ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ, ಚಿಂಚೋಳಿ ಹಾಗೂ ಕಲಾಸರಂಗ ಸಾಂಸ್ಕøತಿಕ ಹಾಗೂ ವಿವಿಧೋದ್ದೇಶ ಸೇವಾ ಸಂಸ್ಥೆ (ರಿ) ಚಿಂಚೋಳಿ ಇವರು ಕೊಡಮಾಡುವ ಸಮಾಜ ಸೇವೆ ರತ್ನ ಪ್ರಶಸ್ತಿಗೆ ಚಿಂಚೋಳಿ ತಾಲೂಕಿನ ವಿದ್ಯಾರ್ಥಿಗಳ ಒಕ್ಕೂಟ ತಾಲೂಕು ಸಮಿತಿ ಚಿಂಚೋಳಿಯ ಸಂಪನ್ಮೂಲ ವ್ಯಕ್ತಿಗಳಾದ ಶರಣು ತೇಗಲತಿಪ್ಪಿ (ಟಿ.ಟಿ) ಹಾಗೂ ವಸಿಂ ಅಕ್ರಂ ಜಿ ಸಿ ಎಂ ಗಾರಂಪಳ್ಳಿ ಆಯ್ಕೆ ಆಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ, ಚಿಂಚೋಳಿ ಹಾಗೂ ಕಲಾಸರಂಗ ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶ ಸೇವಾ ಸಂಸ್ಥೆ (ರಿ) ದೇಗಲಮಡಿ ಇವರ ಸಹಯೋಗದಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಇವರನ್ನು ಸಮಾಜ ಸೇವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷ ಸುರೇಶ್ ದೇಶಪಾಂಡೆ ಹಾಗೂ ಸಂಸ್ಥೆಯ ಅಧ್ಯಕ್ಷ ಅಭಯ್ ಪ್ರಕಾಶ ಆರ್. ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯಲ್ಲಾಲಿಂಗ ಝ ದಂಡಿನ ಅಶೋಕಬಾಬು ಪ್ರವೀಣ ಬಿ ಮೇತ್ರಿ ಕುಟುಂಬ ವರ್ಗದವರು ತೇಗಲತಿಪ್ಪಿ ಹಾಗೂ ಗಾರಂಪಳ್ಳಿ ಗ್ರಾಮದವರು ಹರ್ಷ ವ್ಯಕ್ತಪಡಿಸಿದ್ದಾರೆ.