್ಯಕ್ಷರು ಶ್ರೀ ಮಹಾಲಕ್ಷ್ಮಿ ಗುರುಕುಲ ಮತ್ತು ವೈದಿಕ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು. ಹಿರಿಯ ಸಾಹಿತಿ.ಪ್ರೊ.ಐ.ಬಿ. ಹಿರೇಮಠ. ಪ್ರಗತಿಪರ ರೈತ. ದೇವಿಂದ್ರಪ್ಪ ಎಸ್. ಸಜ್ಜನಶೆಟ್ಟಿ. ಪಶು ಪ್ರೇಮಿ ಹಣಮಂತರಾಯ ತುಪ್ಪದ ಅವರಿಗೆ ”ಹೊನ್ನಕಿರಣ ಪ್ರಶಸ್ತಿ” ನೀಡಿ ಗೌರವಿಸಲಾಗುತದ್ದು, ಹೊನ್ನಕಿರಣಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸುವರು ಎಂದು ಮಠದ ಪರಮಭಕ್ತರಾದ ಬಸವರಾಜ್ ಚಟ್ಟಿ ಅವರು ತಿಳಿಸಿದ್ದಾರೆ.