ಕಲಬುರಗಿ: ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಹಿರಿಯ ಜೀವಿ ಬಸವರಾಜಪ್ಪ ಕಾಮರೆಡ್ಡಿ ಮತ್ತು ಗೌರಮ್ಮ ಬಸವರಾಜಪ್ಪ ಕಾಮರೆಡ್ಡಿ ಅವರ ಜನ್ಮದಿನದ ನಿಮಿತ್ತ ರಚಿಸಿದ ನನ್ನ ನಿಲುವು ಭಾಗ-೧, ಭಾಗ-೨ ಮತ್ತು ವಚನಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ ಕಾಮರೆಡ್ಡಿ ಪರಿವಾರದ ವತಿಯಿಂದ ಅವರ ಸುಪುತ್ರರಾದ ವೈದ್ಯ ಹಾಗೂ ಕರ್ನಾಟಕ ರಾಜ್ಯ ಅರ್ಥೋಪೆಡಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಶರಣಬಸಪ್ಪ ಕಾಮರೆಡ್ಡಿ ಮತ್ತು ಡಾ.ಪ್ರತಿಮಾ ಕಾಮರೆಡ್ಡಿ ಅವರ ನೇತೃತ್ವದಲ್ಲಿ ಬಹಳ ಅರ್ಥಪೂರ್ಣ ಸಮಾರಂಭ ಜರುಗಿತು.
ಕಾರ್ಯಕ್ರಮಕ್ಕೆ ಬಂದ ಗಣ್ಶರು ದಂಪತಿಗಳಿಗೆ ಶತಾಯುಷಿಗಳಾಗಲಿ ಮತ್ತು ಕಾಮರೆಡ್ಡಿ ಪರಿವಾರಕ್ಕೆ ಭಗವಂತನ ಕೃಪೆ ಸದಾ ಇರಲಿ ಎಂದು ಹಾರೈಸಿದರು. ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಅಭಿನವ್ ಸಿದ್ದಲಿಂಗ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ ಸಂಸ್ಥಾನ ಮುಗುಳು ನಾಗಾವಿ ಮತ್ತು ಷ.ಬ್ರ. ಶಾಂತ ಮಲ್ಲಿಕಾರ್ಜುನ ಶಿವಯೋಗಿ ಶಿವಾಚಾರ್ಯರು, ಹೆಡಗಿಮುದ್ರಾ ವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಡಾ.ಎ ಬಿ ಮಾಲಕರೆಡ್ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್, ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ್ ಪಾಟೀಲ್,ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ನೆಲೋಗಿ, ಬಿಜೆಪಿ ಯುವ ಮುಖಂಡ ಅರುಣರೆಡ್ಡಿ ಶಿವಪುರ ಭಾಗವಹಿಸಿದ್ದರು.
ಕೃತಿ ಪರಿಚಯವನ್ನು ವಿ.ಜಿ. ಮಹಿಳಾ ಕಾಲೇಜಿನ ಪ್ರಾಚಾರ್ಯ ಈಶ್ವರ ಮಠ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಜಿಲ್ಲಾ ಪಂಚಾಯತ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಎಚ್ಕೆಇ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಷನ್ ಸದಸ್ಯರು ರಾಜ್ಯದ ಖ್ಯಾತ ವೈದ್ಯರು, ಸಾಂಸ್ಕೃತಿಕ ಸಂಘಟಕರು ಸೇರಿದಂತೆ ಕಾಮರೆಡ್ಡಿ ಅವರ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.
ಡಾ.ಶರಣಬಸಪ್ಪ ಕಾಮರೆಡ್ಡಿ ಸ್ವಾಗತಿಸಿದರು. ಡಾ.ಪ್ರತಿಮಾ ಕಾಮರೆಡ್ಡಿ ವಂದಿಸಿದರು.