ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದೆ ಕಲ್ಬುರ್ಗಿ ನೀಡಿದ ಸಮಾಜದ ನಾಯಕರಾದ ಜಗದೇವ ಗುತ್ತೇದಾರ್ ಕಾಳಗಿ ಅವರಿಗೆ ಕಲ್ಬುರ್ಗಿ ಜಿಲ್ಲೆ ಈಡಿಗ ಸಮಾಜದ ನಾಯಕರು ಸನ್ಮಾನಿಸಿ ಗೌರವಿಸಿದರು.
ಈಡಿಗ ಸಮಾಜದ ನಾಯಕರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ್ ಕಡೇಚೂರ್ ನೇತೃತ್ವದಲ್ಲಿ ಸೇರಿ ಜಗದೇವ ಗುತ್ತೇದಾರ್ ಅವರಿಗೆ ಶಾಲು ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಲಾಯಿತು.
ಪಕ್ಷದಲ್ಲಿ ನಿಷ್ಠಾವಂತನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಕ್ಕೆ ಈ ರೀತಿಯ ಉನ್ನತ ಸ್ಥಾನ ಮತ್ತು ಗೌರವ ದೊರಕಿದೆ. ವಿಧಾನ ಪರಿಷತ್ ನ ಅವರ ಸೇವಾ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹಾಗು ಈಡಿಗ ಸಮಾಜದ ವಿಶೇಷ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಅಭಿನಂದನೆಗೆ ಪ್ರತ್ಯುತ್ತರಿಸಿ ಜಗದೇವ ಗುತ್ತೇದಾರ್ ಕಾಲಗಿಯವರು ಮಾತನಾಡಿ ಪಕ್ಷದ ಹೈಕಮಾಂಡ್ ಸೇವೆಯನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯತನ ನೀಡಿದ್ದು ಇದು ಜೀವನದಲ್ಲಿ ದೊಡ್ಡ ಅವಕಾಶ ಮತ್ತು ಭಾಗ್ಯವಾಗಿದ್ದು ಈ ಭಾಗಕ್ಕೆ ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಸ್ಪಂದನೆ ನೀಡಲು ಪ್ರಯತ್ನಿಸುವೆನು. ಸಮಾಜದ ನಾಯಕರು ಗೌರವಿಸಿರುವುದಕ್ಕೆ ಅತ್ಯಂತ ಖುಷಿಪಟ್ಟಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪೇಂದ್ರ ಗುತ್ತೇದಾರ್ ಅಳಂದ, ತಿಮ್ಮಪ್ಪ ಗಂಗಾವತಿ, ಅಂಬಯ್ಯ ಗುತ್ತೇದಾರಿ ಇಬ್ರಾಹಿಂಪುರ್, ಶರಣಯ್ಯ ಗುತ್ತೇದಾರ್, ಸುರೇಶ್ ಗುತ್ತೇದಾರ್ ಮಟ್ಟೂರು, ಸಂತೋಷ್ ಚೌಧರಿ, ಅಶೋಕ ಸಂಕಲಾಪುರ ಮತ್ತು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಉಪಸ್ಥಿತರಿದ್ದರು