ಬಿಸಿ ಬಿಸಿ ಸುದ್ದಿ

ಧರೆಗುರುಳಿದ ಕಲಬುರಗಿ ತ್ಯಾಜ್ಯ ಸಂಸ್ಕರಣಾ ಘಟಕ: ಶಾಸಕ ಅಲ್ಲಂಪ್ರಭು ಪಾಟೀಲ್‌ ಭೇಟಿ

ಕಲಬುರಗಿ: ಬಿರುಗಾಳಿಗೆ ಮುರಿದು ಬಿದ್ದ ಕಲಬುರಗಿ ನಗರದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಪಾಲಿಕೆ ಅಧಿಕಾರಿ ಆರ್‌ಪಿ ಜಾಧವ್‌ ಬಿರುಗಾಳಿ ಜೋರಾಗಿ ಬೀಸಿದಾಗ ಮುಂದೆ ಕಸದ ಗುಡ್ಡೆ ಇದ್ದ ಕಾರಣ ಅಲ್ಲಿಂದ ಸಾಗದೆ ಹಿಂದೆ ಒತ್ತಡ ಹುಟ್ಟಿಕೊಂಡಿದೆ ಇದರಿಂದಲೇ ತ್ಯಾಜ್ಯ ಘಟಕದ 16 ಕಂಬಗಲು ಮುರಿದಿವೆ. ಘಟಕ ಕುಸಿದಿದೆ ಎಂದರು.

ಆದರೆ ಸ್ಥಳಧಲ್ಲಿನ ಕಾಮಗಾರಿ, ಘಟಕದಲ್ಲಿನ ಕಂಬಗಳನ್ನೆಲ್ಲ ಗಮನಿಸಿದ ಸಾಸಕರು ಗಾಳಿ ಒತ್ತಡ ಹುಟ್ಟಿದ್ದರೆ ಮೇಲಿನ ಪತ್ರಾಗಳು ಹಾರಬೇಕಿತ್ತು. ಕಂಬಗಳೇ ಮುರಿದಿವೆಯಲ್ಲ, ಕಾಮಗಾರಿಯೇ ಕಳಪೆಯಾಗಿರುವ ಶಂಕೆ ಇದೆ. ಈ ಬಗ್ಗೆ ಅಗತ್ಯ ಕ್ರಮ ಜರುಗಿಸಿರಿ ಎಂದರು.

ತಕ್ಷಣವೇ ಅಲ್ಲಿಂದಲೇ ನಗರಾಭಿವೃದ್ಧಿ ಇಲಾಖೆ ಸಚಿವರಾದ ಸರೇಶ ಭೈರತಿಯವರನ್ನು ಸಂಪರ್ಕಿಸಿದ ಶಾಸಕರು ಕಲಬುರಗಿಯ ಈ ಘಟನೆ ವಿವರಿಸುತ್ತ ಸದರಿ ಬೆಳವಣಿಗೆಯ ಸಮಗ್ರ ತನಿಖೆಗೆ ಆಗ್ರಹಿಸಿದರಲ್ಲದೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಕೋರಿದರು.

ಕಲಬರಗಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯೇ ಸಮಸ್ಯೆಯಾಗಿದೆ. ಈ ಘಟಕ ಪೂರ್ಣ ಪ್ರಮಾಣದ ಕೆಲಸ ಆರಂಭಕ್ಕೂ ಮುನ್ನವೇ ಕುಸಿದಿದೆ. ಮತ್ತೆ ತ್ಯಾಜ್ಯ ವಿಲೇವಾರಿಗೆ ಅಡಚಣೆ ಬರಲಿದೆ. ಈಗಾಗಲೇ ಇಲ್ಲಿ ಕಸ ಸಂಗ್ರಹದಿಂದ ಅಂತರ್ಜಲ ಮಲೀನವಾಗಿದೆ. ಪರಿಸರ ಹಾಳಾಗಿದ, ನಾಯಿಗಳ ಕಾಟ ಉದನೂರು ಹಾಗೂ ಸುತ್ತಮುತ್ತ ಕಾಡುತ್ತಿದೆ. ತಕ್ಷಣ ಘಟಕ ದುರಸ್ಥಿಯಾಗಬೇಕು. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಶಾಸಕರು ಸಚಿವರ ಗಮನ ಸೆಳೆದರು.

ಕಲಬುರಗಿ ಕಸವನ್ನು ಉದನೂರ್‌ ಬಳಿಯ ಕಸ ಸಂಗ್ರಹಗಾರದಲ್ಲಿ ರಾಶಿ ಹಾಕಿ ನಂತರ ಸಂಸ್ಕರಣೆ ಮಾಡುವ ಯೋಜನೆಯೇ ಇದಾಗಿತ್ತು. ಇದೀಗ ಯೋಜನೆಯ ಮುಖ್ಯ ಶೆಡ್‌ ಕುಸಿದಿದೆ. ಹೀಗಾಗಿ ಸಂಸ್ಕರಣೆ ಸಮಸ್ಯೆ ಕಾಡಲಿದೆ. ಈಗಾಗಲೇ ಕಸದಿಂದಾಗಿ ಈ ಹಳ್ಳಿಗಳಲ್ಲಿ ಸಮಸ್ಯೆಗಳು ಕಾಡುತ್ತಿವೆ. ಬರುವ ದಿನಗಳಲ್ಲಿ ಆದಷ್ಟು ಬೇಗ ಸಂಸ್ಕರಣೆ ಘಟಕ ರಿಪೇರಿಗೊಂಡು ಪೂರ್ಣ ಕೆಲಸ ಮಾಡುವಂತೆ ಕ್ರಮ ಜರುಗಿಸಬೇಕು ಎಂದು ಶಾಸಕ ಅಲ್ಲಂಪ್ರಭು ಪಾಟೀಲರು ಪಾಲಿಕೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ನಾಗೇಂದ್ರ ಶೇರಿಕಾರ್‌, ಉದನೂರು ಗ್ರಾಮದ ಮುಖಂಡರು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

6 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

13 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

24 hours ago