ಕಾರ್ಮಿಕರ ಮೇಲೆ ಕೇಂದ್ರ ಸರಕಾರ ಗದಾ ಪ್ರಹಾರ: ತೋಟದಮನಿ

0
49

ಸುರಪುರ: ಕೇಂದ್ರ ಸರಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದು ಕಾರ್ಮಿಕರ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಲಾಲ್ ತೋಟದಮನಿ ಮಾತನಾಡಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯುನಿಯನ್ (ಸಿಐಟಿಯು) ತಾಲ್ಲೂಕು ಸಮಾವೇಶ ಹಾಗು ತಾಲ್ಲೂಕು ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಈಗಾಗಲೆ ಆರ್ಥಿಕ ಕುಸಿತದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ.ಈಗ ಐ.ಸಿ.ಡಿ.ಸಿ ಯೋಜನೆಯ ಹಣವನ್ನು ಹಿಂತೆಗೆದುಕೊಳ್ಳಲು ನಿಂತಿದೆ,ಇದರಿಂದ ಕಾರ್ಮಿಕ ಮೇಲಿನ ಕೇಂದ್ರ ಕಾಳಜಿ ಎಂತದ್ದು ಎಂಬುದು ಅರ್ಥವಾಗುತ್ತದೆ.ಆದ್ದರಿಂದ ಎಲ್ಲಾ ಕಾರ್ಮಿಕರು ಒಂದಾಗಿ ಕೇಂದ್ರಕ್ಕೆ ಬುದ್ಧಿ ಕಲಿಸದಿದ್ದಲ್ಲಿ ಮುಂಬರುವ ದಿನಗಳು ತುಂಬಾ ಘೋರವಾಗಿರಲಿವೆ ಎಂದು ಆಕ್ರೋಶದಿಂದ ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ವೈಜ್ಞಾನಿಕ ದೃಷ್ಟಿಕೋನವಿಲ್ಲದ ಕೇಂದ್ರದ ಆರ್ಥೀಕ ನೀತಿಯಿಂದಾಗಿ ನಿತ್ಯ ಸಾವಿರಾರು ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ.ಜಿ.ಎಸ್.ಟಿಯಿಂದಾಗಿ ಎಲ್ಲಾ ವ್ಯಾಪಾರಸ್ಥರು ನಿತ್ಯವು ನರಕ ಅನುಭವಿಸುವಂತಾಗಿದೆ. ರೈತರಿಗೆ ಯಾವುದೆ ಸಹಾಯವಿಲ್ಲದೆ ಒಣ ಘೋಷಣೆಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ.ಅಲ್ಲದೆ ದೇಶದ ನಾನಾ ಭಾಗಗಳಲ್ಲಿ ಅತಿವೃಷ್ಠಿ ಅನಾವೃಷ್ಟಿಯಿಂದ ರೈತರು ಮತ್ತು ಕಾರ್ಮಿಕರು ಸಂಕಷ್ಟ ಹೆದರಿಸುವಂತಾಗಿದೆ.ಆದರೆ ಕೇಂದ್ರ ಇದ್ಯಾವುದಕ್ಕೂ ಸ್ಪಂಧಿಸದೆ ನಿರ್ಲಕ್ಷ್ಯ ತೋರಿದೆ.ರಾಜ್ಯದಲ್ಲಿನ ನೆರೆಗೆ ನಯ್ಯಾ ಪೈಸೆ ಕೊಡದೆ ಜನರ ಜೀವಮನದ ಜೊತೆ ಚೆಲ್ಲಾಟವಾಡುತ್ತಿದೆ.ಆದ್ದರಿಂದ ಇಂತಹ ಕೆಟ್ಟ ನೀತಿಯುಳ್ಳ ಸರಕಾರಗಳಿಗೆ ಬುದ್ಧಿ ಕಲಿಸಲು ತಾವೆಲ್ಲರು ಒಗ್ಗಾಟಾಗುವ ಅವಶ್ಯವಿದೆ ಎಂದರು.

ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಪ್ರಕಾಶ ಆಲ್ಹಾಳ,ಜಿಲ್ಲಾ ಉಪಾಧ್ಯಕ್ಷೆ ಬಸವಲಿಂಗಮ್ಮ ಮಾತನಾಡಿದರು.ನಂತರ ತಾಲ್ಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಪದಾಧಿಕಾರಿಗಳು ಬಸ್ಸಮ್ಮ ಆಲ್ಹಾಳ ತಾಲ್ಲುಕು ಸಂಚಾಲಕಿ, ಕಾರ್ಯಕಾರಿ ಸಮಿತಿ ಸಂಚಾಲಕ ಬಸವರಾಜ ದೊರೆ,ಶರೀಫ್‌ಸಾಬ ಅಗ್ನಿ,ಜಯಶ್ರೀ ಪತ್ತಾರ, ರಾಧಾಬಾಯಿ ಲಕ್ಷ್ಮೀಪುರ,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ,ಬಸಮ್ಮ ದೊರೆ ತಾಲ್ಲೂಕು ಅಧ್ಯಕ್ಞೆ,ರಾಧಾ ಸುರಪುರ ಖಜಾಂಚಿ,ನಸೀಮಾ ಮುದ್ನೂರ ಜಿಲ್ಲಾ ಖಜಾಂಚಿ ಹಾಗು ಸಂಚಾಲನ ಸಮಿತಿಗೆ ಎಸ್.ಎನ್. ನಂದಿಕೋಲಮಠ,ಯಲ್ಲಪ್ಪ,ಯಮನಪ್ಪಗೌಡ,ಧರ್ಮಣ್ಣ,ಗೀತಾ ನಗನೂರು,ಸುವರ್ಣ ಕೆಂಭಾವಿ ಇವರನ್ನು ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here