ಬಿಸಿ ಬಿಸಿ ಸುದ್ದಿ

ಹೈದರಾಬಾದ್ ಕರ್ನಾಟಕ ಭಾಗದ ನೌಕರರಿಗೆ ಮುಂಬಡ್ತಿಯಲ್ಲಿ ಮುಳುವಾಗುತ್ತಿರುವ 371 ಜೆ ನಿಯಮಗಳು.!?

ನಂಜುಂಡಪ್ಪ ವರದಿ ಶಿಫಾಸರಸ್ಸನ್ನು ಪರಿಗಣಿಸಿದ ಭಾರತದ ಸಂಸತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿದೃಷಿಯಿಂದ 371 ಜೆತಿದ್ದುಪಡಿಯನ್ನು ಜಾರಿಗೆ ತರಲಾಯಿತು. ಅದರಡಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಶಿಕ್ಷಣ, ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿಯನ್ನುಪರಿಗಣಿಸಲಾಗಿದೆ.ಮಾನ್ಯ ರಾಷ್ಟ್ರಪತಿಗಳಿಂದ ಸದರಿ ಕಾಯ್ದೆಯ ಜಾರಿಯ ಹೊಣೆಗಾರಿಕೆಯ ಅಧಿಕಾರ ಪಡೆದ ಕರ್ನಾಟಕ ರಾಜ್ಯಪಾಲರು ಕಾಯ್ದೆಯ ಅನುಷ್ಠಾನಕ್ಕಾಗಿ ಸಂಪುಟ ಉಪಸಮಿತಿ ರಚನೆಗೆ ಅವಕಾಶ ನೀಡಿರುತ್ತಾರೆ.

ಸಂಪುಟ ಉಪಸಮಿತಿಗೆ ಆಡಳಿತಾತ್ಮಕ ಸಹಾಯಕ್ಕಾಗಿ ಜಂಟಿ ಕಾರ್ಯದರ್ಶಿಗಳಿರುತ್ತಾರೆ. ಸಂಪುಟ ಉಪಸಮಿತಿಯಿಂದ ನಿಯಮಗಳು ರಚನೆಯಾಗುತ್ತವೆ. ಪ್ರಸ್ತುತ ಕರ್ನಾಟಕದಲ್ಲಿ ಜಾರಿಯಲ್ಲಿರುವ ಬಡ್ತಿ ಪ್ರಕ್ರೀಯೆಗಳನ್ನು ಗಮನಿಸಿದಾಗ ಸ್ಥಳೀಯ ಹೈದರಾಬಾದ್ ಕರ್ನಾಟಕ ಪ್ರದೇಶದ ನೌಕರರಿಗೆ ಬಡ್ತಿಯಲ್ಲಿ ಘೋರ ಅನ್ಯಾಯವಾಗುತ್ತಿರುವದು ಕಂಡು ಬರುತ್ತದೆ. ಕಾರಣವೇನಂದರೆ. ಕಾನೂನು ಬಾಧ್ಯಸ್ಥರಾದ ಹೈ.ಕ. ಪ್ರದೇಶದ ನೌಕರರಿಗೆ ಮೀಸಲಾತಿ ಕೊಡುವದರ ಜೊತೆಗೆ ಸಂಸತ್ತಿನ ಕಾಯ್ದೆಯ ಮೂಲ ಆಶಯಕ್ಕೆ ವಿರುದ್ಧವಾಗಿ ತಪ್ಪು ನಿಯಮಾವಳಿ ರೂಪಿಸಿ ಹೈದರಾಬಾದ್ ಕರ್ನಾಟಕೇತರ ಪ್ರದೇಶದ ನೌಕರರಿಗೂ ಮೀಸಲಾತಿ ಕೊಡಲಾಗುತ್ತಿದೆ. ಹೀಗಾಗಿ ಸೇವೆಯಲ್ಲಿ ಎಂಟತ್ತು ವರ್ಷ ಕಿರಿಯರಿದ್ದರೂ ಇತರೆ ವಿಭಾಗದ ನೌಕರರು ಹೈ.ಕ. ಭಾಗದವರಿಗಿಂತ ಮೊದಲು ಮುಂಬಡ್ತಿ ಪಡೆಯತ್ತಿದ್ದಾರೆ. ಸಂಪುಟ ಉಪಸಮಿತಿಯಲ್ಲಿರುವ ಈ ಭಾಗದ ಮಂತ್ರಿಗಳು ಇಷ್ಟೆಲ್ಲ ಅನ್ಯಾಯ ಈ ಭಾಗದ ನೌಕರರಿಗೆ ಆಗುತ್ತಿದ್ದರೂ ನಿಷ್ಕಾಳಜಿ ತೋರಿದ ಪ್ರಯುಕ್ತ ಅನ್ಯಾಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯಾವ ಪ್ರದೇಶದ ಜನತೆ ಮತ್ತು ನೌಕರರ ಹಿತಾಸಕ್ತಿ ಕಾಯಬೇಕೋ ಅದೇ ಕಾಯ್ದೆಯ ಅಡಿ ಸ್ಥಳೀಯ ನೌಕರರಿಗೆ ಅನ್ಯಾಯವಾಗುತ್ತಿರುವದು ಮತ್ತೊಮ್ಮೆ  ಹೈ.ಕ. ಭಾಗಕ್ಕೆ ಗ್ರಹಣ ಹಿಡಿದಂತಾಗಿದೆ.

371 ಜೆ ಅನುಷ್ಠಾನಗೊಳಿಸುವಲ್ಲಿ ತಲೆದೋರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸಂಪುಟ ಉಪಸಮಿಗೆ ಅಧಿಕಾರವಿದ್ದರೂ ಈ ಭಾಗದ ನೌಕರ ಸಂಘಟನೆಗಳು ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಆರು ವರ್ಷಗಳಿಂದ ಸಂಪುಟ ಉಪಸಮಿತಿಯವರು ಅನ್ಯಾಯ ಮುಂದುವರೆಯಲು ಬಿಟ್ಟದ್ದು ದುರ್ದೈವವೇ ಸರಿ!

ನೇಮಖಾತಿಯಲ್ಲಿ ಹೈ.ಕ.ಭಾಗದ ಸ್ಥಳೀಯರನ್ನು ಮೀಸಲು ಪ್ರಮಾಣಕ್ಕೆ ಮಿತಿಗೊಳಿಸದೇ ಉಳಿದ ಪ್ರತಿಶತ ಪ್ರಮಾಣವನ್ನು ಸಾಮನ್ಯ ಹುದ್ದೆಗಳೆಂದು  ಪರಿಗಣಿಸಿದ ಪ್ರಯುಕ್ತ ಸ್ಥಳೀಯರಿಗೆ ಮೀಸಲು ಹುದ್ದೆ ಮತ್ತು ಸಾಮಾನ್ಯ ಹುದ್ದೆ ಎರಡರಲ್ಲೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ ನೇಮಕಾತಿ ರೀತಿಯಲ್ಲಿ ಮುಂಬಡ್ತಿ ನೀಡದೇ  ಸಾಮಾನ್ಯ ಹುದ್ದೆಗಳನ್ನು ಸ್ಥಳೀಯರಲ್ಲದ ಇತರೆ ವಿಭಾಗದ ನೌಕರರಿಗೆ  ಮೀಸಲು ಹುದ್ದೆಗಳಾಗಿ ಕೊಡುತ್ತಿರುವದರಿಂದ ಘೋರ ಅನ್ಯಾಯಕ್ಕೆ ಕಾರಣವಾಗಿದೆ.

ಪ್ರಸ್ತುತ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಯಿಂದ ಮುಖ್ಯೋಪಧ್ಯಾಯರ ಹುದ್ದೆಗಳಿಗೆ ನೀಡುತ್ತಿರುವ ಮುಂಬಡ್ತಿ ಪ್ರಕ್ರಿಯೆಯನ್ನು ಪರಿಶೀಲಿಸಲಾಗಿ ಒಟ್ಟು 363 ಹುದ್ದೆಗಳಲ್ಲಿ 178 ಹುದ್ದೆಗಳು ಸ್ಥಳೀಯರಲ್ಲದ ಇತರೆ ವಿಭಾಗದವರಿಗೆ ಮೀಸಲಾಗಿ ನೀಡಲಾಗುತ್ತಿದೆ. ಪರಿಣಾಮವಾಗಿ ಎಂಟು ವರ್ಷಗಳ ಜೂನಿಯರ್ಸ್ ಗಳು ಸ್ಥಳೀಯ ಕಾನೂನು ಬಾಧ್ಯಸ್ಥ  ನೌಕರರಿಗಿಂತ ಮುಂಚೆ ಮುಂಬಡ್ತಿ ಪಡೆಯುತ್ತಿದ್ದಾರೆ. ಇದೇ ರೀತಿಯಾಗಿ  ಬೇರೆ ಎಲ್ಲ ಇಲಾಖೆಗಳಲ್ಲೂ  ಸ್ಥಳೀಯ  ಹೈದರಾಬಾದ್ ಕರ್ನಾಟಕ ಪ್ರದೇಶದ ನೌಕರರಿಗೆ ವಂಚನೆಯಾಗುತ್ತಿದೆ.

ಕೇವಲ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಮಂಡಳಿಯ ಅನುದಾನದ ಮೇಲೆ ಮಮತೆತೋರುವ ನಮ್ಮ ನಾಯಕರು ಈ ಭಾಗದ ನೌಕಕರರ ಪ್ರಾಣ ಸಂಕಟದತ್ತಚಿತ್ತ ಹರಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿದೆ ಎಂದು ನೌಕರ ಸಂಘಟನೆಗಳು ಅಲವತ್ತುಕೊಳ್ಳುತ್ತಿವೆ.

emedialine

Recent Posts

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

49 mins ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

7 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

8 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

8 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

19 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

19 hours ago