ವಿಧಾನಸಭೆಯ ಶಾಸಕರಾಗಿ ರಾಜಾ ವೇಣುಗೋಪಾಲ ನಾಯಕ ಪ್ರಮಾಣವಚನ ಸ್ವೀಕಾರ

0
36

ಸುರಪುರ: ಕಳೆದ ಮೇ 7 ರಂದು ನಡೆದ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಬೆಂಗಳೂರಿನ ವಿಧಾನಸಸಭೆ ಸದಸ್ಯರಾಗಿ ವಿಧಾನಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪ್ರಮಾಣ ವಚನ ಬೋಧಿಸಿದರು.ಈ ಸಂದರ್ಭದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು,ಭಗವಂತನ ಹಾಗೂ ತಮ್ಮ ತಂದೆಯವರಾದ ದಿ.ರಾಜಾ ವೆಂಕಟಪ್ಪ ನಾಯಕ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕ್ಷೇತ್ರದ ಸಮಗ್ರ ಅಭಿವೃಧ್ಧಿ ಹಾಗೂ ಸಂವಿಧಾನದ ಅಡಿಯಲ್ಲಿ ದೇಶದ ಸಮಗ್ರತೆ ಮತ್ತು ಸಾರ್ವಭೌÀಮತ್ವವನ್ನು ಎತ್ತಿ ಹಿಡಿಯುತ್ತೇನೆ ಎಂದು ಘೋಷಿಸಿ ಪ್ರಮಾಣ ವಚನ ಘೋಷಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ,ಸತೀಶ ಜಾರಕಿಹೊಳಿ,ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮುಖಂಡರಾದ ರಾಜಾ ಕೃಷ್ಣಪ್ಪ ನಾಯಕ, ವಿಠಲ್ ಯಾದವ್,ವೆಂಕೋಬ ಯಾದವ್,ರಾಜಶೇಖರಗೌಡ ವಜ್ಜಲ್,ರಾಜಾ ವಾಸುದೇವ ನಾಯಕ, ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಸೂಗುರೇಶ ವಾರದ್,ರಾಜಾ ಸಂತೋಷ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಅಬ್ದುಲ್ ಅಲೀಂ ಗೋಗಿ,ವೀಣಾ ಹಿರೇಮಠ,ಭೀಮು ನಾಯಕ ಮಲ್ಲಿಬಾವಿ, ವಿರೇಶ ದೇಶಮುಖ,ಶರಣು ಕಲಬುರ್ಗಿ,ಮಾಳಪ್ಪ ಕಿರದಳ್ಳಿ, ರಮೇಶ ಕುಲಕರ್ಣಿ,ಅಬೀದ್ ಹುಸೇನ್ ಪಗಡಿ,ಆನಂದ ಲಕ್ಷ್ಮೀಪುರ,ದಾನಪ್ಪ ಲಕ್ಷ್ಮೀಪುರ,ವಿರೇಶ ಬಳಿ ಸೇರಿದಂತೆ ಸುರಪುರ ಮತ್ತು ಹುಣಸಗಿ ತಾಲೂಕಿನ ಸಾವಿರಕ್ಕೂ ಹೆಚ್ಚು ಜನ ರಾಜಾ ವೇಣುಗೋಪಾಲ ನಾಯಕರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here