ಬಿಸಿ ಬಿಸಿ ಸುದ್ದಿ

ಸಾಂಸ್ಕøತಿಕ ಜಿಲ್ಲೆಯನ್ನಾಗಿಸುವ ಕಸಾಪ ಹೆಜ್ಜೆ ಗುರುತುಗಳು

ಕಲಬುರಗಿ: ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಇಲ್ಲಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ಮಾಡುವಲ್ಲಿ ನಿರತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಇಂಥ ಸ್ಮರಣೀಯ ಕಾರ್ಯಕ್ರಮಗಳು ಕನ್ನಡ ಭವನದ ಅಂಗಳದಲ್ಲಿ ನಡೆಯುತ್ತಿವೆ.

ನಾಡಿನ ನೆಲ- ಜನ ಮತ್ತು ಭಾಷೆಯ ಸೊಗಡನ್ನು ಎತ್ತರಿಸುವಲ್ಲಿ ಅಹರ್ನಿಸಿ ದುಡಿಯುತ್ತಿದೆ. ಪರಿಷತ್ತಿನ ವತಿಯಿಂದ ಸಾಹಿತ್ಯ, ಸಂಸ್ಕøತಿ ಸೇರಿ ಎಲ್ಲಾ ಕಾರ್ಯಕ್ರಮಗಳು ಸಾಹಿತ್ಯದ ದೀಪ ಬೆಳಗುವಲ್ಲಿ ಯಸಸ್ವಿಗೊಳ್ಳುತ್ತಿವೆ. ಜತೆಗೆ ಕಲ್ಲು ಬಂಡೆಯ ನೆಲದಲ್ಲಿ ಕನ್ನಡದ ಕಂಪು ಸೂಸುತ್ತಾ ಸಾಹಿತ್ಯದ ಝರಿ ತುಳುಕುವಂತೆ ಮಾಡಲಾಗಿದೆ.

ಕಳೆದ ಎರಡು ದಶಕಗಳಿಂದ ಕನ್ನಡದ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ತೇಗಲತಿಪ್ಪಿಯವರ ಕನ್ನಡ ಕಾರ್ಯಗಳ ಫಲವಾಗಿ ಇಂದು ಅವರು ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದು ಸಾಕ್ಷಿಯಾಗಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಇವುಗಳ ಏಳ್ಗೆಗಾಗಿ ಹೋರಾಡಿದವರು ಹಲವರಿದ್ದಾರೆ. ಕಲಬುರಗಿ ನೆಲದಿಂದ ಇಂಥ ಕನ್ನಡ ಕೆಲಸಗಳಿಗೆ ಸದಾ ಕೈಯೆತ್ತಿ ಬರುವ ವ್ಯಕ್ತಿ ಎಂದರೇ ಅದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ-ಸಾಂಸ್ಕøತಿಕ ರಾಯಭಾರಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು.

ಈ ಮೊದಲು ಖಾಸಗಿಯಾಗಿ ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಗಳು ಸ್ಥಾಪಿಸಿ, ಆ ಮೂಲಕ ನಿರಂತರ ಕನ್ನಡದ ದೀಪವನ್ನು ಹಚ್ಚಿರುವುದು ಅವರು ಮಾಡಿರುವ ಕಾರ್ಯಕ್ರಮಗಳೇ ಸಾರಿ ಹೇಳುತ್ತವೆ. ತೇಗಲತಿಪ್ಪಿಯವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಕನ್ನಡ ಚಟುವಟಿಕೆಗಳು ಇನ್ನಷ್ಟು ತೀವ್ರವಾಗಿವೆ. ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು ಎನ್ನುವ ಕಸಾಪದ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಯವರ ಆಶಯದಂತೆ, ಜಿಲ್ಲೆಯಲ್ಲಿ ತೇಗಲತಿಪ್ಪಿ ಯವರ ಕಾರ್ಯಕ್ರಮಗಳು ಸಾಕಾರಗೊಳ್ಳುತ್ತಿರುವುದು ಈ ಭಾಗದ ಕನ್ನಡ ಸಾಹಿತ್ಯ ಲೋಕವು ಶ್ರೀಸಾಮಾನ್ಯರ ವಲಯವು ಹರ್ಷಪಡಿಸುತ್ತಿದೆ.

ಕಳೆದ ಎರಡುವರೆ ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಸೇವೆಯಲ್ಲಿ ನಿರತವಾಗಿದೆ. ಜನಸಾಮಾನ್ಯರ ಪರಿಷತ್ತಾಗಿ ರೂಪಿಸುವಲ್ಲಿ ಮುಂದಡಿ ಹೆಜ್ಜೆಯನ್ನಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಬದುಕು ಕಟ್ಟಿ ಕೊಳ್ಳುವ, ಜೀವನವು ಶಾಂತಿ ನೆಮ್ಮದಿಯಿಂದ ಸಾಗಲು ಸಾಹಿತ್ಯ ಹಾಗೂ ಸಂಗೀತಗಳು ಏರ್ಪಡಿಸಿ ತನ್ನ ಹಿರಿಮೆಯನ್ನು ಹೆಚ್ಚಿಸಿ ಕೊಂಡಿದೆ ಇಲ್ಲಿಯ ಪರಿಷತ್ತು.

ಜೂನ್ 11ರಂದು ಬೆಳಗ್ಗೆ ಕನ್ನಡ ಭವನದ ಸುವರ್ಣ ಭವನದಲ್ಲಿ ನಡೆಯುವ ಸಾಹಿತ್ಯ ಸಂಸ್ಕøತಿ ಉತ್ಸವ 2024 ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬೆಳಿಗ್ಗೆ 45 ಜನ ಯುವ ಉದಯೋನ್ಮುಖ ಚಿತ್ರ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಜರುಗಲಿದೆ. ಹಾಗೂ ಸಂಜೆ 4.15 ಕ್ಕೆ ಸುವರ್ಣ ಸಭಾ ಭವನದಲ್ಲಿ ಭಾಷೆ, ಸಂಸ್ಕøತಿ, ಕಲೆಯ ಸಂಭ್ರಮದ ಕಾರ್ಯಕ್ರಮಗಳು ಕನ್ನಡಿಗರ ಕಣ್ತುಂಬಿಸಿ ಕೊಳ್ಳುವ ಸನ್ನಿವೇಶ ಕಾಣುತ್ತೇವೆ. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಪುರಸ್ಕಾರ ಮತ್ತು ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳು ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಗುತ್ತದೆ ಎಂದು ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ಮಾಹಿತಿ ನೀಡಿದರು.

ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯ ವಹಿಸಿದ ಹಿಂದಿನ ಎಲ್ಲಾ ಅಧ್ಯಕ್ಷರುಗಳ ಬದುಕು-ಬರಹ ಮತ್ತು ಜಿವನ ಸಾಧನೆಗಳ ಕುರಿತಾದ ಕನ್ನಡ ಸಾರಥಿ ಎಂಬ ಮಹತ್ವದ ಕೃತಿಯೊಂದನ್ನು ಸಹ ಇದೇ ಸಂದರ್ಭದಲ್ಲಿ ಜನಾರ್ಪಣೆಗೊಳಿಸಲಾಗುತ್ತಿದೆ. ಇಂಥ ಅಪರೂಪದ ಕಾರ್ಯಕ್ರಮಗಳು ಕಲಬುರಗಿ ನೆಲದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಕೂಡ. ಮನಸ್ಸುಗಳ ಜೊತೆಯಾಗಿ ಭಾವನೆಗಳ ಸಂಗಮದಲ್ಲಿ ಕನ್ನಡ ಕಂಪಿನಲ್ಲಿ ನಾವೆಲ್ಲರೂ ಕನ್ನಡ ಕಜ್ಜಾಯ ಸವಿಯಬೇಕಾಗಿದೆ. ಇಳಿ ಹೊತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಂಡು ಭಾವನೆಗಳ ಸಂಗಮದಂತೆ ಭಾಗವಹಿಸಿ ಸಾಕ್ಷೀಕರಿಸಬೇಕಾಗಿದೆ. – ಜಗನ್ನಾಥ ಎಲ್ ತರನಳ್ಳಿ, ಸೇಡಮ್

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

3 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

5 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

12 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

12 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

23 hours ago