ಪರಿಸರದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ

0
53

ಶಹಾಬಾದ:ಅಭಿವೃದ್ಧಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ನಾಶಪಡಿಸುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಪರಿಸರದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಎಐಎಮ್‍ಎಸ್‍ಎಸ್ ಮುಖಂಡೆ ಗುಂಡಮ್ಮ ಮಡಿವಾಳ ಹೇಳಿದರು.

ಅವರು ಬುಧವಾರ ನಗರದ ಶ್ರೀ ಸ್ವಾಮಿವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಮರಗಳ ನಾಶವಾಗುತ್ತಿರುವುzರಿಂದÀ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದ ವನ್ಯಜೀವಿ ಸಂತತಿ ನಾಶವಾಗುತ್ತಿವೆ. ಗಿಡ-ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿದಲ್ಲಿ ಜಾಗತಿಕ ತಾಪಮಾನದ ಪ್ರಮಾಣವನ್ನು ತಗ್ಗಿಸಬಹುದು. ಇಂದು ಪ್ರಾಣಿಗಳು ಅಳಿವಿನಂಚಿಗೆ ಸರಿಯುತ್ತಿವೆ, ವಾಯುಮಾಲಿನ್ಯ, ಜಲಮಾಲಿನ್ಯವಾಗುತ್ತಿದೆ. ಅತಿಯಾದ ವಾಹನಗಳಿಂದಾಗಿ ಹೊಗೆ ಪ್ರಮಾಣ ಜಾಸ್ತಿಯಾಗಿ ಜನರ ಮೇಲೆ, ವಾತಾವರಣದ ಮೇಲೆ ಪ್ರಭಾವ ಬೀರುತ್ತಿದೆ. ನಮ್ಮಲ್ಲಿ ಅರಣ್ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಸರವನ್ನು ನಾಶ ಮಾಡುವ ಜೀವಿ ಎಂದರೆ ಮಾನವ.ಆದ್ದರಿಂದ ಇಂದು ನಾವು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು.

ಅಲ್ಲದೇ ಅರಣ್ಯ ಪ್ರದೇಶ ಒತ್ತುವರಿ, ಪ್ರಾಣಿಗಳ ಬೇಟೆ, ಜಾಗತಿಕ ತಾಪಮಾನ ಏರಿಕೆ, ಪರಿಸರ ನಾಶದಿಂದ ವನ್ಯ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅರಣ್ಯ ಒತ್ತುವರಿಯಿಂದ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಅಲ್ಲದೆ ಕಾಡಿನಲ್ಲಿ ಕುಡಿಯಲು ನೀರು, ಆಹಾರ ದೊರೆಯದಿದ್ದಾಗಲೂ ಪ್ರಾಣಿಗಳು ಸ್ವಾಭಾವಿಕವಾಗಿ ಕಾಡಿನಿಂದ ನಾಡಿನ ಕಡೆಗೆ ಬರುವುದರಿಂದ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಣಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ಮನುಕುಲ ರಕ್ಷಣೆಯಾಗಬೇಕಾದರೆ ವನ್ಯಜೀವಿಗಳ ರಕ್ಷಣೆಯೂ ಆಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ದಾನಮ್ಮ ಹಿರೇಮಠ, ಅಂಬಿಕಾ ವಳಸಂಗ, ತೇಜಸ್ವಿನಿ, ಶ್ರೀದೇವಿ ಬಿರಾದರ, ಶಕುಂತಲಾ,ಕಾವೇರಿ ಕುಸಾಳೆ ಸೇರಿದಂತೆ ಶಾಲಾ ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here