ಜೇವರ್ಗಿ: ಯಡ್ರಾಮಿ ತಾಲೂಕು ಹಾಗೂ ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಜೇವರ್ಗಿ ಪಟ್ಟಣದ ಕೇಂದ್ರ ಸ್ಥಳದಲ್ಲಿಯೂ ಸಹ ಅಸಂಖ್ಯಾತ ಅನಧಿಕೃತ ತರಬೇತಿ ಕೇಂದ್ರಗಳ ಅಟ್ಟಹಾಸವು ಮಿತಿಮೀರಿದೆ. ನವೋದಯ ಮೊರಾರ್ಜಿ ಆದರ್ಶ ಹಾಗೂ ಕಿತ್ತೂರು ಶಾಲೆಗಳ ಪರೀಕ್ಷಾ ಪೂರ್ವ ತಯಾರಿ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ .ಕೂಡಲೇ ಶಿಕ್ಷಣ ಇಲಾಖೆ ಇಂತಹ ಅನಧಿಕೃತ ತರಬೇತಿ ಕೇಂದ್ರಗಳನ್ನು ಬಂದ್ ಮಾಡಲು ಒತ್ತಾಯಿಸಿದ್ದಾರೆ. ಅಧಿಕೃತವಾಗಿ ಮಾನ್ಯತೆಯನ್ನು ಪಡೆದು ಸರಕಾರಿ ನಿಯಮಾವಳಿ ಪ್ರಕಾರ ನಡೆಸುತ್ತಿರುವ ಖಾಸಗಿ ಅನುದಾನರಹಿತ , ಅನುದಾನಿತ ಮತ್ತು ಸರಕಾರಿ ಶಾಲೆಗಳ ಅಸ್ತಿತ್ವವನ್ನು ಉಳಿಸಿಕೊಡಬೇಕಾಗಿದೆ. ಈ ಕುರಿತಂತೆ ಸಭೆ ನಡೆಸಿದ ಜೇವರ್ಗಿ ಹಾಗೂ ಯಡ್ರಾಮಿಯ ಖಾಸಗಿ ಶಾಲೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇಂದು ಜೇವರ್ಗಿ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ .
ಈ ಸಂದರ್ಭದಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಮುಖಂಡರಾದ ಮಹಾಂತಯ್ಯ ಹಿರೇಮಠ ಮಾತನಾಡಿ ಪ್ರತಿ ವರ್ಷ ಇಂತಹ ಅನಧಿಕೃತ ತರಬೇತಿ ಕೇಂದ್ರಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿವೆ ಇವರಿಗೆ ಯಾವುದೇ ರೀತಿಯ ಸರ್ಕಾರಿ ನಿಯಮಾವಳಿಗಳು ಅನ್ವಯವಾಗುವುದಿಲ್ಲ. ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಮುಖಂಡರು ಸೇರಿದಂತೆ ಇಲಾಖೆ ಅಧಿಕಾರಿಗಳು ಇಂತಹ ಅನಧಿಕೃತ ತರಬೇತಿ ಕೇಂದ್ರಗಳ ಜೊತೆ ಶಾಮಿಲಾಗಿದ್ದಾರೆ.
ಇದಕ್ಕೆ ಕಡಿವಾಣ ಹಾಕದಿದ್ದರೆ ಅನುಮತಿ ಪಡೆದ ಅಧಿಕೃತ ಶಾಲೆಗಳು ಬೀಗ ಹಾಕಿಕೊಂಡು ಹೋಗಬೇಕಾಗುತ್ತದೆ , ಕೂಡಲೇ ಶಿಕ್ಷಣ ಇಲಾಖೆಯ ಇಂತಹ ಶಾಲೆಗಳನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಾನಸಗಂಗೋತ್ರಿ ಶಾಲೆಯ ಶಿವಪುತ್ರ ನೆಲ್ಲಗಿ ಮಾತನಾಡಿ ಪ್ರತಿವರ್ಷ ನಾವು ಮನವಿ ಪತ್ರವನ್ನು ಸಲ್ಲಿಸುತ್ತಾ ಬಂದಿದ್ದೇವೆ ಆದರೆ ಶಿಕ್ಷಣ ಇಲಾಖೆಯೂ ಕಠಿಣ ಕ್ರಮ ಕೈಗೊಂಡಿಲ್ಲಾ,ಇಂತಹ ಅನಧಿಕೃತ ತರಬೇತಿ ಕೇಂದ್ರದ ಶಾಲೆಗಳಿಗೆ ಚೆಲ್ಲಾಟವಾಗಿದೆ .ಕಾರಣ ಕೂಡಲೇ ಶಿಕ್ಷಣ ಇಲಾಖೆ ಮತ್ತು ತಾಲೂಕ ಆಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ತರಬೇತಿ ಕೇಂದ್ರಗಳ ಹೆಸರುಗಳನ್ನು ವಿಳಾಸ ಸಮೇತ ನೀಡಿಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ರೇಣುಕಾಂಬ ವಿದ್ಯಶ್ರೀ ಶಿಕ್ಷಣ ಸಂಸ್ಥೆಯ ನಿಂಗಣ್ಣ ಮಯೂರ್ ಹಾಗೂ ನವೋದಯ ಶಿಕ್ಷಣ ಸಂಸ್ಥೆ ಯಡ್ರಾಮಿಯ ಹಾಜಿ ಮಲಂಗ್, ಚಾಣಕ್ಯ ಶಾಲೆಯ ಮುರುಗೇಂದ್ರ ಹಾಗೂ ಆಂದೋಲದ ಜ್ಞಾನದೀಪ ಶಾಲೆಯ ರವಿ ಸೇರಿದಂತೆ ಜ್ಞಾನಜ್ಯೋತಿ ಶಾಲೆಯ ಹಣಮಂತಗೌಡ ಮತ್ತು ಟಿ.ಆರ್ ಬಿ ಶಾಲೆಯ ಶರಣು ಬೂತಪೂರ, ಹಾಗೂ ಎಪಿಜೆ ಅಬ್ದುಲ್ ಕಲಾಂ ಶಾಲೆಯ ಇಬ್ರಾಹಿಂ ಪಟೇಲ್ ,ಸೇಂಟ್ ಥಾಮಸ್ ಶಾಲೆಯ, ಪ್ರಗತಿ ಶಾಲೆ ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಅನಧಿಕೃತ ತರಬೇತಿ ಕೇಂದ್ರಗಳು: ಪರಿಶ್ರಮ ಕೋಚಿಂಗ್ ಮುನ್ಸಿ ಕಾಲೋನಿ , ಸರ್ವಜ್ಞ ಕೋಚಿಂಗ್ ಸೆಂಟರ್ ಶಾಂತನಗರ , ಚಾಣಕ್ಯ ಕೋಚಿಂಗ್ ಸೆಂಟರ್ ಶಾಂತನಗರ, ಶಿವಶಕ್ತಿ ಕೋಚಿಂಗ್ ಸೆಂಟರ್ ಅಗ್ನಿಶಾಮಕ ಠಾಣೆಎದುರು ಬಸವೇಶ್ವರನಗರ , ಕದಂಬ ಕೋಚಿಂಗ್ ಸೆಂಟರ್ ಜೇವರ್ಗಿ, ಧ್ವನಿ ಕೋಚಿಂಗ್ ಸೆಂಟರ್ ಬಿಜಾಪುರ ರಸ್ತೆ , ಯಡ್ರಾಮಿಯಲ್ಲಿನ ಅಗಸ್ತ್ಯ ಗಣಿತ ಲೋಕ ಕೋಚಿಂಗ್ , ಶಿವಯೋಗಿ ಕೋಚಿಂಗ್ ಸೆಂಟರ್, ಜೆ ಎಸ್ ಎಸ್ ಕೇಂದ್ರ ಕೋಚಿಂಗ್ ಸೆಂಟರ್, ವಿದ್ಯಾ ಗಿರಿ ಕೋಚಿಂಗ್ ಸೆಂಟರ್ ದ್ರೋಣ ಕೋಚಿಂಗ ಸೆಂಟರ್, ಕ್ರಾಂತಿವೀರ ಕೋಚಿಂಗ್ ಸೆಂಟರ್, ಅಲಿ ಸರ್ ಕೋಚಿಂಗ್ ಸೆಂಟರ್, ಯಡ್ರಾಮಿಯು ಸೇರಿದಂತೆ ಎಸ್ ವಿ ವಿ ಎಸ್ ಕೋಚಿಂಗ್ ಸೆಂಟರ್ ಅರಳಗುಂಡಗಿ, ಶ್ರೀ ಗುರು ಕೋಚಿಂಗ್ ಸೆಂಟರ್ ಶರಣಬಸವೇಶ್ವರ ಕೋಚಿಂಗ್ ಸೆಂಟರ್ ಅರಳಗುಂಡಗಿ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದೆ.
ಬೀಳಾರ್ ಗ್ರಾಮದಲ್ಲಿ ಕೋಚಿಂಗ್ ಸೆಂಟರ್, ಕಾಚಾಪುರ್ ನಲ್ಲಿ ಸಿದ್ದಾರೂಡ ಕೋಚಿಂಗ್ ಸೆಂಟರ್ ಕುಳಗೆರೆ ಗ್ರಾಮದಲ್ಲಿ ವೈಷ್ಣವಿ ಕೋಚಿಂಗ್ ಸೆಂಟರ್, ಮಳ್ಳಿ ಗ್ರಾಮದ ಸ್ವಾಮಿ ವಿವೇಕಾನಂದ ಕೋಚಿಂಗ್ ಸೆಂಟರ್, ಜೇರಟಗಿಯಲ್ಲಿ ರೇವಣಸಿದ್ದೇಶ್ವರ ಕೋಚಿಂಗ್ ಸೆಂಟರ್, ನಾರಾಯಣಪುರದಲ್ಲಿ ಲಕ್ಕಮ್ಮದೇವಿ ಕೋಚಿಂಗ್ ಸೆಂಟರ್ ನೇದಲಗಿ ಗ್ರಾಮದಲ್ಲಿ ಸಪ್ತಗಿರಿ ರೇವಣಸಿದ್ದೇಶ್ವರ ಕೋಚಿಂಗ್ ಸೆಂಟರ್, ಅಂಕಲಗ ಗ್ರಾಮದಲ್ಲಿ ಚಾಣಕ್ಯ ಕೋಚಿಂಗ್ ತರಬೇತಿ ಕೇಂದ್ರ, ಹಿಪ್ಪರ್ಗ ಎಸ್. ಎನ್ ಗ್ರಾಮದಲ್ಲಿ ಗೌರಿಶಂಕರ ತರಬೇತಿ ಕೇಂದ್ರ, ಕಲ್ಲೂರು ಬಿ ಗ್ರಾಮದಲ್ಲಿ ಭಾಗ್ಯವಂತಿ ತರಬೇತಿ ಕೇಂದ್ರ, ಕೋಣ ಶಿರಸಗಿ ಗ್ರಾಮದಲ್ಲಿ ಅರಣೋದಯ ಕೋಚಿಂಗ್ ಸೆಂಟರ್, ಮಂದೇವಾಲನಲ್ಲಿ ಏಕಲವ್ಯ ಕೋಚಿಂಗ್ ಸೆಂಟರ್ ಸೇರಿದಂತೆ ಮಾದೇವಪ್ಪ ಸಂಕಾಲಿ ಅನಧಿಕೃತ ತರಬೇತಿ ಕೇಂದ್ರಗಳು ನಡೆಯುತ್ತಿದ್ದು ಇಲಾಖೆಯ ಗಮನಕ್ಕೆ ತರಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…