ಬಿಸಿ ಬಿಸಿ ಸುದ್ದಿ

371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚನೆಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ; ಈಶ್ವರ ಖಂಡ್ರೆ

ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಹಿರಿಯ ಪರಿಣಿತ ತಜ್ಞರ ನಿಯೋಗ ಇಂದು ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮತ್ತು ಸಮಿತಿಯ ಮುಖಂಡರಾದ ಬಸವರಾಜ ದೇಶಮುಖ ಅವರ ನೇತೃತ್ವದಲ್ಲಿ 371(ಜೆ) ಕಲಂ ರಕ್ಷಣೆಯ ಬಗ್ಗೆ ಮತ್ತು ಇದರ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಿತಿ ಮನವಿ ಸಲ್ಲಿಸಿತು.

ರಾಜ್ಯದ ಅರಣ್ಯ ಸಚಿವರು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕಾ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರರವರನ್ನು ಶಾಸಕ ಅಲ್ಲಂಪ್ರಭು ಪಾಟೀಲ ಅವರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಕ್ಕಿರುವ ಸಂವಿಧಾನದ 371(ಜೆ) ಕಲಂ ರಕ್ಷಣೆಯ ಬಗ್ಗೆ ಮತ್ತು ಇದರ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು, ಪರಿಣಿತರಾದ ಆರ್.ಕೆ. ಹುಡಗಿ , ಡಾ. ಗುಲಶೆಟ್ಟಿ, ಡಾ. ಮಾಜಿದ್ ದಾಗಿ, ಡಾ. ಶರಣಬಸಪ್ಪ ಹತ್ತಿ, ಮನೀಷ್ ಜಾಜು ಸಮಿತಿಯ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿತು.

ಸುಮಾರು ಒಂದು ಗಂಟೆಗಳ ಸಚಿವರುಗಳಿಗೆ ಸಭೆ ನಡೆಸಿದ ನಿಯೋಗ ಮಂತ್ರಿಗಳವರಿಗೆ ಹನ್ನೆರಡು ಬೇಡಿಕೆಗಳ ವಿವರವಾದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಕ್ಕಿರುವ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ಮತ್ತು ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪಿಸುವುದು ಸೇರಿದಂತೆ ಇನ್ನುಳಿದ ಬೇಡಿಕೆಗಳನ್ನು ಮಂಡಿಸಲಾಯಿತು.

ಸಮಿತಿಯ ಮುಖಂಡರುಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಆಲಿಸಿದ ಮಾನ್ಯ ಸಚಿವರು ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯದ ರಚನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಅರಣ್ಯ ಸಚಿವರು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆರವರು ಬಲವಾದ ಭರವಸೆ ನೀಡಿದರು. ಅದರಂತೆ ಸಮಿತಿ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಸಚಿವರಾದ ದರ್ಶನಾಪೂರ ರವರು ಸಹ ಒತ್ತು ನೀಡಿದರು.

ಬೆಂಗಳೂರಿನ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು, ಹಸಿರು ಪ್ರತಿಷ್ಠಾನ ವೇದಿಕೆಯ ಮುಖಾಂತರ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ 371ನೇ(ಜೇ) ಕಲಮಿನಿಂದ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ 24 ಜಿಲ್ಲೆಯ ಜನರ ಮನಸ್ಸಿನಲ್ಲಿ ವಿಷಬೀದ ಬಿತ್ತುತ್ತಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ಏಕೀಕರಣ ಚಳವಳಿ ಆರಂಭಿಸಿ ರಾಜ್ಯ ಒಡೆಯುವಂತಹ ಹೇಳಿಕೆ ನೀಡುತ್ತಿದ್ದಾರೆ, ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ, ಹಸಿರು ಪ್ರತಿಷ್ಠಾನ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಸಮಿತಿಯ ಮುಖಂಡರು ಒತ್ತಾಯಿಸಿದರು.

ಸಚಿವ ಖಂಡ್ರೆರವರು ಇದಕ್ಕೆ ಉತ್ತರಿಸಿ, ನಮಗೆ ಸಿಕ್ಕಿರುವ ಸಂವಿಧಾನಬದ್ಧ ಸ್ಥಾನಮಾನಕ್ಕೆ ಯಾರಿಂದಲೂ ಸಹ ಕೂದಲೆಳೆಯಷ್ಟು ಧಕ್ಕೆ ಮಾಡಲು ಸಾಧ್ಯವಿಲ್ಲ, ನಾವೆಲ್ಲ ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರು ಸಂಘಟಿತವಾಗಿ ಬದ್ಧತೆ ಪ್ರದರ್ಶಿಸುತ್ತೇವೆ, ಕಲ್ಯಾಣ ಕರ್ನಾಟಕದಲ್ಲಿ 37ನೇ(ಜೆ) ಕಲಂ ರಕ್ಷಣೆಯ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ವಿವರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಸಚಿವರಾದ ಶರಣಪ್ಪ ದರ್ಶನಾಪೂರ ಅವರು ಮಾತನಾಡಿ ನಮ್ಮ ಪ್ರದೇಶಕ್ಕೆ ಸಿಕ್ಕಿರುವ ಸಂವಿಧಾನಬದ್ಧ ಸ್ಥಾನಮಾನದಿಂದ ಯಾವ ಜಿಲ್ಲೆಗೂ ಅನ್ಯಾಯವಾಗುತ್ತಿಲ್ಲ ನಮ್ಮ ಪಾಲು ನಮಗೆ ಸಿಗುತ್ತಿದೆ. ಬೆಂಗಳೂರಿನ ಕೆಲವು ಪಟ್ಟಭದ್ರ ಶಕ್ತಿಗಳು ಸುಳ್ಳು ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಸರಕಾರ ಇಂತಹ ಸುಳ್ಳು ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳುವದಿಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅಸ್ಲಂ ಚೌಂಗೆ, ಮಲ್ಲಿನಾಥ ಸಂಗಶೆಟ್ಟಿ, ಬಿ.ಬಿ. ನಾಯಕ, ರಮೇಶ ಚವ್ಹಾಣ, ಎಂ.ಬಿ. ನಿಂಗಪ್ಪ, ಡಾ. ಮಂಜೂರ ಡೆಕ್ಕನಿ, ಸುಭಾಶ ಶೀಲವಂತ, ಶರಣಬಸಪ್ಪ ಕುರಿಕೋಟಾ, ಅಬ್ದುಲ ರಹೀಂ, ಸಂಜೀವಕುಮಾರ, ರಾಜು ಜೈನ್, ಶಾಂತಪ್ಪ ಕಾರಭಾಸಗಿ, ಸಂಧ್ಯಾರಾಜ ಸ್ಯಾಮ್ಯೂವೆಲ್, ಆನಂದ ದೇಶಪಾಂಡೆ,ಎಚ್. ಮಹೀಬೂಬ, ಅನೀಲ, ಆರ್.ಜೆ. ಮಹೀಬೂಬ, ವಿನೋದಕುಮಾರ ಸೇರಿದಂತೆ ಅನೇಕ ಪರಿಣಿತರು ಉಪಸ್ಥಿತರಿದ್ದರು.

emedialine

Recent Posts

ವಾಡಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಅವರಿಗೆ ಸನ್ಮಾನ

ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರು,ಮಾಜಿ ಶಿಕ್ಷಣ ಸಚಿವರು ಹಾಗು ಕೊಳ್ಳೇಗಾಲದ ಮಾಜಿ ಶಾಸಕರಾದ…

8 hours ago

ಕಲಬುರಗಿ ಡಿ.ಸಿ. ವಿರುದ್ಧ ಸುಳ್ಳು ಆರೋಪ: ಕಾನೂನು ಕ್ರಮಕ್ಕೆ‌ ಒತ್ತಾಯಿಸಿದ ಭೀಮ್ ಅರ್ಮಿ ಮನವಿ

ಕಲಬುರಗಿ: ದಕ್ಷ ಮಹಿಳಾ ಅಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ವಿರುದ್ಧ ಇತ್ತೀಚೆಗೆ ಕೆಲವರು ಇಲ್ಲಸಲ್ಲದ ಆರೋಪ…

10 hours ago

ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ: ಪ್ರೀತಿ ಹೊನ್ನಗುಡಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ…

10 hours ago

ಬಗರ್ ಹುಕುಂ ಅರ್ಜಿ ಕೂಡಲೆ ಇತ್ಯರ್ಥಪಡಿಸಿ; ತಹಶೀಲ್ದಾರರಿಗೆ ಬಿ.ಫೌಜಿಯಾ ತರನ್ನುಮ್ ಸೂಚನೆ

ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸುವ ನಮೂನೆ 50, 53 ಹಾಗೂ 57 ಬಗರ್ ಹುಕುಂ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ…

10 hours ago

ಮಹಿಳೆಯರು ಶಿಕ್ಷಿತರಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ; ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಕರೆ

ಗೊಬ್ಬೂರನಲ್ಲಿ ಮಹಿಳಾ ಅರೋಗ್ಯ ತಪಾಸಣಾ‌ ಶಿಬಿರ ಉದ್ಘಾಟನೆ ಕಲಬುರಗಿ; ಮಹಿಳೆಯರು ಶಿಕ್ಷಿತರಾಗಿ ತಮ್ಮ ಹಕ್ಕುಗಳ ಪಡೆಯಬೇಕು. ಜೊತೆಗೆ ಪರುಷ ಪ್ರಧಾನವಾದ…

11 hours ago

ಬಲಿಷ್ಠ ರಾಷ್ಟ್ರ ಕಟ್ಟಲು ಗುಣಮಟ್ಟದ ಶಿಕ್ಷಣ ಅಗತ್ಯ; ಸರಡಗಿ ಶ್ರೀಗಳು

ಕಲಬುರಗಿ; ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಬಲಿಷ್ಠ ರಾಷ್ಟ್ರ ಕಟ್ಟಲು ಸಹಕಾರಿಗುತ್ತದೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು…

11 hours ago