ಮುಂಗಾರು ಬೀಜ ದಿನೋತ್ಸವ ಮತ್ತು ತರಬೇತಿ ಕಾರ್ಯಕ್ರಮ

0
22

ಕಲಬುರಗಿ: ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೇವಾಡ್ಗಿ) ಯಲ್ಲಿ ಬೀಜ ದಿನೋತ್ಸವ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ತರಬೇತಿ ಕಾರ್ಯಕ್ರಮದಲ್ಲಿ ಡಾ. ಪಿ. ವಾಸುದೇವ ನಾಯ್ಕ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಪ್ರಾಸ್ಥಾವಿಕ ನುಡಿಯಲ್ಲಿ ಕಾರ್ಯಕ್ರಮದ ಉದ್ದೇಶ ಮತ್ತು ಕೇಂದ್ರದಲ್ಲಿ ದೊರೆಯುವ ಸೌ¯ಭ್ಯಗಳ ಕುರಿತು ಮಾಹಿತಿ ನೀಡಿದರು ಮತ್ತು ಎಲ್ಲಾ ವರ್ಷಗಳಂತೆ ಈ ವರ್ಷ ಹೆಚ್ಚಿನ ಉತ್ತಮ ಗುಣಮಟ್ಟದ ಬೀಜಗಳು ಲಭ್ಯವಿರುತ್ತದೆ ಅದರ ಸದುಪಯೋಗವನ್ನು ಹೆಚ್ಚಿನ ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.

Contact Your\'s Advertisement; 9902492681

ಈ ವರ್ಷ ರೈತರಿಗೆ ಉತ್ತಮ ಮಳೆಯಿಂದ ಬೆಳೆ ಚೆನ್ನಾಗಿ ಬಂದು ಉತ್ತಮ ಲಾಭ ಪಡೆಯಬೇಕೆಂಬ ಅಭಿಲಾಷೆಯನ್ನು ತಮ್ಮ ಮನದಾಳದಿಂದ ವ್ಯಕ್ತಪಡಿಸಿದರು ಮತ್ತು ರೈತರೊಂದಿಗೆ ಚರ್ಚಿಸಿ ಅವರ ವಿವಿಧ ಪ್ರಶ್ನೆಗಳಿಗೆ ಸಮಂಜಶವಾಗಿ ಉತ್ತರಿಸಿದರು. , ನಮ್ಮ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರವು ರೈತರ ಸಹಾಯಕ್ಕಾಗಿ ಸದಾ ಸಿದ್ದವಿರುತ್ತದೆ ಎಂದು ತಿಳಿಸಿದರು.

ಡಾ. ಚೇತನ್ ಟಿ, ವಿಜ್ಞಾನಿ (ತೋಟಗಾರಿಕೆ) ರವರು ಹಿಂದಿನ ವರ್ಷಗಳಿಗಿಂತ ಈ ವರ್ಷ ಮುಂಗಾರು ಅತಿಬೇಗ ಬರುತ್ತಿರುವುದರಿಂದ ಹೆಚ್ಚಿನ ಮಳೆಯಾಗುವ ಸಾದ್ಯತೆವಿದ್ದು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೆಕು ಎಂದು ತಿಳಿಸಿದರು. ಮುಂದುವರೆದು, ತೊಗರಿಯಲ್ಲಿ ಬೀಜೋಪಚಾರ, ಕುಡಿ ಚಿವುಟುವುದು, ಬೋದುಗಳಲ್ಲಿ ಬಿತ್ತನೆ ಮತ್ತು ಪಲ್ಸ ಮ್ಯಾಜಿಕ ಕುರಿತು ವಿವರವಾಗಿ ತಿಳಿಸಿದರು.

ಮುಖ್ಯ ಅಥಿತಿಯಾಗಿ ಡಾ. ಉಮೇಶ ಬಾರಿಕಾರ್, ವಿಸ್ತರಣಾ ಮುಂದಾಳು, ನಾಲವಾರ ರವರು ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಇಳಿಜಾರಿಗೆ ಅಡ್ಡ ಬಿತ್ತನೆ , ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ನೀರು ನಿಲ್ಲದಂತೆ ಹೊರ ಹಾಕುವುಂತೆ ಹಾಕುವಂತೆ ವ್ಯವಸ್ಥೆಮಾಡಿ ಬಸಿಗಾಲುವೆಗಳನ್ನು ನಿರ್ಮಿಸುವುದು. ಸಮಪಾತಳ ಒಡ್ಡು ನಾಶಮಾಡದೇ ಅದರ ಉಪುಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ಶ್ರೀಮತಿ ಫರ್ಜಾನಾ ಎಮ್.ಕೆ ಹಿರಿಯ ತಾಂತ್ರಿಕ ಅಧಿಕಾರಿ (ಮಣ್ಣು ವಿಜ್ಞಾನ) ತಾಂತ್ರಿಕ ಕಾರ್ಯಗಾರದಲ್ಲಿ ಮಣ್ಣು ಮತ್ತು ನೀರು ಪರೀಕ್ಷೆ ಅತಿ ಅವಶ್ಯವಾಗಿರುತ್ತದೆ ಇಂದಿನ ಪರಿಸ್ಥಿತಿಯಲ್ಲಿ ಕಾರಣ ತಪ್ಪದೇ ಪರೀಕ್ಷೆ ಮಾಡಿಸಬೇಕೆಂದು ತಿಳಿಸಿದರು.

ಸಂಜೀವಕುಮಾರ ಪಾಟೀಲ, ತಾಂತ್ರಿಕ ಅಧಿಕಾರಿ (ಗಣಕಯಂತ್ರ) ರವರು ನೇರೆದ ಎಲ್ಲ ರೈತ ಬಾಂಧವರು ತಮ್ಮ ಹೆಸರು, ಮೂಬೈಲ ಮತ್ತು ಊರು ನೊಂದಾಯಿಸಬೇಕೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಮೊಬೈಲ ಸಂಖ್ಯೆಗೆ ಕೇಂದ್ರ ಕಾರ್ಯಚಟುವಟಿಕೆಗಳ ಮತ್ತು ಇತರೆ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರೈತರ ಅಭಿಪ್ರಾಯ: ಪ್ರತಿ ವರ್ಷ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೇವಾಡ್ಗಿ)ಯಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ನೀಡುತ್ತಿದ್ದಾರೆ ಅದರ ಜೊತೆಗೆ ಕೇಂದ್ರದ ವಿಜ್ಞಾನಿಗಳಿಂದ ಉತ್ತಮವಾದ ಸಲಹೆಗಳನ್ನು ಪಡೆದು ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಎಮ್. ಸಿ. ಪಾಟೀಲ್, ತಾಂತ್ರಿಕ ಅಧಿಕಾರಿ (ಕ್ಷೇತ್ರ ವ್ಯವಸ್ಥಾಪಕ) ರವರು ಕಾರ್ಯಕ್ರಮದ ನೀರೂಪಣೆಯನ್ನು ನಡೆಸಿಕೊಟ್ಟುರು ಮತ್ತು ಕೊನೆಯದಾಗಿ ಸಂಜೀವಕುಮಾರ ಪಾಟೀಲ, ತಾಂತ್ರಿಕ ಅಧಿಕಾರಿ (ಗಣಕಯಂತ್ರ) ರವರು ಎಲ್ಲರು ವಂದಿಸಿದರು.

ಸುಮರು 110 ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಯ ಲಾಭಪಡೆದರು ಮತ್ತು ಸಾಲಿನಲ್ಲಿ ನಿಂತು ತೊಗರಿ ಜಿಆರ್‍ಜಿ-152 & 811 ಹಾಗೂ ಹೆಸರು ಬಿಜಿಎಸ್-9 ನ್ನು ಜೇವರ್ಗಿ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಾಗೂ ಸಿಂದಗಿ, ಮುದ್ದೇಬಿಹಾಳ, ವಿಯಪುರ ಮತ್ತು ಲಿಂಗಸುಗೂರು ರೈತರು ಟೂೀಕನ್ ಪಡೆದು ಬೀವಜವನ್ನು ಖರಿದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here