ಪ್ರಸ್ತುತ ಕೃಷಿ ಚಟುವಟಿಕೆಗಳ ಕುರಿತು ಒಂದು ದಿನದ ಕಾರ್ಯಗಾರ

0
157

ಕಲಬುರಗಿ; ಕೃಷಿ ವಿಜ್ಞಾನ ಕೇಂದ್ರ,II (ರದ್ದೇವಾಡ್ಗಿ) ಯಲ್ಲಿ ಅಂತರ್ಜಾಲ ಮುಖಾಂತರ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತ್ತು.

ಈ ಕಾರ್ಯಗಾರದಲ್ಲಿ ಡಾ. ವಾಸುದೇವ ನಾಯ್ಕ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ಮೂಲ ಉದ್ದೇಶಗಳನ್ನು ವಿವರಿಸಿದರು.

Contact Your\'s Advertisement; 9902492681

ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಕಲಬುರಗಿ, ಸಮದ ಪಟೇಲ ರವರು ಉತ್ತಮ ಮುಂಗಾರಿನ ಪ್ರಾರಂಭ ಮತ್ತು ಈ ಕಾರ್ಯಗಾರವನ್ನು ಕುರಿತು ಮಾತನಾಡಿ ಹರ್ಷ ವ್ಯಕ್ತಪಡಿಸಿದರು.

ತದನಂತರ ಅನುಷಿಯಾ ಹೂಗಾರ, ಕೃಷಿ ಉಪ ನಿರ್ದೇಶಕರು (ಸೇಡಂ ವಿಭಗ) ರವರು, ಮುಂಗಾರು ಬೆಳೆಗಳಲ್ಲಿನ ಸಮಸ್ಯಗಳನ್ನು ಕುರಿತು ಸಂಕ್ಷಿಪ್ತ ವರದಿ ನಿಡಿದರು, ನಂತರದಲ್ಲಿ ಶೋಮಶೇಖರ ಬಿರಾದಾರ ಕೃಷಿ ಉಪ ನಿರ್ದೇಶಕರು (ಕಲಬರುಗಿ ವಿಭಾಗ) ರವರು ವಿಜ್ಞಾನಿಗಳ ಸಲಹೆ ಮೇರೆಗೆ ಸಮಯೋಚಿತ ಬೆಳೆ ನಿರ್ವಹಣೆಯನ್ನು ಕೈಗೊಳ್ಳಬೇಕೆಂದು ವಿನಂತಿಸಿದರು.

ಡಾ. ಯುಸುಫ ಅಲಿ ಮತ್ತು ಡಾ. ಮಲ್ಲಪ್ಪ ಬಿ ಬೇಸಾಯ ಶಸ್ತ್ರಜ್ಞರು ಮಾತನಾಡಿ ವಿವಿಧ ಪ್ರಸ್ತುತ ಮುಂಗಾರು ಬೆಳೆಗಳಲ್ಲಿನ ಸಮಸ್ಯಗಳಾದ ಕಳೆ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನಿಡಿದರು.

ಡಾ. ಚಂದ್ರಕಾಂತ (ಮಣ್ಣು ವಿಜ್ಞಾನಿ) ರವರು ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಮಳೆಯಾಗಿ ಕೃಷಿ ಕ್ಷೇತ್ರಗಳಲ್ಲಿ ನೀರು ನಿಂತಿರುವುದನ್ನು ಬಸುಗಾಲುವೆಗಳ ಮುಖಾಂತರ ಹೊರ ಹಾಕಲು ಸೂಚಿಸಿದರು. ಮುಂದುವರೆದು, ಡಾ. ಜಹೀರ ಅಹ್ಮದ ವಿಜ್ಞಾನಿ(ಸಸ್ಯರೋಗ ಶಾಸ್ತ್ರ) ರವರು ಪ್ರಸ್ತುತ ಮುಂಗಾರು ಬೆಳೆಗಳ ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ವಿವರಿಸಿದರು.

ಅಲ್ಲದೇ ಪ್ರಸ್ತುತ ತೋಟಗಾರಿಕೆ ಬೆಳೆಗಳ ನಿರ್ವಹಣಾ ಕ್ರಮಗಳನ್ನು ಡಾ. ಚೇತನ್ ಟಿ. ತೋಟಗಾರಿಕೆ ವಿಜ್ಞಾನಿಗಳು ಚರ್ಚಿಸಿದರು. ಕಾರ್ಯಗಾರದ ಕೊನೆಯಲ್ಲಿ  ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕರು, ಸೇಡಂ ರವರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡ ಎಲ್ಲಾ ವಿಸ್ತರಣಾ ಕಾರ್ಯಕರ್ತರು, ಕ್ಷೇತ್ರ ಸಿಬ್ಬಂದಿಗಳು ಮತ್ತು ಕೃಷಿ ಪರಿಕರ ಮಾರಾಟಗಾರರಿಗೆ ವಿಜ್ಞಾನಿಗಳ ಸಲಹೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿ ವಂದಿಸಿದರು.

ಅಂತರ್ಜಾಲ ಕಾರ್ಯಗಾರದ ತಾಂತ್ರಿಕ ವ್ಯವಸ್ಥೆಯನ್ನು ಶ್ರಿಮತಿ ಮನಿಷಾ, ತಾಂತ್ರಿಕ ಅಧಿಕಾರಿಗಳು, ಕೃಷಿ ಇಲಾಖೆ ಕಲಬುರಗಿ ಹಾಗೂ  ಸಂಜೀವಕುಮಾರ ಪಾಟೀಲ, ತಾಂತ್ರಿಕ ಅಧಿಕಾರಿ (ಗಣಕಯಂತ್ರ)  ನಿರ್ವಿಹಿಸಿದರು ಮತ್ತು ಈ ಕಾರ್ಯಗಾರದಲ್ಲಿ 102 ಹೆಚ್ಚು ಕ್ಷೇತ್ರ ಸಿಬ್ಬಂದಿ ಮತ್ತು  ಪರಿಕರಿ ಮಾರಾಟಗಾರರು ಸದುಪಯೋಗ ಪಡೆದುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here