ಕಲಬುರಗಿ: ಎಚ್ ಕೆ ಸೀತನೂರ್ ಆರ್ಟ್ ಗ್ಯಾಲರಿಯಲ್ಲಿ ಮೂರ್ತ ಮತ್ತು ಅಮೂರ್ತ ಕಲೆಗಳ ಸಂಗಮದಿಂದ ವಿಸ್ಮಯದ ಆನಂದಾನುಭೂತಿ ಲಭಿಸುತ್ತದೆ ಎಂದು ಹಿರಿಯ ಕಲಾವಿದರು ಹಾಗೂ ಮೈಸೂರು ಕಾವಾ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಡಿ. ಎ. ಉಪಾಧ್ಯ ಹೇಳಿದರು.
ಕಲ್ಬುರ್ಗಿಯ ಶರಣ ನಗರದಲ್ಲಿರುವ ಎಚ್.ಕೆ ಸೀತನೂರ್ ಆರ್ಟ್ ಗ್ಯಾಲರಿಗೆ ಉಪಾಧ್ಯರು ಮೇ 27 ರಂದು ಭೇಟಿ ನೀಡಿ ಕಲಾವಿದರನ್ನುದ್ದೇಶಿಸಿ ಮಾತನಾಡಿ ಗ್ಯಾಲರಿಯ ಕಲಾಕೃತಿಗಳ ಮೂಲಕ ಸೀತನೂರ್ ಕಲಾಕುಂಚ ಮತ್ತು ಬಣ್ಣಗಳ ಮೂಲಕ ಅದ್ಭುತ ಸೃಷ್ಟಿಸಿದ್ದಾರೆ.ವಿನ್ಯಾಸವನ್ನು ಬಯಲು ಮಾಡಿದ ಮತ್ತು ಬಯಲಿನಲ್ಲಿ ವಿನ್ಯಾಸ ರಚಿಸಿ ಅಂತರಂಗದ ಅನುಭೂತಿ ಹೆಚ್ಚಿಸಿದ್ದಾರೆ.ಮೂರ್ತ ಮತ್ತು ಅಮೂರ್ತ ಕಲೆಗಳ ಮೂಲಕ ಗ್ಯಾಲರಿಯ ಕಲಾಕೃತಿಗಳ ಸಂಗಮ ಕಲಾರಸಿಕರ ಆಕರ್ಷಿಸುತ್ತದೆ .ಸೀತನೂರ್ ಲೋಕೋತ್ತರ ಕೀರ್ತಿ ಗಳಿಸುವಂತಾಗಲಿ ಎಂದು ಉಪಾಧ್ಯ ಶುಭ ಹಾರೈಸಿದರು.
ಮೈಸೂರು ಕಾವಾ ಸಂಸ್ಥೆಯಲ್ಲಿ 32ವರ್ಷ ಪ್ರಾಧ್ಯಾಪಕರಾಗಿ ಕಲಾ ವಿಮರ್ಶಕ, ಕಲಾಚರಿತ್ರೆಕಾರ ಹಾಗು ನಾಡಿನ ಖ್ಯಾತ ಕಲಾವಿದ ರಾಗಿ ಬೆಳೆದು ಗದಗದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ “ಕಲಾಕಾಶಿ” ನಿರ್ಮಾಣ ಮಾಡಿದ್ದಾರೆ.ಕಲಾ ಕ್ಷೇತ್ರಕ್ಕೆ ಉಪಾಧ್ಯ ರು ಅನುಪಮ ಕೊಡುಗೆ ನೀಡುತ್ತಿದ್ದು ಗ್ಯಾಲರಿ ವತಿಯಿಂದ ಸನ್ಮಾನ ಮಾಡುವುದು ಹೆಮ್ಮೆ ಎಂದು ನಿರ್ದೇಶಕ ಹಾಗೂ ಕಲಾವಿದರಾದ ಮೋಹನ್ ಸೀತನೂರ್ ಹೇಳಿದರು.ಗ್ಯಾಲರಿ ವೀಕ್ಷಿದ ನಂತರ ಉಪಾಧ್ಯ ಅವರು ವಿಸ್ಮಯದ ಆನಂದದಿಂದ ಮಾತು ಮೌನವಾಗಿದೆ .
ಕಲಾವಿದನ ವೈಯ್ಯಕ್ತಿಕ ಅನುಭವದ ಅದ್ಭುತ ಎಂದು ಹೇಳಿ ಕಲಾವಿದರಿಗೆ ಸ್ಪೂರ್ತಿ ತುಂಬಿದ್ದಾರೆ ಎಂದು ಸೀತನೂರ್ ಹೇಳಿದರು.
ಉಪಾಧ್ಯ ಅವರಿಗೆ ಸೀತನೂರ್, ಹಿರಿಯ ಕಲಾವಿದರಾದ ಮಾನಯ್ಯ ನಾಗಣ್ಣ ಬಡಿಗೇರ,ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಶಾಲು ಹಾರ ಹಾಗು ಗ್ಯಾಲರಿ ಕ್ಯಾಟಲಾಗ್ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಎಂ.ಹೆಚ್ ಬೆಳಮಗಿ, ಶಾಹಿದ್ ಪಾಶಾ, ಡಾ. ಅಶೋಕ್ ಶೆಟಕಾರ್, ಲಕ್ಷ್ಮಿಕಾಂತ್ ಮನೋಹರ್ ಎಂ ಸಂಜೀವ ವಾದಿರಾಜ ಶ್ರೀಮತಿ
ವೈಜಯಂತಿ ಎಂ. ಸೀತನೂರ್, ಸಮತಾ ರಾಹುಲ್ ಸೀತನೂರ್ ಹಾಗೂ ಮಾಧುರಿ ರಾಕೇಶ್ ಸೀತನೂರ್ ಹಾಜರಿದ್ದರು.