ಬಿಸಿ ಬಿಸಿ ಸುದ್ದಿ

ಅರಿವು ಯೋಜನೆಯಡಿ ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ನಗರ ಕೇಂದ್ರೀಯ ವಿಭಾಗದಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗದವರಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ನಿಗಮದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಅರಿವು ವಿಧ್ಯಾಭ್ಯಾಸ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಇ, ವಿಐಎ, ಸಿಇಟಿ/ ನೀಟ್ ಮುಖಾಂತರ ಎಂಬಿಬಿಎಸ್, ಬಿಡಿಎಸ್, ಆಯುಷ್, ಬ್ಯಾಚುಲರ್ ಆಫ್ ಆರ್ಚ್, ಇಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಫಾರ್ಮಸಿ, ಅಕ್ರಿಕಲ್ಚರ್ ಸೈನ್ಸ್, ವೆಟರಿನರಿ, ಫಾರ್ಮಾ ಸೈನ್ಸ್, ಎಲ್‍ಎಲ್‍ಬಿ ವ್ಯಾಸಂಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ “ಅರಿವು” ಯೋಜನೆಯಡಿಯಲ್ಲಿ ಶೈಕ್ಷಣಿಕ ಸಾಲವನ್ನು ಪಡೆಯಲು ಆನ್‍ಲೈನ್‍ನಲ್ಲಿ ನಿಗಮದ ಜಾಲತಾಣ http://kmdconline.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿದೆ.

ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‍ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿ ಪ್ರಿಂಟ್ ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಅಂಕಪಟ್ಟಿ, ಆಧಾರ್ ಕಾರ್ಡ್, ಪೋಷಕರು ಮತ್ತು ಅರ್ಜಿದಾರರ ಫೆÇೀಟೋ-05, ಸಿಇಟಿ ಹಾಲ್ ಟಿಕೆಟ್ ಪ್ರತಿ ಮತ್ತು ನೋಟರಿ ಮಾಡಿಸಿದ ಛಾಪಾ ಕಾಗದದಲ್ಲಿ ಇಂಡೆಮ್ನಿಟಿ ಬಾಂಡ್ ಈ ಎಲ್ಲಾ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತಿ(ನಿ) ಬೆಂಗಳೂರು ನಗರ ಕೇಂದ್ರಿಯ ಜಿಲ್ಲೆ ಕೊಠಡಿ ಸಂಖ್ಯೆ ಎಫ್ ಎಫ್- 29/37, 1ನೇ ಮಹಡಿ, ಹಮೀದ್ μÁ ಕಾಂಪ್ಲೆಕ್ಸ್, ಹಲಸೂರು ಗೇಟ್ ಪೆÇಲೀಸ್ ಠಾಣೆ ಹತ್ತಿರ, ಕಬ್ಬನ್ ಪೇಟೆ ಮುಖ್ಯರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 080-22114815ಗೆ ಮತ್ತು ಹೆಲ್ಪ್‍ಲೈನ್ ಸಂಖ್ಯೆ: 8277799990ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

51 mins ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

1 hour ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

1 hour ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

2 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

2 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

2 hours ago