ಸುರಪುರ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಜಯಂತಿ ಅಂಗವಾಗಿ ತಾಲೂಕು ಕರವೇ ಘಟಕ ದಿಂದ ಸಸಿ ನೆಟ್ಟು ಆಚರಣೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಸಂಘಟನೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ನೇತೃತ್ವದಲ್ಲಿ ನಗರದ ಹಸನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ,ನಗರದ ಐತಿಹಾಸಿಕ ಟೈಲರ್ ಮಂಜಿಲ್ ಆವರಣೆದಲ್ಲಿ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪುರ ಆವರಣದಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆಯುವ ಜೊತೆಗೆ ಟಿ.ಎ.ನಾರಾಯಣಗೌಡ ಅವರ 57ನೇ ಹುಟ್ಟು ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ,ನಮ್ಮ ಸಂಘಟನೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬ ರಾಜ್ಯದಲ್ಲಿ ಬರಗಾಲ ಇರುವ ಕಾರಣ ಅದ್ಧೂರಿ ಆಚರಣೆ ಬದಲು ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಣೆ ಮಾಡುವ ಜೊತೆಗೆ ಹಸಿರು ವಾತಾವರಣ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಹಣಮೆಗೌಡ ಶಖಾಪುರ,ಆನಂದ ಮಾಚಗುಂಡಾಳ,ಕೃಷ್ಣ ಮಂಗಿಹಾಳ,ವಿದ್ಯಾರ್ಥಿ ಘಟಕದ ಆಂಜನೇಯ ದೇವರಗೋನಾಲ,ನಗರ ಘಟಕದ ಮಲ್ಲು ವಿಷ್ಣುಸೇನಾ,ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಲಿ,ಯುವ ಘಟಕದ ಮಲ್ಲಿಕಾರ್ಜುನ ದೇವಿಕೇರ,ಆಟೋ ಘಟಕದ ಆನಂದ ರತ್ತಾಳ,ವಿವಿಧ ಗ್ರಾಮ ಶಾಖೆಗಳ ಪದಾಧಿಕಾರಿಗಳಾದ ಭೀಮಣ್ಣ ಬಾದ್ಯಾಪುರ,ಶೇಖರ ಚೌಡೇಶ್ವರಿಹಾಳ,ಷಣ್ಮುಖ ಅಡ್ಡೊಡಗಿ,ಬಲಭೀಮ ಬೊಮ್ಮನಹಳ್ಳಿ,ಅರ್ಜುನ ಬೈರಿಮಡ್ಡಿ,ಪ್ರಭು ಮಂಗಿಹಾಳ,ರಾಮಯ್ಯ ದೇವಿಕೇರ,ಮೌನೇಶ ಕಲಾಲ,ಯಮನಯ್ಯ ಗದ್ವಾಲ,ಆಂಜನೇಯ ಅಡ್ಡೊಡಗಿ,ಮರೆಪ್ಪ ಅಡ್ಡೊಡಗಿ,ಮಹಾರಾಜ ಹೆಮ್ಮಡಗಿ,ಯಲ್ಲಪ್ಪ ತೇಲ್ಕರ್,ಮಾನಶಪ್ಪ ರಂಗಂಪೇಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…