ಕಲಬುರಗಿ : “ಸದೃಢ ಆರೋಗ್ಯಕ್ಕಾಗಿ ಸಮೃದ್ಧಿಯ ಜೀವನ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಕರೋನ ನಂತರದ ನಮ್ಮೆಲ್ಲರ ಜೀವನದ ಸ್ಥಿತಿಗತಿ ಇನ್ನೂ ಕ್ರಮಬದ್ಧವಾಗಿ ಕಂಡು ಬರುತ್ತಿಲ್ಲ. ಉತ್ತಮ ಆರೋಗ್ಯದಿಂದ ಮಾತ್ರ ನಾವು ಜೀವನ ನಡೆಸಿಕೊಂಡು ಹೋಗಬಹುದು. ಇಂತಹ ಶಿಬಿರದಿಂದ ಬಡ ಜನರಿಗೆ ತುಂಬಾ ಅನುಕೂಲವಾಗಲಿದೆ. ಹಾಗಾಗಿ ನಮ್ಮ ಜೀವನಕ್ಕಿಂತ ಜೀವವೇ ಅತಿ ಮುಖ್ಯವಾಗಿದೆ” ಎಂದು ಕಾಂಗ್ರೇಸ್ ಮುಖಂಡ ಪವನಕುಮಾರ ವಳಕೇರಿ ಅವರು ಹೇಳಿದರು.
‘ಅವರು ಸ್ಯಾಮ್ ಜಿಯೋಸ್ ಪ್ಯಾಲೆಟಿವ್ ಕೇರ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ ತಾಲೂಕಿನ ಪಾಣೆ ಗಾoವ ಗ್ರಾಮದಲ್ಲಿ ಹಮ್ಮಿಕೊಂಡ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದ್ದರು’.
‘ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯವಂತ ಜೀವನ ಸಾಗಿಸಬಹುದು. ಯೋಗ ವ್ಯಾಯಾಮ ಮತ್ತು ಧ್ಯಾನಗಳಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು’.
‘ಶಿಬಿರದಲ್ಲಿ ಪಾಣೆಗಾoವ ಗ್ರಾಮದ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಉಚಿತ ರಕ್ತ ತಪಾಷಣೆ, ಇಸಿಜಿ ಹಾಗೂ ರಕ್ತದ ಒತ್ತಡಗಳನ್ನು ಪರೀಕ್ಷಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಂಕರ್ ಕಾರಬಾರಿ, ಗ್ರಾಮ ಪಂಚಾಯತ್ ಸದಸ್ಯ ನಾಗೇಶ್ ಡಿ. ಮುಚ್ ಖೇಡ್ , ಹುಸೇನ್ ಸಾಬ ಮಹಾಜನ, ಆಕಾಶ್ ತಳಕೇರಿ ದತ್ತಾತ್ರೇಯ ತಳಕೇರಿ, ಕುಪ್ಪಣ್ಣ ರಾಥೋಡ್ ಹಾಗೂ ಶಿವಾನಂದ ಮಾಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪರಿಣಿತ ಲ್ಯಾಬ್ ಟೆಕ್ನಿಷಿಯನ್ಸ್ ಗಳಿಂದ ವೈದ್ಯಕೀಯ ತಪಾಷಣೆ ನಡೆಸಲಾಯಿತು. ಆರೋಗ್ಯ ವಿಭಾಗದ ಮುಖ್ಯಸ್ಥರಾದ ಅನಿತಾ ಕುಂಬಾರ್, ರೇಣುಕಾ ಇಂಗಳಗಿ ಹಾಗೂ ಶಿವರಾಜ ಬೋರಾಟ್ಟಿ ಸೇರಿದಂತೆ ಇತರರು ಇದ್ದರು.