ಸಂಚಲನ ಕವಿಗೋಷ್ಠಿ: ಚುರುಕಿನ ಚುಟುಕು ಸಾಹಿತ್ಯ ಚಿಗುರಲಿ: ಡಾ.ಮುಕ್ತುಂಬಿ

0
101

ವಾಡಿ: ಸೂಫಿ ಸಾಹಿತ್ಯ ಮತ್ತು ಘಜಲ್ ಸಾಹಿತ್ಯದ ಜತೆಗೆ ವ್ಯವಸ್ಥೆಗೆ ಚುರುಕು ಮುಟ್ಟಿಸಬಲ್ಲ ಚುಟುಕು ಸಾಹಿತ್ಯ ಯುವ ಪ್ರತಿಭೆಗಳಲ್ಲಿ ಚಿಗುರಬೇಕಿದೆ ಎಂದು ಸಾಹಿತಿ ಡಾ.ಮಕ್ತುಂಬಿ ಎಂ.ಬಾಲ್ಕಿ ಹೇಳಿದರು.

ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ರವಿವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಕವಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮನಸ್ಸುಗಳನ್ನು ಬೆಸೆದು ಸಮನ್ವಯದ ಬದುಕು ಕಟ್ಟಬಲ್ಲ ಸಾಹಿತ್ಯ ಹೆಚ್ಚು ರಚನೆಯಾಗಬೇಕು. ಸಾಮಾಜಿಕ ವ್ಯವಸ್ಥೆಯ ತಪ್ಪುಗಳ ತಲ್ಲಣವೇ ಕಾವ್ಯವಾಗಿ ಹೊರ ಹೊಮ್ಮುತ್ತದೆ. ಕಾವ್ಯ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ಯೋಧರ ಹೋರಾಟ, ಕಲುಷಿತ ಪರಿಸರ, ಹಸಿವು, ಅಸಮಾನತೆ, ಅನ್ಯಾಯಗಳನ್ನು ಪ್ರಶ್ನಿಸುವ ಕವನಗಳು ಮೂಡಿಬರಬೇಕು. ಜಾತ್ಯಾತೀತ ಜನರ ಐಕ್ಯತೆ ಮುರಿದು ಕೋಮು ಸಂಘರ್ಷ ಉಂಟುಮಾಡುವ ಸಾಹಿತ್ಯ ಅನಗತ್ಯ. ಕವಿತೆ ಚಿಕ್ಕದಾಗಿದ್ದರೂ Uಟ್ಟಿ ವಿಚಾರಗಳನ್ನು ಹೊಂದಿರಬೇಕು. ಪರಿಣಾಮಕಾರಿಯಾದ ಸಾಹಿತ್ಯ ಮಾತ್ರ ಸಮಾಜದಲ್ಲಿ ಬದಲಾವಣೆ ತರಬಲ್ಲದು ಎಂದು ವಿವರಿಸಿದರು.

Contact Your\'s Advertisement; 9902492681

ದ.ರಾ.ಬೇಂದ್ರೆ ಅವರ ಇಳಿದು ಬಾ ತಾಯಿ ಕವನ ವಾಚಿಸುವ ಮೂಲಕ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಜನರ ಕಣ್ಣೀರಿಗೆ ಸ್ಪಂದಿಸದ, ಹಿಂದುಳಿದ ಹಾಗೂ ಶೋಷಿತರ ಪರವಾಗಿಲ್ಲದ ಯಾವೂದೇ ಸಾಹಿತ್ಯವಿರಲಿ ಅದು ಸಾಹಿತ್ಯವೇ ಅಲ್ಲ. ಅಂತಹ ಸಾಹಿತ್ಯವನ್ನು ಬಿ.ಬಸವಲಿಂಗಪ್ಪನವರು ಬೂಸಾ ಸಾಹಿತ್ಯ ಎಂದು ಕರೆದರು. ತಪ್ಪುಗಳನ್ನು ಹೇಳಲೆಂದೇ ಭಂಡಾಯ ಸಾಹಿತ್ಯ ಹುಟ್ಟಿಕೊಂಡಿತು. ಇದು ಸಾಮಾಜಿಕ ಬದಲಾವಣೆಗೆ ಹೊಸ ಶಕ್ತಿಯೂ ನೀಡಿತು ಎಂದರು.
ಅತಿಥಿಯಾಗಿದ್ದ ಕವಯತ್ರಿ ಪರ್ವೀನ್ ಸುಲ್ತಾನಾ ಮಾತನಾಡಿ, ಕಾವ್ಯ ಕ್ರಾಂತಿಯ ತಾಯಿ. ಸೂಕ್ಷ್ಮ ಸಂವೇದನೆಯ ಸೃಜನಶೀಲ ಸೃಷ್ಠಿ. ಬದುಕಿನ ಅವಿಬಾಜ್ಯ ಅಂಗವೇ ಈ ಕಾವ್ಯ. ಮಹಿಳಾ ಸಂವೇದನೆ, ದಲಿತ ಸಂವೇದನೆ, ರೈತ ಸಂವೇದನೆ, ಪ್ರಗತಿಪರ ನವ್ಯ ಸಾಹಿತ್ಯ ಪ್ರವಾಹವಾಗಿ ಹರಿಯಬೇಕು ಎಂದು ಹೇಳಿದರು.

ಡಾ.ಮಲ್ಲಿನಾಥ ತಳವಾರ ಪ್ರಾಸ್ತಾವಿಕ ಮಾತನಾಡಿದರು. ಸಂಚಲನ ಸಾಹಿತ್ಯ ವೇದಿಕೆಯ ಸಂಘಟನಾ ಕಾರ್ಯದರ್ಶಿ ಸಿದ್ಧಯ್ಯಶಾಸ್ತ್ರೀ ನಂದೂರಮಠ ಅಧ್ಯಕ್ಷತೆ ವಹಿಸಿದ್ದರು. ಎಸಿಸಿ ಸುರಕ್ಷಾ ವಿಭಾಗದ ಮುಖ್ಯಸ್ಥ ಶ್ರೀಕಾಂತ ವಿ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೇರೂರ, ಕಾರ್ಯದರ್ಶಿ ವೀರಣ್ಣ ಯಾರಿ, ಉಪಾಧ್ಯಕ್ಷ ವಿಕ್ರಮ ನಿಂಬರ್ಗಾ ಪಾಲ್ಗೊಂಡಿದ್ದರು. ಖೇಮಲಿಂಗ ಬೆಳಮಗಿ ಸ್ವಾಗತಿಸಿದರು. ಮಲ್ಲಿಕಪಾಶಾ ಮೌಜನ್ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು.

ಸ್ವರಚಿತ ಕವನ ವಾಚಿಸಿದ ಪೂಜಾ ಭಂಕಲಗಿ, ಮಲ್ಲಿಕಾರ್ಜುನ ಮಧನಕರ, ಅಂಬಿಕಾ ಡಬಿಗೇರಾ, ಶಿವಲೀಲಾ ಧರ್ಮಾಪೂರ, ಕಾಶೀನಾಥ ಹಿಂದಿನಕೇರಿ, ರೇವಣಸಿದ್ದಯ್ಯ ವಲಂಡಿ, ದೇವಿಂದ್ರ ಕರದಳ್ಳಿ, ಗಂಗಣ್ಣ ಹೊಸೂರ, ಬಾಬುಮಿಯ್ಯಾ, ಬಸವರಾಜ ಕೊರಳ್ಳಿ, ಶ್ರವಣಕುಮಾರ ಮೌಸಲಗಿ, ಯಶ್ವಂತ ಧನ್ನೇಕರ, ಹೇಮಂತಕುಮಾರ ಬಿ.ಕೆ, ಚಂದ್ರು ಕರಣಿಕ, ರಾಜಶೇಖರ ಚೌರ, ವೀರಣ್ಣ ಯಾರಿ, ರವಿ ಕೋಳಕೂರ, ಮಲ್ಲೇಶ ನಾಟೀಕಾರ, ವಿಕ್ರಮ ನಿಂಬರ್ಗಾ ಮತ್ತಿತರರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here