ಅಂಜುಮನ್-ಎ-ತರಕಿ ಉರ್ದು ಹಿಂದ್ ಸಂಸ್ಥೆಯ ಅಧ್ಯಕ್ಷರಾಗಿ ಡಾ.ಅಕ್ರಂ ನಕಾಶ್, ಕಾರ್ಯದರ್ಶಿಯಾಗಿ ಡಾ.ಮಜೀದ್ ದಗಿ ಆಯ್ಕೆ

0
42

ಕಲಬುರಗಿ: 60 ದಶಕಗಳಿಂದ ದಕ್ಷಿಣ ಭಾರತದ ಅತ್ಯಂತ ಸಕ್ರಿಯವಾಗಿ ಕಾರ್ಯಾನಿರ್ವಹಿಸುತ್ತಿರುವ ಪ್ರತಿಷ್ಠಿತ ಅಂಜುಮನ್-ಎ-ತರಕಿ ಉರ್ದು ಹಿಂದ್ ಸಂಸ್ಥೆಯ ಚುನಾವಣೆ ಯಶಸ್ವಿಯಾಗಿ ಜರುಗಿತು. ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ.ಅಕ್ರಂ ನಕಾಶ್, ಕಾರ್ಯದರ್ಶಿಯಾಗಿ ಡಾ.ಮಜೀದ್ ದಗಿ ಆಯ್ಕೆ ಆಗಿದ್ದರು.

ನಗರದ ಕೆಬಿಎನ್ ಆಸ್ಪತ್ರೆಯ ಮುಂಭಾಗದಲ್ಲಿರುವ ಅಂಜುಮನ್-ಎ-ತರಕಿ ಉರ್ದು ಹಿಂದ್ ಸಂಸ್ಥೆಯಲ್ಲಿ 2024 ರಿಂದ 2026 ಸಾಲಿನ ಆಡಳಿತ ಸಮಿತಿ ಚುನಾವಣೆಯ 15 ಸದಸ್ಯರ ಆಯ್ಕೆ ಪ್ರಕ್ರಿಯಲ್ಲಿ 10 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿ 5 ಕಾರ್ಯಕಾರಣಿ ಸಮಿತಿಗಳ ಸ್ಥಾನಗಳಿಗೆ ರವಿವಾರ ಮತದಾನ ನಡೆಯಿತು.

Contact Your\'s Advertisement; 9902492681

ಅವಿರೋಧವಾಗಿ ಆಯ್ಕೆಯಾದ ಸದಸ್ಯರು: ಸಹ ಕಾರ್ಯದರ್ಶಿ ಸ್ಥಾನಕ್ಕೆ ಡಾ. ಆಸ್ಮಾ ತಬ್ಬಸುಮ್, ಕಾರ್ಯಾನಿರ್ವಹ ಕಾರ್ಯದರ್ಶಿ ಸ್ಥಾನಕ್ಕೆ ಮಿರ್ ಶಹನವಾಜ್ ಶಾಹೀನ್ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರೊ.ಅಬ್ದುಲ್ ಹಮೀದ್ ಅಕ್ಬರ್, ಅಮ್ಜದ್ ಜಾವೇದ್, ಡಾ.ಮಂಜೂರ್ ಅಹ್ಮದ್ ದಖ್ಖಾನಿ, ಡಾ.ಮುಹಮ್ಮದ್ ಅಲಿ, ಸೈಯದ್ ಅಬ್ದುಲ್ ಗನಿ, ಡಾ.ಮುಹಮ್ಮದ್ ರುಸ್ತುಂ ಫೈಝಿ, ಡಾ.ಪಿರ್ ಜಾದಾ ಫಾಹಿಮುದ್ದೀನ್ ಮತ್ತು ಹಮೀದ್ ಅಕ್ಮಲ್ ಅವರು ಕಾರ್ಯಕಾರಣಿ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.

ಡಾ.ಅಕ್ರಂ ನಕಾಶ್ ಅವರು ಪ್ರತಿಸ್ಪರ್ಧಿ ಮಿತ್ರ ಖ್ವಾಜಾ ಪಾಷಾ ಇನಾಂದಾರ್ ವಿರುದ್ಧ 5 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾದರೇ, ಅಧ್ಯಕ್ಷ ಸ್ಥಾನಕ್ಕೆ ಮೂರನೇ ಅಭ್ಯರ್ಥಿ ಅಸಾದ್ ಅಲಿ ಅನ್ಸಾರಿ 9 ಮತಗಳನ್ನು ಪಡೆಸು ಸೋಲು ಕಂಡರು.
ಡಾ.ಮಜೀದ್ ದಾಗಿ ಅವರು 4 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಹಾಗೂ ಪ್ರಸ್ತುತ ಕಾರ್ಯದರ್ಶಿಯಾಗಿದ್ದ ಡಾ.ಅನೀಸ್ ಸಿದ್ದಿಕಿ ಅವರಿಗೆ ಸೋಲಿಸುವ ಮೂಲಕ ಗೆಲುವು ಸಾಧಿಸಿದರು. ಈ ಹಿಂದೆಯೂ ಡಾ.ಮಜೀದ್ ದಾಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇದೀಗ ಎರಡನೇ ಬಾರಿಗೆ ಆಯ್ಕೆ ಆಗಿದ್ದಾರೆ.

ಉಪಾಧ್ಯಕ್ಷರಾಗಿ ಡಾ.ನಸಿಬ್ ಖುರೇಷಿ ಮತ್ತು ಡಾ.ಮುಹಮ್ಮದ್ ಇಫ್ತಿಖರುದ್ದೀನ್ ಅಖ್ತರ್ 24 ಮತ್ತು 23 ಮತಗಳನ್ನು ಗೆಲುವು ಸಾಧಿಸಿ, ಪ್ರತಿಸ್ಪರ್ಧಿಯಾಗಿದ ಡಾ.ರಫೀಕ್ ರಹಬರ್ ಮತ್ತು ಮುಹಮ್ಮದ್ ಮುಜೀಬ್ ಅಹ್ಮದ್ ಅವರನ್ನು ಸೋಲಿಸಿದರು. ಖಜಾಂಚಿ ಸ್ಥಾನಕ್ಕೆ ನಡೆದ ಮತದಾನದಲ್ಲಿ ಮುಹಮ್ಮದ್ ಸಲಾಹುದ್ದೀನ್ ಅವರು 3 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಶ್ರೀಮತಿ ಶಾಹಿದಾ ಬೇಗಂ ಸೋಲಿಸಿದರು.

ಅಂಜುಮನ್-ಎ-ಪ್ರಗತಿ ಉರ್ದು ಹಿಂದ್ ಶಾಖೆ ಗುಲ್ಬರ್ಗದ ಚುನಾವಣೆಯ ಫಲಿತಾಂಶದ ನಂತರ, ಗುಲ್ಬರ್ಗದ ಬರಹಗಾರರು ಮತ್ತು ಕವಿಗಳು ಬಹಳ ಸಂತೋಷ ಮತ್ತು ಸಂತೋಷದಿಂದ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ, ಈ ವೇಳೆ ನೂತನ ಅಧ್ಯಕ್ಷರಾಗಿ ಆಯ್ಕೆದ ಡಾ.ಅಕ್ರಮ್ ನಕಾಶ್ ಮತ್ತು ಕಾರ್ಯದರ್ಶಿ ಡಾ.ಮಜೀದ್ ದಗಿ ಅವರು ಮತದಾನ ಮಾಡಿ ಅಯ್ಕೆಮಾಡಿದ ಸರ್ವಸದಸ್ಯರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here