ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಕಲಬುರಗಿ ಡೆಂಗ್ಯೂ ವಿರೋಧ ಮಾಸಾಚರಣೆ ೨೦೨೪ ಪ್ರತಿ ” ಶುಕ್ರವಾರ” ಡೆಂಗ್ಯೂ ನಿಯಂತ್ರಣ ಅಭಿಯಾನ ಈಡಿಸ್ ಲಾರ್ವಾ ಸಮೀಕ್ಷೆ ಮತ್ತು ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡುವ ದಿನಾ ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಶುಕ್ರವಾರದಂದು ನಗರದ ಬಸ್ ಡಿಪೋ ನಂ. ೩ ಎದುರಗಡೆ ಡಾ.ಬಿ.ಆರ್. ಅಂಬೇಡ್ಕರ ಸಮುದಾಯ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಪ್ರತಿಯೊಂದು ಮನೆ ಮನೆಗಳಿಗೆ ಭೇಟಿ ನೀಡಿ ಬ್ಯಾರಲ್‌ನಲ್ಲಿರುವ ನೀರುಗಳನ್ನು ಪರಿಶೀಲಿಸಿದರು. ನೀರುಗಳನ್ನು ತೊಟ್ಟೆಯಲ್ಲಿ ಅಥವಾ ಬ್ಯಾರಲ್ ಇಡುವುದರಿಂದ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ ಇದು ಮನುಷ್ಯನಿಗೆ ಕಚ್ಚಿ ಡೆಂಗ್ಯೂಜ್ವರ ಬರುತ್ತವೆ. ಇದರಿಂದ ಸಾರ್ವಜನಿಕರು ಒಬ್ಬರಿಗೊಬ್ಬರ ಸಹಕರಿಸಬೇಕು. ಸಾರ್ವಜನಿಕರು ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಆಗಬೇಕು. ಮತ್ತು ಸಾರ್ವಜನಿಕರು ತಾವುಗಳು ಒಬ್ಬರಿಗೊಬ್ಬರಿಗೂ ಸಹಕರಿಸಿ ಡೆಂಗ್ಯೂ ರೋಗ ನಿಯಂತ್ರಣ ಇಡಬಹುದು ಎಂದರು.
ಸುತ್ತಮುತ್ತಲ್ಲಿ ನಾಲಿಗಳು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಮನೆ ಸುತ್ತಮುತ್ತ ಅಂಗಳ ವಾತಾವಾರಣ ಸ್ವಚ್ಫತೆ ಕಾಪಾಡಿಕೊಳ್ಳಬೇಕು. ಡ್ರಮ್ ಬ್ಯಾರಲ್‌ಗಳಲ್ಲಿ ನೀರು ಶೇಖರಣೆಯಾದ್ದಾಗ ಪ್ರತಿ ಒಂದ ವಾರಕ್ಕೆ ಒಂದು ಸಲ ಅದನ್ನು ತೊಳೆದು ಸ್ವಚತೆ ಮಾಡಿ ನೀರು ತುಂಬಬೇಕು. ಈ ರೋಗ ಸ್ವಚ್ಫತೆ ನೀರಿನಿಂದ ಹರಡುತ್ತದೆ. ಸೊಳ್ಳೆಗಳು ಕಚ್ಚಲಾರದಂತೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ನಿಂತ ನೀರಿನಲ್ಲಿ ಚಿಟಿಆಯ್/ಟೆಮಿಫಾಸ ಆಯಿಲ್ ಹಾಕಬೇಕು ಎಂದರು.
ಮನೆಯ ಹೆಣ್ಣು ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳು ಅವರು ಕುಂದು ಕೊರತೆಗಳು ಆಲಿಸಿದರು ಅವರಿಗೆ ನೀರಿನಿಂದ ಹರಡು ರೋಗದ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಡಿ.ಹೆಚ್.ಓ. ಡಾ. ರತಿಕಾಂತ ಸ್ವಾಮಿ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯುಂತ್ರಣಾಧಿಕಾರಿ ಡಾ. ಬಸವರಾಜ ಗೂಳಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ನಗರ ಆರೋಗ್ಯಾಧಿಕಾರಿ. ಡಾ.ಬಾಬುರಾವ ಚವ್ಹಾಣ, ಡಾ. ವೀಣಾ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ, ಹಿರಿಯ ಪ್ರಾಯೋಗ ಶಾಲೆ ತಾಂತ್ರಜ್ಞೆ ಅಧಿಕಾರಿ ಚಂದ್ರಕಾಂತ ಏರಿ ಸೇರಿದಂತೆ ಶಾಂತಾ ಕಾಶಪ್ಪ, ಗುಲಾಮ್ಮ್ ಹಾಗೂ ಸಾರ್ವಜನಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.