ಕಲಬುರಗಿ: ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿಯವರ ಸಂಪಾದಕತ್ವದಲ್ಲಿ ಹೊರ ಬಂದಿರುವ ‘ಬರಹ ಬೆರಗು’ ವೈಚಾರಿಕ ಲೇಖನಗಳ ಕೃತಿಯ ಪ್ರಚಾರದ ಪ್ರಯುಕ್ತ ನಗರದ ಬಸವೇಶ್ವರ ಪುತ್ಥಳ್ಳಿ ಆವರಣದಲ್ಲಿ ರವಿವಾರ ಹೊಸ ಪ್ರಯೋಗವೆಂಬಂತೆ ‘ಫೇಸ್‌ಬುಕ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನೇತೃತ್ವ ವಹಿಸಿದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಹನ್ನೆರಡನೇ ಶತಮಾನದ ಬಸವಾದಿ ಶರಣರ ಬದುಕು ಹಾಗೂ ಬೋಧನೆ ಇಂದಿನ ನಮಗೆ ನಿಜಕ್ಕೂ ಬೆರಗನ್ನುಂಟು ಮಾಡುತ್ತದೆ. ಅಂತಹ ಗಾಡಾಂಧಕಾರದ ಕಾಲದಲ್ಲಿಯೇ ಈಗಿನ ಕಾಲಕ್ಕೂ ಅನ್ವಯವಾಗುವಂತಹ, ಮುಂದಿನ ಕಾಲಾಂತರದಲ್ಲೂ ಎಲ್ಲರೂ ಒಪ್ಪಿಕೊಳ್ಳುವಂಥ ಮತ್ತು ಅಪ್ಪಿಕೊಳ್ಳುವಂಥ ಸಾರ್ವಕಾಲಿಕ ಸತ್ಯವಾಗಿರುವ ಶರಣರ ವಿಚಾರಧಾರೆಯನ್ನು ಜನಮಾನಸಕ್ಕೆ ಮುಟ್ಟಿಸುವ ಉದ್ದೇಶದಿಂದ ಹಿರಿ-ಕಿರಿಯ ಲೇಖಕರು ತಮ್ಮ ವಿಭಿನ್ನ ಮತ್ತು ವಿಶಿಷ್ಟ ನೆಲೆಯ ವಿಚಾರ ಸರಣಿಯ ಲೇಖನಗಳನ್ನು ಈ ಕೃತಿಯಲ್ಲಿ ಅಡಗಿವೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ದಿನೇಶ ದೊಡ್ಡಮನಿ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಮುಖರಾದ ಬಸವರಾಜ ಮೊರಬದ, ಬಸವರಾಜ ಧೂಳಾಗುಂಡಿ, ಶಿವಶರಣ ದೇಗಾಂವ, ಮಹಾಂತೇಶ ಕಲಬುರಗಿ, ಶಿವಶರಣ ಕುಸನೂರ, ಪ್ರಭುದೇವ ಯಳವಂತಗಿ, ಶರಣಗೌಡ ಪಾಟೀಲ ಪಾಳಾ, ಡಾ.ಬಾಬುರಾವ ಶೇರಿಕಾರ, ಸತೀಶ ಸಜ್ಜನ ಹಾಗರಗುಂಡಗಿ, ಅನೀಲ ಟೆಂಗಳಿ, ಎಸ್.ಎಂ.ಪಟ್ಟಣಕರ್, ಪ್ರಸನ್ನಮ ವಾಂಜರಖೇಡೆ, ಅಭಿಯಾನದ ಸಂಚಾಲಕರಾದ ರವೀಂದ್ರಕುಮಾರ ಭಂಟನಳ್ಳಿ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…