ಬಿಸಿ ಬಿಸಿ ಸುದ್ದಿ

ಜಿಮ್ಸ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ದಿಢೀರನೆ ಭೇಟಿ: ಸಮಸ್ಯೆ ಕುರಿತು ಚರ್ಚೆ

ಕಲಬುರಗಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಜಿಮ್ಸ್ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿ ಸಾರ್ವಜನಿಕರು ಕುಂದು ಕೊರತೆಗಳನ್ನು ಆಲಿಸಿದರು. ಅಲ್ಲಿನ ಸಮಸ್ಯೆಗಳು ಕೋಣೆಗಳ ಸಮಸ್ಯೆಗಳನ್ನು ನೀರಿನ ಸಮಸ್ಯೆ ಅಲ್ಲಿಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಂದ ಪಡೆದುಕೊಂಡರು.

ಬುಧುವಾರದಂದು ಜಿಮ್ಸ್ ಆಸ್ಪತ್ರೆಯಲ್ಲಿ ಭೇಟಿ ನೀಡಿ ಹೆರಿಗೆ ವಾರ್ಡಗೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಹೆಣ್ಣುಮಕ್ಕಳ ಭೇಟಿನೀಡಿ ಊಟದ  ಸಮಸ್ಯೆ. ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಹೆಣ್ಣುಮಕ್ಕಳು ಅಧ್ಯಕ್ಷರಿಗೆ ತಿಳಿಸಿದರು.

ಹೆರಿಗೆ ವಾರ್ಡನಲ್ಲಿ ಅನೇಕ ಹೆಣ್ಣು ಮಕ್ಕಳು ದಾಧಿಯರು  ಕುಡಿಯವ ನೀರು ಸರಿಯಾಗಿ ಯಾಕೆ ಪೂರೈಕೆ ಮಾಡುತ್ತಿಲ್ಲ ಜಿಮ್ಸ್ ನಿರ್ದೇಶಕರಿಗೆ ಡಾ. ಉಮೇಶ ರವರಿಗೆ ತರಾಟೆಗೆ ತೆಗೆದುಕೊಂಡರು  ನೀರು ಸರಿಯಾಗಿ ಪೂರೈಕೆಯಾಗಬೇಕು ಎಂದರು

ಜಿಮ್ಸ್ ನಿರ್ದೇಶಕ ಡಾ. ಉಮೇಶ ರವರು ಮಾತನಾಡಿ, ಕೆಲವು ದಿನಗಳ ಹಿಂದೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ನೀರು ಈಗಾಗಾಲೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಆಸ್ಪತ್ರೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಏನೆ ಇದ್ದರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದರು.

ಇದೇ ಸಂದರ್ಭದಲ್ಲಿ  ಮಹಾನಗರ ಪಾಲಿಕೆಯ ಸದಸ್ಯ ಹಾಗೂ ಜಿಲ್ಲಾ ಮಹಿಳಾ  ಅಧ್ಯಕ್ಷರಾದ ಲತಾ ರಾಠೋಡ್, ಮಹಾನಗರ ಪಾಲಿಕೆ ಸದಸ್ಯರಾದ ಜ್ಯೋತಿ ಮರಗಳ, ಸೇರಿದಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ  ಆರ್.ಸಿ.ಎಚ್. ಅಧಿಕಾರಿ ಡಾ. ಶರಣಪ್ಪ ಖ್ಯಾತನಾಳ, ಪ್ರಭಾರಿ ಜಿಲ್ಲಾ ಸರ್ಜನ್ ಪ್ರಕಾಶ ಅಂಬೂರೆ ಜಿಮ್ಸ್ ಮೆಡಿಕಲ್ ಕಾಲೇಜಿನ ಅಧೀಕ್ಷ ಡಾ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಯು. ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ವಿ. ಮಂಜುಳಾ, ರಾಜ್ಯ ಮಹಿಳಾ ನಿ¯ಯದ ಅಧೀಕ್ಷಕರಾದ ಅನುರಾದ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮ್ ಸೇರಿದಂತೆ ಸಾರ್ವಜನಿರು ಇತರರು ಇದ್ದರು.

ಗುಲಬರ್ಗಾ ವಿಶವಿದ್ಯಾಲಯಕ್ಕೆ ಭೇಟಿ:-ಅದೇ ರೀತಿಯಾಗಿ ಗುಲಬರ್ಗಾ  ವಿಶ್ವವಿದ್ಯಾಲಯ ಕುಲಪತಿ ಪ್ರೋ.ದಯಾನಂದ ಅಗಸರ್ ಅವರಿಗೆ ಭೇಟಿ ನೀಡಿ ವಸತಿ ನಿಲಯಗಳ ಮಾಹಿತಿ ಪಡೆದುಕೊಂಡರು ಈಗಾಗಲೇ ನಾಲ್ಕು ವಸತಿ ನಿ¯ಯಗಳಿವೆ ಒಟ್ಟು 360 ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.

ಕುಡಿಯವ ನೀರಿನ ವ್ಯವಸ್ಥೆ ಶೌಚಾಲಯ ಹಾಗೂ ವಿದ್ಯುಚ್ಫಕ್ತಿ ಕೊರತೆ ಹೆಣ್ಣು ಮಕ್ಕಳಿಗೆ ಸಿಗುವಂತಹ ಮೂಲಭೂತ ಸೌಕರ್ಯಗಳ ಕಲ್ಪಿಸಬೇಕು. ಈಗಾಗಲೆ ಅನೇಕ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟದ ವ್ಯವಸ್ಥೆ ಆಗುತ್ತಿಲ್ಲ ಎಂದು ಹೇಳಿದ್ದಾರೆ ಅದರ ಬಗ್ಗೆ ತಾವುಗಳು ಕ್ರಮತೆಗೆದುಕೊಳ್ಳಲು ತಿಳಿಸಿದರು.

ಹೆಣ್ಣು ಮಕ್ಕಳು ತಮ್ಮ ವಿಶ್ವವಿದ್ಯಾಲಯದ ಸಮಸ್ಯೆಗಳನ್ನು  ವಸತಿ. ನಿಲಯದ ಸಮಸ್ಯೆಯನ್ನು ರಾಜ್ಯ ಮಹಿಳಾ ಅಧ್ಯಕ್ಷರಿಗೆ ತಿಳಿಸಿದರು.

ನಾವುಗಳು 20 ವರ್ಷದಿಂದ ದುಡಿಯುತ್ತಿದ್ದರೂ. ಏಜೆನ್ಸಿಯವರು ಸರಿಯಾಗಿ ಸಂಬಳ ನೀಡುತ್ತಿಲ್ಲ ಕಡಿಮೆ ಸಂಬಳಕೊಡುತ್ತಿರುವುದರಿಂದ ಅನೇಕ ಕುಟುಂಬದ ಸಮಸ್ಯೆಗಳು ಎದುರಿಸುವಂತಹ ಪರಿಸ್ಥಿತಿ ಬಂದಿದೆ. ನಾವುಗಳು ಈಗಾಗಲೇ ನಮ್ಮ ವಯಸ್ಸು ಮುಗಿದಿದೆ ನಮ್ಮನ್ನು ಇಲ್ಲಿಯ ಮುಂದುವರಿಸಿ ಎಂದು  ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ  ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಕುಲಸಚಿವ ಮೇಧಾವಿ ಕಟ್ಟಿಮನಿ, ಅಧೀಕ್ಷರು ವಸತಿ ನಿಯಲಯದ ವಿದ್ಯಾರ್ಥಿಗಳು ಗ್ರೂಪ್ ಸಿ ಸಿಬ್ಬಂದಿಗಳು ಗ್ರೂಪ್.ಡಿ ಸಿಬ್ಬಂದಿಗಳು ಡಾಟ್ ಅಪರೇಟರ್‍ಗಳು ಸೇರಿದಂತೆ ಇತರರು ಇದ್ದರು.

emedialine

Recent Posts

ಮಹಿಳೆಯರನ್ನು ಗೌರವಿಸುವ ಶ್ರೀಮಂತ ಸಂಪ್ರದಾಯ ಹೊಂದಿರುವ ದೇಶ ಭಾರತ

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…

1 week ago

ನಿಧನ ವಾರ್ತೆ: ಭೀಮರಾವ.ಸಿ.ಸುಗೂರ

ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…

2 weeks ago

ನೆಲೋಗಿ ಬಿ.ಆರ್.ಅಂಬೇಡ್ಕರ ಭವನದಲ್ಲಿ ಛತ್ರಪತಿ ಶಿವಾಜಿಯ ಮಹಾರಾಜರ ಜನ್ಮ ದಿನಾಚರಣೆ

ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…

3 weeks ago

ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋರಾಟ ಅಗತ್ಯ: ಮೇಯರ್

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…

4 weeks ago

ಕಲಬುರಗಿ; 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಆಯೋಜನೆ

ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…

1 month ago

ಉಚಿತ ಆರೋಗ್ಯ ತಪಾಸಣೆ ಶಿಬಿರ

ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…

1 month ago