ಕಲಬುರಗಿ: ಗುರುಪೂರ್ಣಿಮಾ ಉತ್ಸವ-2024ರ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಸಹ ಜುಲೈ 21 ರಂದು ಭಾನುವಾರ ಮಾಹರಾಷ್ಟ್ರದ ಪುಣೆ ಜಿಲ್ಲೆಯ ದೌಂಡ ತಾಲೂಕಿನ ( ಸ್ವಾಮಿ ಚಿಂಚೊಳಿ) ಬಿಗ್ವಾನ್‍ಲ್ಲಿರುವ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ ಆಶ್ರಮದಲ್ಲಿ ದೇಶದ ಸರ್ವಧರ್ಮದ ಭಕ್ತರ ವತಿಯಿಂದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ 36 ನೇ ವರ್ಷದ ಗುರುವಂದನಾ ಕಾರ್ಯಕ್ರಮ ಶ್ರದ್ಧಾ- ಭಕ್ತಿಯೊಂದಿಗೆ ಹಮ್ಮಿಕೊಳ್ಳಲಾಗಿದೆ.
ಆ ದಿನ ಖ್ಯಾತ ಸಂಗಿತಕಾರರಿಂದ ಹಾಗೂ ಕಲಾವಿದರಿಂದ ದೇಶಭಕ್ತಿ ಸಂಗೀತ ಕಾರ್ಯಕ್ರಮ ಸೇರಿದಂತೆ ಅನೆಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು , ಈ ಒಂದು ಭಾವೈಕ್ಯತೆಯ ಗುರು ವಂದನಾ ಕಾರ್ಯಕ್ರಮಕ್ಕೆ ದೇಶದ ನಾನಾ ರಾಜ್ಯಗಳಿಂದ ಪುಜ್ಯರನ್ನು ಆರೈಧಿಸುವ ಸರ್ವ ಧರ್ಮದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಲಿದ್ದು, ಈಗಾಗಲೆ ಆಶ್ರಮದಲ್ಲಿ ಬರುವ ಭಕ್ತರಿಗೆ ಮಾಹಪ್ರಸಾದ, ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಸಮಸ್ತ ದೇಶ ಭಾಂಧವರಿಗೆ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ಆದರದ ಸ್ವಾಗತ ಕೋರಲಾಗಿದೆ ಎಂದು ಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ್ ಝಳಕಿ ಅವರು ತಿಳಿಸಿದ್ದಾರೆ.