ಶಹಾಬಾದ: ಲೋಕಸಭಾಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಅಂಬೇಡ್ಕರ್ ಪ್ರತಿಮೆ, ಮಜ್ಜಿದ್ ವೃತ್ತ, ನೆಹರು ವೃತ್ತ , ರೇಲ್ವೆ ನಿಲ್ದಾಣ ಹಾಗೂ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಖಾಡಾ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಈ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಗೆಉವಿನ ಚುನಾವಣೆಯಾಗಿದ್ದು, ಮತದಾರರ ಆಶೀರ್ವಾದದಿಂದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸಿದ್ದಾರೆ.ಕಳೆ ಐದು ವರ್ಷಗಳಿಂದ ಸಂಸದ ಡಾ.ಉಮೇಶ ಜಾಧವ ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರಿಗೆ ಯಾಮಾರಿಸುತ್ತಿದ್ದರು.ಧರ್ಮ, ಜಾತಿ ಹೆಸರಿನಲ್ಲಿ ಕೋಮುಭಾವನೆ ಬಿತ್ತಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಕೆಲಸ ನಡೆದಿತ್ತು.
ದೇಶದಲ್ಲಿಯೇ ಅತ್ಯಂತ ಕಡಿಮೆ ಅನುದಾನ ಬಳಸಿದ ಸಂಸದ ಎಂಬ ಹೆಗ್ಗಳಿಕೆ ಪಾತ್ರರಾದವರು ಡಾ.ಉಮೇಶ ಜಾಧವ.ಅವರು ಸಂಸದರಾದ ನಂತರ ಸರಿಯಾದ ಸ್ಪಂದನೆ ಇಲ್ಲದಿರುವುದು, ಸುಳ್ಳು ಭರವಸೆಗಳು ಹಾಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡದಿರುವುದಕ್ಕೆ ಜನರು ಬೇಸತ್ತು ರಾಧಾಕೃಷ್ಣ ದೊಡ್ಡಮನಿ ಅವರಿಗೆ ಕೈ ಹಿಡಿದಿದ್ದಾರೆ. ಮುಂಬರು ದಿನಗಳಲ್ಲಿ ಜನರು ನಿರೀಕ್ಷೆಯಂತೆ ರಾಧಾಕೃಷ್ಣ ದೊಡ್ಡಮನಿ ಅವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದಾರೆ.ಅಲ್ಲದೇ ದೇಶದಲ್ಲಿ ವಿಪರೀತ ಸುಳ್ಳು ಹೇಳುವ ಪ್ರಧಾನಿಯ ಹವಾ ಪಂಚರ್ ಆಗಿದೆ.ಜನರು ತಕ್ಕ ಪಾಠ ಕಲಿಸಿದ್ದಾರೆ.ಯಾರು ಜನರಿಗೋಸ್ಕರ್ ಕೆಲಸ ಮಾಡುತ್ತಾರೆ ಅವರನ್ನು ಜನರು ಗುರುತಿಸುತ್ತಾರೆ.ಎಷ್ಟು ದಿವಸ ಜನರು ಯಾಮಾರಿಸುವುದಕ್ಕೆ ಆಗುತ್ತದೆ.ಈ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಗೆಲುವಿನ ಚುನಾವಣೆಯಾಗಿದೆ ಎಂದು ಹೇಳಿದರು.
ಮುಖಂಡರಾದ ವಿಜಯಕುಮಾರ ಮುಟ್ಟತ್ತಿ, ಮರೆಪ್ಪ ಹಳ್ಳಿ, ಮಾಣಿಕಗೌಡ ಪಾಟೀಲ,ಪೀರಪಾಶಾ,ಸಾಹೇಬಗೌಡ ಬೋಗುಂಡಿ, ಕಿರಣ ಚವ್ಹಾಣ,ಹಾಷಮ್ ಖಾನ್,ಅನ್ವರ್ ಪಾಶಾ, ನಾಗಣ್ಣ ರಾಂಪೂರೆ, ಸೂರ್ಯಕಾಂತ ಕೋಬಾಳ,ಡಾ.ಅಹ್ಮದ್ ಪಟೇಲ್, ನಿಂಗಣ್ಣ ಸಂಗಾವಿಕರ್,ಮೆಹಬೂಬ ಮದ್ರಿ, ಮೆಹಬೂಬ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…