ಬಿಸಿ ಬಿಸಿ ಸುದ್ದಿ

ಸಿಯುಕೆಯಲ್ಲಿ ‘ಡೆಕ್ಕನ್ನಿನ ಸೂಫಿ ಸಂಗೀತ ಮತ್ತು ಕಾವ್ಯ’ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ: “ವಿನಯ, ಉದಾರತೆ, ಪ್ರೀತಿ ಮತ್ತು ವಾತ್ಸಲ್ಯಗಳು ಸೂಫಿ ಸಂತರ ಪ್ರಮುಖ ಬೋಧನೆಗಳಾಗಿವೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರು ಸೂರ್ಯನಂತೆ ಉದಾತ್ತರಾಗಿರಿ, ಭೂಮಿಯಂತೆ ವಿನಮ್ರರಾಗಿರಿ ಮತ್ತು ನದಿಯಂತೆ ಉದಾರರಾಗಿರಿ ಎಂದು ಹೇಳುದ್ದಾರೆ” ಎಂದು ಅಮೆರಿಕದ ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದ ಪೆÇ್ರ. ಸ್ಕಾಟ್ ಕುಗಲ್ ಅವರು ಹೇಳಿದರು.

ಅವರು ನಿನ್ನೆ ಸಿಯುಕೆಯ ಮಾನವಿಕ ಮತ್ತು ಭಾμÁ ನಿಕಾಯವು ಆಯೋಜಿಸಿದ್ದ ʼಡೆಕ್ಕನ್ನಿನ ಸೂಫಿ ಸಂಗೀತ ಮತ್ತು ಕಾವ್ಯ’ ಕುರಿತು ವಿಶೇಷ ಉಪನ್ಯಾಸ ನಿಡಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಸೂಫಿ ಪರಂಪರೆ ಎಂಬುದು ಇಸ್ಲಾಂ ಧರ್ಮದಲ್ಲಿ ಕಂಡುಬರುವ ಧಾರ್ಮಿಕ ಆಚರಣೆಯ ಒಂದು ಪದ್ದತಿಯಾಗಿದೆ. ಇದು ಇಸ್ಲಾಮಿಕ್ ಶುದ್ಧೀಕರಣ, ಆಧ್ಯಾತ್ಮಿಕತೆ, ಧಾರ್ಮಿಕತೆ ಮತ್ತು ತಪಸ್ವಿಗಳ ಕುರಿತದ್ದಾಗಿದೆ. ಸೂಫಿ ಸಂತರು ದೇವರು ಮತ್ತು ಭಕ್ತನ ನಡುವಿನ ನಿಕಟ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ದೇವರನ್ನು ಆತ್ಮೀಯವಾಗಿ ಪ್ರೀತಿಸಬೇಕು ಎಂದು ಅವರು ಹೇಳುತ್ತಾರೆ.

ಖ್ವಾಜಾ ಬಂದಾ ನವಾಜ್ ಗೆಸುದರಾಜ್ ಅವರು ಆರಂಭಿಕ ದಖನಿ ಉರ್ದು ಸೂಫಿ ಸಂತರಲ್ಲಿ ಒಬ್ಬರಾಗಿದ್ದಾರೆ. ಅವರು ಕಾವ್ಯ ಮತ್ತು ಗದ್ಯ ಎರಡರಲ್ಲೂ ಸುಫಿ ಸಾಹಿತ್ಯವನ್ನು ಬರೆದ ಡೆಕ್ಕನ್ನಿನ (ದಕ್ಷಿಣ ಭಾರತದ) ಮೊದಲ ಸೂಫಿ ಸಂತರಾಗಿದ್ದಾರೆ. ನಂತರ ಅನೇಕ ಡೆಕ್ಕನ್ ಸೂಫಿಗಳು ಅವರನ್ನು ಅನುಸರಿಸಿದರು. ದಖನಿ ಉರ್ದು ಆಧುನಿಕ ಉರ್ದುಗಿಂತ ಭಿನ್ನವಾಗಿದೆ.

ಸೂಫಿ ಸಂತರು ತಮ್ಮ ಬರಹಗಳನ್ನು ಸ್ಥಳೀಯ ಭಾμÉ, ಕಾವ್ಯ ಮತ್ತು ಸಂಗೀತಕ್ಕೆ ಅನುಗುಣವಾಗಿ ಅಳವಡಿಸಿಕೊಂಡರು. ಆದ್ದರಿಂದ ನಾವು ಖ್ವಾಜಾ ಬಂದಾ ನವಾಜರ ಬರಹಗಳನ್ನು ಗದ್ಯ ಮತ್ತು ಕಾವ್ಯದ ರೂಪದಲ್ಲಿ ನೋಡುತ್ತೇವೆ, ಆದರೆ ಉತ್ತರ ಭಾರತದ ಅನೇಕ ಸೂಫಿಗಳು ಕಾವ್ಯ ರೂಪದಲ್ಲಿ ಮಾತ್ರ ಬರೆದಿದ್ದಾರೆ. ಆ ಕಾಲದಲ್ಲಿ ಕನ್ನಡ ಸಾಹಿತ್ಯದಲ್ಲಿ ಗದ್ಯದ ಪ್ರಾಬಲ್ಯವೇ ಇದಕ್ಕೆ ಕಾರಣವಿರಬಹುದು. ಅಂದಿನ ಉತ್ತರ ಕರ್ನಾಟಕದಲ್ಲಿದ್ದ ಶಿವಶರಣರ ಸಾಹಿತ್ಯ ಮತ್ತು ಅವರು ತತ್ವಗಳು ಸೂಫಿ ಸಂತರ ಬರವಣಿಗೆಗಳ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದೆ. ಅಂದಿನ ಭಾರತೀಯ ಸಮಾಜದಲ್ಲಿ ಸೂಫಿಸಂ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಪರ್ಷಿಯನ್ ಅಂತರರಾಷ್ಟ್ರೀಯ ಮತ್ತು ಆಡಳಿತ ಭಾμÉಯಾಗಿತ್ತು. ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ಕಷ್ಟಕರವಾಗಿತ್ತು.

ಹಾಗಾಗಿ ಸ್ಥಳೀಯ ಭಾμÉಗಳಿಗೆ ಹೊಂದಿಕೊಳ್ಳಲು ಆರಂಭಿಸಿದರು. ಆದ್ದರಿಂದ ಸೂಫಿ ಸಾಹಿತ್ಯವನ್ನು ಡೆಕ್ಕನ್ನಿನ ಉರ್ದು, ಗುಜಿರಿ, ಹಿಂದಾಲಿ ಮತ್ತು ಉರ್ದು ಮತ್ತು ಪರ್ಷಿಯನ್ ಭಾμÉ ಮತ್ತು ಇತರ ಹಲವು ಸ್ಥಳೀಯ ಭಾμÉಗಳಲ್ಲಿ ರಚಿಸಲಾಗಿದೆ. ಸೂಫಿ ಸಂತ ಶಹಭಜನ್ ಮಹಾನ್ ಸಂಗೀತಗಾರರಾಗಿದ್ದರು. ಅವರ ಕವಿತೆಗಳು ತುಂಬಾ ಸಂಗೀತಮಯವಾಗಿವೆ ಮತ್ತು ಅವುಗಳನ್ನು ಭಾರತೀಯ ರಾಗಗಳಲ್ಲಿ ಹಾಡಬೇಕು” ಎಂದು ಹೇಳಿದರು.

ಸೂಫಿ ಕವಿತೆಗಳ ರಚನೆಯ ಬಗ್ಗೆ ಮಾತನಾಡುತ್ತಾ ಅವರು ಹೇಳುತ್ತಾರೆ “ಸೂಫಿ ಕವಿತೆಗಳು ಹೆಚ್ಚು ಸರಳವಾಗಿವೆ, ಸಾಮಾನ್ಯ ಜನರು ಅರ್ಥಮಾಡಿಕೊಳ್ಳಲು ಸುಲಭವಾಗಿವೆ. ಇವು ಗಜಲ್ ಮತ್ತು ದೋಹೆಗಳಿಗಿಂತ ಸರಳ ಮತ್ತು ಸಡಿಲವಾದ ಆವೃತ್ತಿಗಳಾಗಿವೆ. ಇಂದು ಅವುಗಳನ್ನು ಉರುಸ್, ಕುಟುಂಬ ಸಮಾರಂಭಗಳು ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳಂತಹ ವಿವಿಧ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಸೂಫಿ ಕವಿತೆಗಳಲ್ಲಿ ಕವಿಯ ಸ್ಥಾನವು ಸ್ಥಿರವಾಗಿಲ್ಲ. ಇದು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಅದು ದೇವರು ಮತ್ತು ಭಕ್ತನ ಸಂಬಂಧ, ಪ್ರೇಮಿ ಮತ್ತು ಪ್ರೆಯಸಿಯ ಪಾತ್ರರಾಗಿರಬಹುದು. ಇದು ನಮ್ಮ ಅಹಂಕಾರವನ್ನು ಕರಗಿಸುವ ಉದ್ದೇಶವನ್ನು ಹೊಂದಿರುತ್ತದೆ. ಅವರು ತಮ್ಮನ್ನು ತಾವು ತಿಳಿದುಕೊಳ್ಳುವ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಯಾರು ತಮ್ಮನ್ನು ತಾವು ತಿಳಿದಿರುವರೋ ಅವರು ದೇವರನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಸೂಫಿ ಸಂಗೀತ ಮತ್ತು ಕಾವ್ಯದ ಕುರಿತು ಮಾತನಾಡಿದ ಅವರು “ಸೂಫಿ ಕಾವ್ಯವು ಸೂಫಿ ಸಂಗೀತದೊಂದಿಗೆ ಸಂಪರ್ಕ ಹೊಂದಿದೆ. ಕವಾಲಿ ಎಂಬುದು ಸೂಫಿ ಕವಿತೆಯ ಹಾಡಿನ ಒಂದು ರೂಪವಾಗಿದೆ. ಕಾಶ್ಮೀರಿ, ಬೆಂಗಾಲಿ, ಭವಾಲಿ ಸಂಪ್ರದಾಯಗಳಂತಹ ಕವ್ವಾಲಿಗಳ ವಿವಿಧ ರೂಪಗಳಿವೆ; ಭಾರತದಲ್ಲಿ ವಿವಿಧ ಪ್ರದೇಶಗಳು ತಮ್ಮದೇ ಆದ ಕವ್ವಾಲಿಗಳನ್ನು ಹೊಂದಿವೆ” ಎಂದು ಹೇಳಿದರು.

ಭಾರತದಲ್ಲಿ ಸೂಫಿ ಸಂಪ್ರದಾಯಗಳ ವಿನಿಮಯ ಮತ್ತು ಅವುಗಳ ಬೆಳವಣಿಗೆಯ ಕುರಿತು ಮಾತನಾಡುತ್ತಾ “ಖ್ವಾಜಾ ಬಂದಾ ನವಾಜರ ನಂತರ ದಖನ್‍ನಲ್ಲಿ ಸೂಫಿ ಸಂಪ್ರದಾಯವು ಮತ್ತಷ್ಟು ಅಭಿವೃದ್ಧಿ ಹೊಂದಿತು ಮತ್ತು ಶ್ರೀಮಂತವಾಯಿತು. ಉತ್ತರದ ಅನೇಕ ಸೂಫಿ ಸಂತರು ದಕ್ಷಿಣಕ್ಕೆ ಬಂದರು ಮತ್ತು ಅದೇ ರೀತಿ ದಕ್ಷಿಣದ ಸಂತರು ಉತ್ತರಕ್ಕೆ ಹೋದರು ಇದು ಮಿಶ್ರ ಸಂಪ್ರದಾಯದ ಹುಟ್ಟಿಗೆ ಕಾರಣವಾಯಿತು. ಮೊಘಲರ ಕಾಲದಲ್ಲಿ ಅದು ಉತ್ತುಂಗಕ್ಕೇರಿತು” ಎಂದು ಅವರು ಹೇಳಿದರು.

ಡೆಕ್ಕನ್ ಸೂಫಿ ಕಾವ್ಯ ಮತ್ತು ಸಂಗೀತ ಭಾರತದ ಇತರ ಭಾಗಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ “ಅವುಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ದೆಹಲಿಯ ಕವ್ವಾಲಿಯು ಮಹಮ್ಮದ್ ಬಿನ್ ತುಘಲಕನ ಅವಧಿಯಲ್ಲಿ ಡೆಕ್ಕನ್‍ಗೆ ಸ್ಥಳಾಂತರಗೊಂಡು ಇಲ್ಲಿ ಅಭಿವೃದ್ಧಿ ಹೊಂದಿತು. ಪರ್ಷಿಯನ್, ಅರೇಬಿಕ್ ಮತ್ತು ಉರ್ದುವಿನ ಕಲ್ಪನೆಗಳನ್ನೇ ಇವು ಹೋಲುತ್ತವೆ ಆದರೆ ಸ್ಥಳೀಯ ಭಾμÁ ಮತ್ತು ಭಾμÁ ವಾತಾವರಣದೊಂದಿಗೆ ರೂಪಾಂತರಗೊಂಡಿವೆ” ಎಂದರು.

ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ “ಅಮೆರಿಕದ ಪ್ರಾಧ್ಯಾಪಕರು ಡೆಕ್ಕನ್‍ನಲ್ಲಿ ತುಂಬಾ ಕೆಲಸ ಮಾಡುತ್ತಿದ್ದಾರೆ ಆದರೆ ನಾವು ನಮ್ಮ ಪ್ರದೇಶವನ್ನು ಮರೆತಿದ್ದೇವೆ. ಭವಿಷ್ಯದಲ್ಲಿ ಇದೇ ಪ್ರವೃತ್ತಿ ಮುಂದುವರಿದರೆ ನಾವು ನಮ್ಮ ಇತಿಹಾಸ ಮತ್ತು ಪರಂಪರೆಗಾಗಿ ವಿದೇಶಿ ಲೇಖಕರನ್ನು ಅವಲಂಬಿಸಬೇಕಾಗುತ್ತದೆ. ಸಂಶೋಧನೆಯಲ್ಲಿ ಅವರ ಬದ್ಧತೆ ಮತ್ತು ಸಮರ್ಪಣೆ ಶ್ಲಾಘನೀಯವಾಗಿದೆ ಮತ್ತು ನಮ್ಮ ಪ್ರಾಧ್ಯಾಪಕರಿಗೆ ಸ್ಪೂರ್ತಿದಾಯಕವಾಗಿದೆ” ಎಂದರು.

ಡಾ.ಕುಮಾರ್ ಮಂಗಲಂ ನಿರೂಪಿಸಿ ಸ್ವಾಗತಿಸಿದರು, ಡಾ.ಸ್ವಪ್ನಿಲ್ ಚಾಪೇಕರ್ ವಂದಿಸಿದರು. ಪೆÇ್ರ.ವಿಕ್ರಂ ವಿಸಾಜಿ, ಪೆÇ್ರ.ಶಿವಗಂಗಾ ರುಮ್ಮಾ, ಪೆÇ್ರ.ಬಸವರಾಜ ಡೋಣೂರ, ಪೆÇ್ರ.ಭೀಮರಾವ್ ಭೋಸ್ಲೆ, ಪೆÇ್ರ.ಸುನೀತಾ ಮಂಜನಬೈಲ್, ಆಹ್ವಾನಿತರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

2 hours ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

3 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

3 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

4 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

4 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

4 hours ago